ದೆಹಲಿ: ಅನಾಮಧೇಯ ಮೃತದೇಹಗಳಿಗೆ ಸಂಪ್ರದಾಯದಂತೆ ಮುಕ್ತಿ ನೀಡುವ ಧೀರ ಮಹಿಳೆ ಪೂಜಾ ಶರ್ಮಾ.
ಇವಳು “ದೆವ್ವಗಳ ಒಡನಾಡಿ” ಶವಸಂಸ್ಕಾರದ ಮೈದಾನದಲ್ಲಿ ತಿರುಗಾಡುವ ಸೊಸೆ ನಮಗೆ ಬೇಡ”
ಅಶ್ವಸೂರ್ಯ/ಶಿವಮೊಗ್ಗ; ಇದು ಅವಳು ತನಗಾಗಿ ಕಲ್ಪಿಸಿಕೊಂಡ ಜೀವನವಲ್ಲ. ಮಧ್ಯಮ ವರ್ಗದ, ವಿದ್ಯಾವಂತ ಹುಡುಗಿಯಾಗಿದ್ದ ಪೂಜಾ ಶರ್ಮಾ ಇನ್ನೇನು ಮದುವೆಗೆ ಸಿದ್ಧರಾಗಿದ್ದರು,ಇನ್ನೂ ಗಂಡ ಮನೆ ಮಕ್ಕಳು ಎನ್ನುವ ಜೀವನದ ಶ್ರೇಷ್ಠ ಪಥಕ್ಕೆ ಸಿದ್ಧರಾಗಿದ್ದರು. ಆಕೆಯ ತಾಯಿ “ಸೂಕ್ತವಾದ ಹುಡುಗನನ್ನು” ನೋಡಿದ್ದರು ಅದರೆ ದುರದೃಷ್ಟವಶಾತ್ ಪೂಜಾ ಅವರ ತಾಯಿ 2019 ರಲ್ಲಿ ಮೆದುಳಿನ ರಕ್ತಸ್ರಾವದಿಂದ ಹಠಾತ್ತನೆ ಸಾವನ್ನಪ್ಪಿದ್ದರು. ಅದು ಮಗಳು ಶರ್ಮಾ ಮದುವೆಗೆ ಆಭರಣಗಳನ್ನು ಖರೀದಿಸುತ್ತಿದ್ದ ಸಂಧರ್ಭದಲ್ಲಿ.! ಈ ಘಟನೆಯ ಬೆನ್ನಿಗೆ ದೆಹಲಿಯ ಶಹದರಾದಲ್ಲಿರುವ ಅವರ ಮನೆಯ ಬಳಿ ಬೀದಿ ಜಗಳದಲ್ಲಿ ಪೂಜಾರ ಸಹೋದರ ರಾಮೇಶ್ವರನನ್ನು ಹತ್ಯೆಮಾಡಲಾಯಿತು.ಆತನಿಗೆ ಸುಮಾರು 30 ವರ್ಷ ವಯಸ್ಸಾಗಿತ್ತು. ಮನೆಯ ಜವಬ್ದಾರಿ ನಿಭಾಯಿಸಬೇಕಾದ ಅಣ್ಣನನ್ನು ಕಳೆದುಕೊಂಡ ಪೂಜಾ ದಿಕ್ಕು ತೋಚದಂತಾದರು.
ಬ್ರೈಟ್ ದಿ ಸೋಲ್ ಫೌಂಡೇಶನ್‌ನ ಸಂಸ್ಥಾಪಕಿ ಪೂಜಾ ಶರ್ಮಾ ಅವರು ತಮ್ಮ ಕನಸುಗಳನ್ನು ಬದಿಗೊತ್ತಿ ಸಹಾನುಭೂತಿ ಮತ್ತು ಸೇವೆಯ ದಾರಿದೀಪವಾಗಿದ್ದಾರೆ. ತನ್ನ ಬದುಕನ್ನು ಸಮಾಜಕ್ಕಾಗಿ ಸಮರ್ಪಣೆಮಾಡಿ ಈ ಮೂಲಕ ಅನಾಮಧೇಯ ಮೃತ ದೇಹಗಳಿಗೆ ಅಂತ್ಯಕ್ರಿಯೆಯ ಜೋತೆಗೆ ವಿಧಿ ವಿಧಾನಗಳನ್ನು ನಿರ್ವಹಿಸುವ ಗಂಭೀರ ಜವಾಬ್ದಾರಿಯನ್ನು ಪೂಜಾ ತೆಗೆದುಕೊಂಡಿದ್ದಾರೆ, ಪೂಜಾರ ತ್ಯಾಗದಿಂದ ಮೃತದೇಹಗಳು ಹಿಂದೂ ಸಂಪ್ರದಾಯದಂತೆ ಗೌರವಾನ್ವಿತ ವಿಧಿ ವಿದಾಯಗಳನ್ನು ಸ್ವೀಕರಿಸಿ ಮುಕ್ತಿಗೊಳ್ಳುತ್ತಿವೆ.
