ತೀರ್ಥಹಳ್ಳಿ ಜಯಚಾಮರಾಜೇಂದ್ರ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಗೆ ಕುರುವಳ್ಳಿ ನಾಗರಾಜ್ ಪೂಜಾರಿ ಸೇರಿದಂತೆ 8 ಮಂದಿಯ ಆಯ್ಕೆ ,
ಅಶ್ವಸೂರ್ಯ/ಶಿವಮೊಗ್ಗ: ಆಗಸ್ಟ್, 20ರ ಅನ್ವಯ ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಗೆ ಈ ಕೆಳಕಂಡವರನ್ನು ಅಧಿಕಾರೇತರ ಸದಸ್ಯರನ್ನಾಗಿ ಕೊಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಾಮ ನಿರ್ದೇಶಕರನ್ನಾಗಿ ಮಾಡಿ ಆದೇಶಿಸಿದೆ.
ಇವರಲ್ಲಿ ಪ್ರಮುಖರಾಗಿ ಆಯ್ಕೆ ಅದವರಲ್ಲಿ ಕಾಂಗ್ರೆಸ್ ಪಕ್ಷದ ಯುವ ರಾಜಕಾರಣಿ ಕುರುವಳ್ಳಿ ನಾಗರಾಜ್ ಕೂಡ ಒಬ್ಬರು .ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ತೀರ್ಥಹಳ್ಳಿ ತಾಲ್ಲೂಕು ಆರ್ಯ ಈಡಿಗರ ಸಂಘದ ನಿರ್ದೇಶಕರಾಗಿ ಜೋತೆಗೆ ರಾಜ್ಯ ಮಲೆನಾಡು ಪ್ರದೇಶ ಅಭಿವೃದ್ಧಿಯ ಅಧ್ಯಕ್ಷರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ ಆರ್ ಎಂ ಮಂಜುನಾಥಗೌಡ ಅವರ ಅಪ್ತ ಸಹಾಯಕರಾಗಿ ಕುರುವಳ್ಳಿ ನಾಗರಾಜ್ ಸೇವೆ ಸಲ್ಲಿಸುತ್ತಿದ್ದಾರೆ. ಇವರನ್ನು ತೀರ್ಥಹಳ್ಳಿಯ ಜಯಚಾಮರಾಜೇಂದ್ರ ಆಸ್ಪತ್ರೆಯ ಆರೊಗ್ಯ ರಕ್ಷಣಾ ಸಮಿತಿಯ ನಾಮ ನಿರ್ದೇಶನ ಸದಸ್ಯರಾಗಿ ಆಯ್ಕೆಮಾಡಿ ರಾಜ್ಯ ಸರ್ಕಾರ ಆದೇಶಿದೆ.ಇವರ ಜೋತೆಯಲ್ಲಿ ತೀರ್ಥಹಳ್ಳಿ ತಾಲ್ಲೂಕಿನ.
ಶ್ರೇಯಸ್ ರಾವ್ ಬಿನ್ ಸುರೇಶ್ ರಾವ್, ಸೀಬಿನಕೆರೆ. ಕಿಶೋರ ಬಿನ್ ಶಂಕರ, ಬಾಳೆಬೈಲು ಮತ್ತು ದೇವರಾಜ್ ಬಿನ್ ರಾಮನಾಯ್ಕ, ಮೇಲಿನಕೊಪ್ಪ , ವಾಸುದೇವ್ ಕಾಮತ್ ಬಿನ್ ರಾಮಕೃಷ್ಣ ಕಾಮತ್, ಕುಶಾವತಿ ಹಾಗೂ ವಿಶ್ವನಾಥ ಬಿನ್ ಶಿವಣ್ಣ, ಹಾರೋಗುಳಿಗೆ ,
ರಮೇಶ್ ನಾಯ್ಕ್ ಬಿನ್ ಅಪ್ಪುನಾಯ್ಕ್, ಕುವೆಂಪು ಲೇಔಟ್ ತೀರ್ಥಹಳ್ಳಿ,
ಪೂರ್ಣಿಮಾ ಶ್ರೀನಿವಾಸ್ ಬಿನ್ ಶ್ರೀನಿವಾಸ್, ಬಾಳೇಬೈಲು, ತೀರ್ಥಹಳ್ಳಿ ಇವರುಗಳನ್ನು ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಲಾಗಿದೆ. ಇವರೆಲ್ಲರ ಆಯ್ಕೆಗೆ ಕಾರಣರಾಗಿರುವ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಮಲೆನಾಡು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಆರ್ ಎಂ ಮಂಜುನಾಥ್ ಗೌಡ ಹಾಗೂ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಅವರಿಗೆ ನಾಮ ನಿರಶಕರು ಧನ್ಯವಾದಗಳನ್ನು ತಿಳಿಸುವುದರ ಮುಖಾಂತರ ಜಯಚಾಮರಾಜೇಂದ್ರ ಆಸ್ಪತ್ರೆಗೆ ಸರ್ಕಾರದಿಂದ ಬೇಕಾದ ಸವಲತ್ತುಗಳನ್ನು ಒದಗಿಸುವುದರ ಮುಖಾಂತರ ಸಾರ್ವಜನಿಕರ ಸೇವೆ ಮುಂದಾಗುತ್ತೇವೆ ಜೋತೆಗೆ ಜನಸ್ನೇಹಿ ಆಸ್ಪತ್ರೆಯನ್ನಾಗಿ ರೂಪುಗೋಳಿಸಲು ಶ್ರಮಿಸುತ್ತೇವೆ ಎಂದು ತಿಳಿಸಿದ್ದಾರೆ.