ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಇಲಾಖೆಯು ರಾಷ್ಟ್ರದಾದ್ಯಂತ ಮೈ ಭಾರತ್ ಯೋಜನೆಯ ಅಡಿಯಲ್ಲಿ ಸ್ವಚ್ಛ ಭಾರತ್ ಮಿಷನ್
ಅಶ್ವಸೂರ್ಯ/ಶಿವಮೊಗ್ಗ: ಭಾರತ ಸರ್ಕಾರದ, ಯುವ ವ್ಯವಹಾರ ಮತ್ತು ಕ್ರೀಡಾ ಇಲಾಖೆಯು ರಾಷ್ಟ್ರದಾದ್ಯಂತ ಮೈ ಭಾರತ್ ಯೋಜನೆಯಡಿಯಲ್ಲಿ ಸ್ವಚ್ಛ ಭಾರತ್ ಮಿಷನ್- ನಯಾ ಸಂಕಲ್ಪದ, ಸ್ವಭಾವ್ ಸ್ವಚ್ಛತಾ, ಸಂಸ್ಕಾರ್ ಸ್ವಚ್ಛತೆ ಎಂಬ ಶೀರ್ಷಿಕೆಯಡಿಯಲ್ಲಿ ಅಕ್ಟೊಬರ್ 2 ರಂದು ಗಾಂಧಿ ಜಯಂತಿಯ ಪ್ರಯುಕ್ತ ಸೆಪ್ಟೆಂಬರ್ 17 ರಿಂದ 2ನೇ ಅಕ್ಟೋಬರ್ 2024 ವರೆಗೆ ಹಮ್ಮಿಕೊಳ್ಳಲಾಗಿದ್ದು,ಈ ಸಂದರ್ಭದಲ್ಲಿ ಜಿಲ್ಲಾಡಳಿತ, ಮಹಾನಗರಪಾಲಿಕೆ, ಜಿಲ್ಲಾ ಪಂಚಾಯತ್, ನೆಹರು ಯುವ ಕೇಂದ್ರ ಶಿವಮೊಗ್ಗ,ಪಶುವೈದ್ಯಕೀಯ ಮಹಾವಿದ್ಯಾಲಯ, ಕಟೀಲು ಅಶೋಕ್ ಪೈ ಸ್ಮಾರಕ ಕಾಲೇಜು, ನಂಜಪ್ಪ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಮತ್ತು ಅಲೈಡ್ ಹೆಲ್ತ್ ಸೈನ್ಸ್, ಶಿವಮೊಗ್ಗ, ಸರ್ಕಾರಿ ಮಹಿಳಾ ವಸತಿ ಪಾಲಿಟೆಕ್ನಿಕ್,ಗೋಪಾಳ, ಮಲೆನಾಡು ಕಲಾ ತಂಡ, ವಿವೇಕಾನಂದ ಯೂತ್ ಫೌಂಡೇಶನ್,ಶಿವಮೊಗ್ಗಇವರ ಸಹಯೋಗದೊಂದಿಗೆ ದಿನಾಂಕ 01.10.2024 ರಂದು” ಸ್ವಚ್ಛತ ಹೀ ಸೇವಾ ” ಕಾರ್ಯಕ್ರಮವನ್ನು ಗಾಡಿಕೊಪ್ಪದ ಆಲ್ಕೊಳ ಸರ್ಕಲ್ ನಲ್ಲಿ ಹಮ್ಮಿಕೊಂಡಿದ್ದು,
ಈ ಸ್ವಚ್ಛತಾ ಅಭಿಯಾನದಲ್ಲಿ ನಮ್ಮ ಶಿವಮೊಗ್ಗ ನಗರದ ಗೌರವಾನ್ವಿತ ಶಾಸಕರಾದ ಶ್ರೀ. ಚನ್ನಬಸಪ್ಪ ಎಸ್.ಎನ್. (ಚೆನ್ನಿ) . ರವರು ಭಾಗವಹಿಸಿ ಸ್ವಚ್ಚತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಹಾಗೂ ಸ್ವಚ್ಛತೆಯ ಬಗ್ಗೆ, ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಜವಬ್ದಾರಿ ಎಂದು ತಿಳಿಸಿದರು. ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಸುಮಾರು 250 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಆಲ್ಕೋಳ ಸರ್ಕಲ್ ನಿಂದ ನಂಜಪ್ಪ ಲೈಫ್ ಕೇರ್ ತನಕ ಮತ್ತು ಕಾಸ್ಮೋ ಕ್ಲಬ್ ನಿಂದ ನಂಜಪ್ಪ ಲೈಫ್ ಕೇರ್ ತನಕ ಎರಡು ತಂಡಗಳಾಗಿ ಸುಮಾರು 2.5 ಕೀ.ಮಿ ತನಕ ಅಭಿಯಾನವನ್ನು ನಡೆಸಲಾಯಿತು. ಈ ಅಭಿಯಾನದಲ್ಲಿ ನೆಹರು ಯುವ ಕೇಂದ್ರದ, ಜಿಲ್ಲಾ ಯುವ ಅಧಿಕಾರಿಯಾದ ಶ್ರೀ.ಉಲ್ಲಾಸ್ ಕೆ.ಟಿ.ಕೆ ಯವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಯುವಜನ ಮತ್ತು ಕ್ರೀಡಾ ಇಲಾಖೆಯ, ಸಹಾಯಕ ನಿರ್ದೇಶಕರಾದ, ಶ್ರೀ. ರೇಕ್ಯಾ ನಾಯಕ್, ಪಶುವೈದ್ಯಕೀಯ ಕಾಲೇಜಿನ ಎನ್. ಎಸ್. ಎಸ್. ಅಧಿಕಾರಿಗಳಾದ ಪ್ರೊ.ರವಿಕುಮಾರ್ ಮತ್ತು ಪ್ರೊ. ಯೋಗೇಶ್,ನಂಜಪ್ಪ ಫಿಸಿಯೋಥೆರಪಿ ಇನ್‌ಸ್ಟಿಟ್ಯೂಟ್ ಪ್ರಾಂಶುಪಾಲರಾದ ಶ್ರೀ. ರಾಜನ್, ಕಟೀಲು ಅಶೋಕ್ ಪೈ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ. ಸಂಧ್ಯಾಕಾವೇರಿಯವರು, NSS ಅಧಿಕಾರಿ ಡಾ. ಸುಗೀರ್ದಿ, ಸರ್ಕಾರಿ ಮಹಿಳಾ ವಸತಿ ಪಾಲಿಟೆಕ್ನಿಕ್ ಪ್ರಾಂಶುಪಾಲರಾದ ಶ್ರೀ. ಆರ್. ಸುನೀಲ್, NSS ಅಧಿಕಾರಿಯಾದ ಶ್ರೀಮತಿ. ಜ್ಯೋತಿ ಮತ್ತು ಸಿಬ್ಬಂದಿ ವರ್ಗದವರು, ಮಲೆನಾಡು ಕಲಾತಂಡದ ಅಧ್ಯಕ್ಷರಾದ ಶ್ರೀ. ಗಣೇಶ್ ಕೆಂಚನಾಲ್ ಮತ್ತು ತಂಡದ ಸದಸ್ಯರುಗಳು, ವಿವೇಕಾನಂದ ಯೂತ್ ಫೌಂಡೇಶನ್ ಸದಸ್ಯರುಗಳು, ಮತ್ತು ನೆಹರು ಯವ ಕೇಂದ್ರದ ಲೆಕ್ಕಾಧಿಕಾರಿಯಾದ ಶ್ರಿ. ರಮೇಶ್, ಸ್ವಯಂಸೇವಕರುಗಳು ಈ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.