ಈ ಆಘಾತದಿಂದ ಪೂಜಾ ಮತ್ತು ಅವರ ತಂದೆಯನ್ನು ದುಃಖದಿಂದ ಬಳಲುವಂತೆ ಮಾಡಿತು. ಹಿಂದೂ ಸಂಪ್ರದಾಯದಂತೆ ಮಹಿಳೆಯರು ಅಂತ್ಯಕ್ರಿಯೆಯ ಅಂತಿಮ ವಿಧಿ ವಿಧಾನಗಳನ್ನು ಮಾಡುವುದಿಲ್ಲ. ಆದರೆ ಪೂಜಾಳಿಗೆ ಬೇರೆ ಆಯ್ಕೆಯೆ ಇರಲಿಲ್ಲ. ಸಹೋದರನ ಅಂತ್ಯಕ್ರಿಯೆಯನ್ನು ಸಹೋದರಿ ಪೂಜಾ ಶರ್ಮಾ ಅವರೆ ನೆರವೇರಿಸಿದರು.! ಅವರೆ ಹೇಳುವಂತೆ “ನಾನು ನನ್ನ ಸಹೋದರನ ಅಂತ್ಯಸಂಸ್ಕಾರ ಮಾಡಿದ ಕ್ಷಣ ಆತನ ಸಾವಿನ ಸಂಪೂರ್ಣ ದುಃಖದಿಂದ ಹೊರಬಂದೆ,! ನಾನು ಅವನ ಸುಟ್ಟ ಚಿತಾಭಸ್ಮವನ್ನು ನನ್ನ ಮುಖ ಮತ್ತು ಕೂದಲಿಗೆ ಹಚ್ಚಿಕೊಂಡೆ.! ಎಂದು ಅವರು ಹೇಳುತ್ತಾರೆ. ಬದುಕಿನ ಅ ಕೊನೆಯ ಕ್ಷಣ ಎಷ್ಟು ಮುಖ್ಯ ಎಂದು ಅಂದು ನನಿಗೆ ಅರಿವಾಯಿತು. ಅಂದೆ ನಾನು ನನ್ನ ಬದುಕಿನ ಪಥವನ್ನು ಬದಲಿಸಲು ನಿರ್ಧರಿಸಿದೆ. ಸಾಧ್ಯವಾದಷ್ಟು ಅನಾಮಧೇಯ ಮೃತ ಶವಗಳಿಗೆ ಗೌರವದ ವಿಧಾಯ ನೀಡಲು ತಿರ್ಮಾನಿಸಿದೆ. ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಎಚ್ಐವಿ ಕೌನ್ಸಿಲಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ನಾನು ಕೆಲಸವನ್ನು ಬಿಟ್ಟೆ. ಪೂಜಾ ಅವರು ತಿರ್ಮಾನಿಸಿದ್ದರು ಅನಾಮಧೇಯ ಮೃತ ದೇಹಗಳಿಗೆ ನಾನೆ ಮುಂದೆ ನಿಂತು ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲು ತಿರ್ಮಾನಿಸಿದ್ದಳು.
