ಇನ್ಸ್ ಪೆಕ್ಟರ್ ಗಳ ವರ್ಗಾವಣೆ: ಶಿವಮೊಗ್ಗ ಜಿಲ್ಲೆಯ ಕುಂಸಿ ಪೋಲಿಸ್ ಠಾಣೆಗೆ ಖಡಕ್ ಇನ್ಸೆಕ್ಟರ್ ದೀಪಕ್ ಎಂ ಎಸ್ .
ಅಶ್ವಸೂರ್ಯ/ಶಿವಮೊಗ್ಗ: ರಾಜ್ಯ ಸರ್ಕಾರ ಪೊಲೀಸ್
ಇಲಾಖೆಯಲ್ಲಿ ಕೆಲವು ಬದಲಾವಣೆಯೊಂದಿಗೆ ಮತ್ತೊಮ್ಮೆ ವರ್ಗಾವಣೆ ಮಾಡಿದೆ. ಒಂದಷ್ಟು ಖಡಕ್ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ವರ್ಗಾವಣೆಯಲ್ಲಿ ಶಿವಮೊಗ್ಗ ಜಿಲ್ಲೆಯವರೆ ಅದ ಮತ್ತು ಈ ಹಿಂದೆ ಶಿವಮೊಗ್ಗ ನಗರದ ಕೋಟೆ ಪೋಲಿಸ್ ಠಾಣೆ ಮತ್ತು ತುಂಗಾನಗರ ಪೋಲಿಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ. ತಮ್ಮ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಪ್ರಕರಣವನ್ನು ಭೇದಿಸಿ. ಸಾರ್ವಜನಿಕ ವಲಯದಲ್ಲಿ ಸೈ ಎನ್ನಿಸಿಕೊಂಡಿದ್ದ ಇನ್ಸ್‌ಪೆಕ್ಟರ್ ದೀಪಕ್ ಎಂ ಎಸ್ ಅವರು ಹಾಲಿ ಸಿಎನ್ಎನ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ವರ್ಗಾವಣೆ ಗೊಂಡರು ಸ್ಥಳ ನಿಯೋಜನೆ ಮಾಡಿರಲಿಲ್ಲ.
ದಕ್ಷ ಅಧಿಕಾರಿ ಇನ್ಸ್‌ಪೆಕ್ಟರ್, ದೀಪಕ್ ಎಂ ಎಸ್
ಇದಿಗ ಬಂದ ಆದೇಶ ಪ್ರಕಾರ ದೀಪಕ್ ಎಂ ಎಸ್ ಅವರನ್ನು ಶಿವಮೊಗ್ಗ ಜಿಲ್ಲೆಯ ಕುಂಸಿ ಠಾಣೆಗೆ ವರ್ಗಾವಣೆಮಾಡಿ ಆದೇಶ ಮಾಡಿದೆ.
ಶಿವಮೊಗ್ಗ ಕಂಡ ಖಡಕ್ ಇನ್ಸ್‌ಪೆಕ್ಟರ್ ಗಳಲ್ಲಿ ಒಬ್ಬರಾದ ದೀಪಕ್ ಎಂ ಎಸ್ ಇವರನ್ನು ಮತ್ತೆ ನಮ್ಮ ಜಿಲ್ಲೆಯಲ್ಲೆ ಮುಂದುವರಿಸಿ ಅವರ ಪ್ರಾಮಾಣಿಕ ಸೇವೆಗೆ ಮತ್ತೊಮ್ಮೆ ಆವಕಾಶ ಮಾಡಿಕೊಟ್ಟಿದೆ. ಶಿವಮೊಗ್ಗ ಕಂಡ ಖಡಕ್ ಅಧಿಕಾರಿಗಳಲ್ಲಿ ದೀಪಕ್ ಎಂ ಎಸ್ ಕೂಡ ಒಬ್ಬರಾಗಿದ್ದಾರೆ. ತುಂಗಾನಗರ ಠಾಣೆ ಮತ್ತು ಕೋಟೆ ಪೋಲಿಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದ ದೀಪಕ್ ಅವರು ಕ್ರಿಮಿನಲ್ ಗಳನ್ನು ಮಟ್ಟಹಾಕುವಲ್ಲಿ ಯಶಸ್ವಿಯಾಗಿದ್ದಾರು. ಸಾಕಷ್ಟು ಪ್ರಕರಣವನ್ನು ಭೇದಿಸುವುದರ ಜೋತೆಗೆ ಆರೋಪಿಗಳಿಗೆ ಶಿಕ್ಷೆ ಕೊಡಿಸುವುದರಲ್ಲಿಯು ಯಶಸ್ವಿಯಾಗಿದ್ದಾರೆ. ಮತ್ತೊಮ್ಮೆ ಶಿವಮೊಗ್ಗ ನಗರದ ಕೂಗಳತೆ ದೂರದಲ್ಲಿರುವ ಕುಂಸಿ ಠಾಣೆಗೆ ಎಂಟ್ರಿಕೊಡುತ್ತಿದ್ದು ಈ ಠಾಣಾ ವ್ಯಾಪ್ತಿಯಲ್ಲಿ ಎತೇಚ್ಚವಾಗಿ ನೆಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಬಿಳಲಿದೆ ಎನ್ನುವುದು ನಮ್ಮೆಲ್ಲರ ಆಶಯವಾಗಿದೆ.