ಯೋಗ ಕಲಿಯಲು ಬಂದ ವಿದೇಶಿ ವೈದ್ಯೆಯ ಅತ್ಯಾಚಾರ . ಯೋಗಗುರು ಅಂದರ್ !?
ಅಶ್ವಸೂರ್ಯ/ಶಿವಮೊಗ್ಗ; ಚಿಕ್ಕಮಗಳೂರಿನ ಯೋಗ ಆಶ್ರಮವೊಂದರಲ್ಲಿ ವಿದೇಶಿ ವೈದ್ಯೆಯೊಬ್ಬರ ಮೇಲೆ ಯೋಗ ಗುರುವೊಬ್ಬ ಅತ್ಯಾಚಾರ ನಡೆಸಿರುವ ಆರೋಪ ಕೇಳಿಬಂದಿದೆ. ವಿದೇಶಿ ಮಹಿಳೆ ನೀಡಿದ ದೂರಿನ ಮೇರೆಗೆ ಆರೋಪಿ ಯೋಗ ಗುರುವನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.! ವಿದೇಶಿ ಮಹಿಳೆಯಿಂದ 20 ಲಕ್ಷ ರೂಪಾಯಿಗಳನ್ನು ಪಡೆದಿರುವ ಆರೋಪವೂ ಆರೋಪಿಯ ಮೇಲಿದ್ದು ಹೆಣ್ಣನ್ನು ಮುಕ್ಕಿ ಆಕೆಯ ಹಣವನ್ನು ನುಂಗಿದ್ದಾನೆ ಎಂದು ಆತನ ಮೇಲೆ ದೂರು ದಾಖಲಿಸಲಾಗಿದೆ.
ಈ ಘಟನೆಯು ಚಿಕ್ಕಮಗಳೂರು ಜಿಲ್ಲೆಯಲ್ಲಿ ನೆಡೆದಿದ್ದು. ಯೋಗ ಕಲಿಯಲು ಬಂದ ವಿದೇಶಿ ವೈದ್ಯೆ ಮಹಿಳೆಯ ಮೇಲೆ ಯೋಗ ಗುರುವೇ ಅತ್ಯಾಚಾರ ನಡೆಸಿದ ಆಘಾತಕಾರಿ ಘಟನೆ ನಡೆದಿದೆ. ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿಯಲ್ಲಿರುವ ಯೋಗ ಆಶ್ರಮದಲ್ಲಿ ಈ ಕೃತ್ಯ ನಡೆದಿದೆ ಎಂದು ಕೇಳಿಬಂದಿದೆ. ಯೋಗಗುರುವಿನಿಂದ ಅತ್ಯಾಚಾರಕ್ಕೊಳಪಟ್ಟ ವಿದೇಶಿ ವೈದ್ಯೆಯ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದ್ದು ಬಂಧಿತ ಆರೋಪಿಯನ್ನು ಮಲ್ಲೇನಹಳ್ಳಿಯಲ್ಲಿ ಯೋಗ ಶಾಲೆ ನಡೆಸುತ್ತಿದ್ದ ಪ್ರದೀಪ್ ಉಲ್ಲಾಳ್ (53) ಎಂದು ಗುರುತಿಸಲಾಗಿದೆ.
ಯೋಗ ತರಬೇತಿಗೆಂದು ಕ್ಯಾಲಿಫೋರ್ನಿಯಾದಿಂದ ಮಹಿಳೆ ಬಂದಿದ್ದರು. 4 ವರ್ಷದಿಂದಲೂ ಯೋಗ ಗುರುವಿನ ಆಶ್ರಮದಲ್ಲಿದ್ದು, ಆತ್ಮೀಯವಾಗಿದ್ದರು. ಬೇರೆ ಮಹಿಳೆಯರ ಜೊತೆಯೂ ಗುರುವಿನ ಸಂಬಂಧ ತಿಳಿದು ವೈದ್ಯೆ ಗಲಾಟೆ ಮಾಡಿದ್ದಾಳೆ.
ವಿದೇಶಿ ಮಹಿಳೆಯಿಂದ ಯೋಗ ಗುರು 20 ಲಕ್ಷ ಹಣ ಪಡೆದಿರುವ ಆರೋಪವು ಇದೆ.! ಇದೇ ವಿಚಾರವಾಗಿ ಯೋಗ ಗುರು-ಕ್ಯಾಲಿಫೋರ್ನಿಯಾ ಮಹಿಳೆಗೂ ಜಗಳವಾಗಿದೆಯಂತೆ.? ಹೀಗಾಗಿ ವಿದೇಶಿ ವೈದ್ಯೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಹಿಳೆಯ ದೂರಿನ ಹಿನ್ನೆಲೆ ಯೋಗ ಗುರುವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಇನ್ನು ಗೂಗಲ್ ರಿವ್ಯೂನಲ್ಲಿ ಕೂಡ ಈ ಯೋಗ ಶಾಲೆ ಸುರಕ್ಷಿತವಲ್ಲ ಎಂದು ಮಹಿಳೆಯೊಬ್ಬರು ಬರೆದಿದ್ದಾರೆ. ಪ್ರದೀಪ್ ಉಲ್ಲಾಳ್ ಯೋಗ ಶಾಲೆಗೆ ಹಲವಾರು ವಿದೇಶಿಗರು ಬಂದು ಯೋಗ ಕಲಿತು ಹೋಗಿದ್ದಾರೆ. ಮತ್ತು ವಿದೇಶದಿಂದ ಹೆಚ್ಚು ಮಂದಿ ಯೋಗ ಕಲಿಯಲು ಬರುತ್ತಾರೆ ಎಂದು ತಿಳಿದುಬಂದಿದೆ.