ಪೂಜಾ ಅವರು ಈ ಎಲ್ಲಾ ಕ್ರಿಯೆಗಳಿಗಾಗಿ ಸುಮಾರು 1,20,000 ರೂಪಾಯಿಗಳ ವೆಚ್ಚದ ಹಣವನ್ನು ಸಂಗ್ರಹಿಸಲು ಮುಂದಾದರು. ಕಾರಣ ಅನಾಮಧೇಯ ಮೃತ ದೇಹಗಳನ್ನು ಸಂಗ್ರಹಿಸಿ ತೆಗೆದುಕೊಂಡು ಬರಲು ಆಂಬುಲೆನ್ಸ್ ಅವಶ್ಯಕತೆ ಇತ್ತು. ಇದನ್ನು ಖರೀದಿಸಲು ಮೊದಲು ಶರ್ಮಾ ಅವರ ಬೆನ್ನಿಗೆ ನಿಂತವರು ಆಕೆಯ ತಂದೆ ದೆಹಲಿ ಮೆಟ್ರೋದಲ್ಲಿ ಚಾಲಕನಾಗಿ ಕರ್ತವ್ಯದಲ್ಲಿದ್ದ ಅವರು ಸಂಬಳದ ಹಣವನ್ನು ಮಗಳಿಗೆ ಕೊಡುಗೆಯಾಗಿ ನೀಡಿದ್ದರು. ಮತ್ತು ಶರ್ಮಾರ ಅಜ್ಜಿ ತನಗೆ ಬರುತ್ತಿದ್ದ ಮೃತ ಸೈನಿಕನ ಗಂಡನ ಹೆಂಡತಿಯಾಗಿ ಪಿಂಚಣಿ ಪಡೆಯುತ್ತಿದ್ದ ಅವರು ಮೊಮ್ಮಗಳಿಗೆ ಸಹಾಯ ಮಾಡಲು ಮುಂದಾದರು.
ಈ ನಡುವೆ ಪೂಜಾರಿಗೆ ನಿಶ್ಚಿತವಾಗಿದ್ದ ವರನ ಕುಟುಂಬವು ಅವಳ ಕೆಲಸದ ಬಗ್ಗೆ ಕೇಳಿದಾಗ, ಅವಳನ್ನು ಸೊಸೆಯಾಗಿ ಮನೆ ತುಂಬಿಸಿಕೊಳ್ಳಲು ನಿರಾಕರಿಸಿ ಮದುವೆಯನ್ನು ರದ್ದುಗೊಳಿಸಿದರು, ಮದುವೆ ಮುಗಿದೆ ಹೊಗುತ್ತಿತ್ತೇನೊ ಅದೆ ಸಂಧರ್ಭದಲ್ಲಿ ತಾಯಿ ತಿರಿಹೊದರು ಜೋತೆ ಕೋವಿಡ್ ಮಹಾಮಾರಿ ಜನರ ಬದುಕನ್ನೆ ಬುಡ ಮೇಲು ಮಾಡಿತ್ತು. ಮದುವೆ ಕೂಡ ತಡವಾಗಿ ಹೋಗಿತ್ತು. ಅ ಸಂಧರ್ಭದಲ್ಲಿ ಶರ್ಮಾ ತಮ್ಮ ಜೀವನದ ಪಥವನ್ನೆ ಬದಲಿಸಿಕೊಂಡಿದ್ದರು. “ಅನಾಮಧೇಯ ಮೃತ ದೇಹಗಳಿಗೆ ಮುಕ್ತಿ ಕೊಡುವ ಕೆಲಸಕ್ಕೆ ಮುಂದಾಗಿದ್ದರು.ಅವುಗಳ ಜೋತೆಗೆ ಒಡನಾಟ.ಇದನ್ನು ನೋಡಿದ ಮದುವೆಯಾಗ ಬೇಕಿದ್ದ ಹುಡುಗನ ಕಡೆಯವರು. ಶವಸಂಸ್ಕಾರದ ಮೈದಾನದಲ್ಲಿ ತಿರುಗಾಡುವ ಸೊಸೆ ನಮಗೆ ಬೇಡ” ಎಂದು ಅವರು ಹೇಳಿದ್ದರು. “ನಮ್ಮ ಸಂಬಂಧಿಕರು ಏನು ಯೋಚಿಸುತ್ತಾರೆ?” ಎಂದು ಮದುವೆಯನ್ನೆ ಮುರಿದು ಕೊಂಡರು.
ಪೂಜಾ ಅವರೆ ಹೇಳುವಂತೆ. ನನ್ನ ಮದುವೆ ಮುರಿದು ಬಿದ್ದಿದ್ದರಿಂದ ನಾನು ತಲೆಕೆಡಸಿಕೊಳ್ಳಲಿಲ್ಲ
“ನನ್ನ ತಾಯಿ ನನ್ನ ಮದುವೆಗಾಗಿ ಖರೀದಿಸಿದ ಮದುವೆಯ ಆಭರಣಗಳನ್ನು ನಾನು ಮಾರಾಟ ಮಾಡಿದೆ.! ಮತ್ತು ಅದನ್ನು ಅನಾಮಧೇಯ ಮೃತ ದೇಹಗಳ ಅಂತ್ಯಕ್ರಿಯೆಗಾಗಿ ಖರ್ಚು ಮಾಡಿದ್ದೇನೆ. ನಾನು ಮುಂದೆಯೂ ಮದುವೆಯಾಗುತ್ತೇನೆಯೇ ಎಂದು ನನಗೆ ನಂಬಿಕೆ ಇಲ್ಲ. ಮತ್ತು ನಾನು ಹೆದರುವುದಿಲ್ಲ. ಯಾವುದೇ ಕುಟುಂಬ ನನ್ನ ಕೆಲಸವನ್ನು ಸ್ವೀಕರಿಸುವುದಿಲ್ಲ ಎಂದು ನನಗೆ ಅರಿವಿದೆ. ಆದರೆ ನಾನು ಮಾಡಬೇಕಾದ ಕೆಲಸ ಇದೆ ಎಂದು ತೀರ್ಮಾನಿಸಿದ್ದೇನೆ. ಅದೇ ಕಾರಣಕ್ಕಾಗಿ ನನ್ನ ಬಾಲ್ಯದ ಸ್ನೇಹಿತರು ಮತ್ತು ಸಂಬಂಧಿಕರು ನನ್ನಿಂದ ದೂರವಾಗಿದ್ದಾರೆ ಎಂದು ಪೂಜಾ ಹೇಳುತ್ತಾರೆ. “‘ ಪೂಜಾ ದೆವ್ವಗಳ ಒಡನಾಡಿ” ಎಲ್ಲರೂ ಹೇಳುತ್ತಾರೆ.” ಯಾರೂ ನಮ್ಮ ಮನೆಗೆ ಬರುವುದಿಲ್ಲ” ಎಂದು ತಂದೆ ವಿಸ್ಫುಲ್ ಶರ್ಮಾ ಹೇಳುತ್ತಾರೆ, ಅವರು ಅಂತಹ ದುಃಖದ ಕೆಲಸಕ್ಕೆ ತುಂಬಾ ಚಿಕ್ಕವಳಾಗಿ ಕಾಣುತ್ತಾಳೆ. ಆದರೆ ದೆಹಲಿಯಲ್ಲಿರುವ ಶವಸಂಸ್ಕಾರಗಳ ಸ್ಥಳಗಳು ನಿರ್ಜನ ಸ್ಥಳಗಳಾಗಿದ್ದರೂ ಕೂಡ ಪೂಜಾ ಅಂಜದೆ ತನ್ನ ಆಯ್ಕೆಯ ವೃತ್ತಿಯೊಂದಿಗೆ ಶಾಂತಿಯಿಂದ ಬದುಕುತಿದ್ದಾಳೆ.
ಪೂಜಾ ಹೇಳುವಂತೆ “ನಾನು ಮಾಡುತ್ತಿರುವ ಈ ಸೇವೆಯು ನನ್ನ ಮನಸ್ಸಿಗೆ ನೆಮ್ಮದಿ ನೀಡುತ್ತಿದೆ.” ಶವಗಳನ್ನು ಹಳ್ಳಿಗಳಿಗೆ ಹಿಂತಿರುಗಿಸಲು ಅಥವಾ ಶವಸಂಸ್ಕಾರಕ್ಕಾಗಿ ಪಾವತಿಸಲು ಸಹಾಯ ಮಾಡಲು ಸಾರಿಗೆಯೊಂದಿಗೆ ಕಡಿಮೆ-ಆದಾಯದ ಕುಟುಂಬಗಳಿಗೆ ಸಹಾಯ ಮಾಡಲು ಶರ್ಮಾ ತನ್ನ ಕೆಲಸವನ್ನು ವಿಸ್ತರಿಸಲು “ಬ್ರೈಟ್ ದಿ ಸೋಲ್” ಫೌಂಡೇಶನ್ ಅನ್ನು ಸ್ಥಾಪಿಸಿದ್ದಾರೆ. ಸಬ್ಜಿ ಮಂಡಿ ಶವಾಗಾರದಿಂದ ಸ್ಮಶಾನಕ್ಕೆ ಶವಗಳನ್ನು ಸಾಗಿಸಲು ತನ್ನ ಸ್ವಂತ ವಾಹನದಲ್ಲಿ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆಯನ್ನು ತಾನೆ ಮಾಡುತ್ತಾಳೆ. ಆಂಬ್ಯುಲೆನ್ಸ್‌ನಲ್ಲಿ ಶವವನ್ನು ತೆಗೆದುಕೊಂಡು ಹೋಗುವ ಕೊನೆಯ ಪ್ರಯಾಣದ ಸಮಯದಲ್ಲಿ, ಪೂಜಾ ಮೃತ ದೇಹದ ಪಕ್ಕದಲ್ಲಿ ಕುಳಿತಾಗ ಇವರು ಯಾರೆಂದು ಆಶ್ಚರ್ಯ ಪಡುತ್ತಾಳೆ, ಈ ಗುರುತಿಲ್ಲದ, ಹೆಸರಿಲ್ಲದ ಜನರು. “ಇವರು ಜನಿಸಿದಾಗ,ಬದುಕಿನಲ್ಲಿ ಎಷ್ಟು ಸಂತೋಷ ಇರಬೇಕಿತ್ತು? ಆದರೆ ಇಂತಹ ಅನಾಮಧೇಯರ ಇಡೀ ಜೀವನವು ಏಕಾಂಗಿಯಾಗಿ ಕೊನೆಗೊಂಡಿದೆ,
ಅನಾಮಧೇಯ ಶವಗಳಿಗಳ ಅಂತಿಮ ವಿಧಿವಿಧಾನಗಳ ನಂತರ ತಿಂಗಳಿಗೊಮ್ಮೆ ವಿವಿಧ ಸ್ಮಶಾನಗಳಿಂದ ಅವರ ಚಿತಾಭಸ್ಮವನ್ನು ಸಂಗ್ರಹಿಸಿ. ನಂತರ ಅವುಗಳನ್ನು ಗಂಗಾನದಿಯ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದಾದ ಹರಿದ್ವಾರಕ್ಕೆ ಟ್ಯಾಕ್ಸಿ ಮೂಲಕ 120 ಮೈಲುಗಳಷ್ಟು ಪ್ರಯಾಣಿಸುತ್ತಾರೆ ಪೂಜಾ, ಅಲ್ಲಿ ಅವರು ಗೌರವಾನ್ವಿತ ಕೊನೆಯ ಕ್ರಿಯೆಯನ್ನು ಮಾಡುತ್ತಾಳೆ ಹಿಂದೂಗಳ ಪವಿತ್ರ ನದಿಯಲ್ಲಿ ಚಿತಾಭಸ್ಮದ ಬೂದಿಯನ್ನು ಮುಳುಗಿಸುತ್ತಾರೆ.
■ ನಾನು ನನ್ನ ಸಹೋದರನನ್ನು ಅಂತ್ಯಸಂಸ್ಕಾರ ಮಾಡಿದ ದಿನ ನಾನು ದುಃಖದಿಂದ ಹೊರಬಂದೆ, ನಾನು ಅವನ ಚಿತಾಭಸ್ಮವನ್ನು ನನ್ನ ಮುಖ ಮತ್ತು ಕೂದಲಿಗೆ ಹಚ್ಚಿದೆ – ಈ ಕೊನೆಯ ಕ್ಷಣ ಎಷ್ಟು ಮುಖ್ಯ ಎಂದು ನಾನು ಅರಿತುಕೊಂಡೆ
ದೆಹಲಿಯಲ್ಲಿನ ಶವಾಗಾರಗಳಲ್ಲಿ ಬಿದ್ದಿರುವ ಅನಾಮಧೇಯ ಸಾವಿರಾರು ಮೃತ ದೇಹಗಳಿಗೆ ಗೌರವಾನ್ವಿತ ಅಂತ್ಯಕ್ರಿಯೆಯನ್ನು ನೆಡೆಸಲು ಪೂಜಾ ಶರ್ಮಾ ತನ್ನ ಜೀವನವನ್ನು ಮುಡಿಪಾಗಿಟ್ಟಿದ್ದಾಳೆ, ಶವಸಂಸ್ಕಾರದ ವೆಚ್ಚವನ್ನು ಪೂಜಾ ಅವರೆ ಪಾವತಿಸುತ್ತಾರೆ. ಯುವತಿಯೊಬ್ಬಳು ಅನಾಮಧೇಯ ಮೃತ ದೇಹಗಳನ್ನು ಬಿಳಿಯ ಬಟ್ಟೆಯಿಂದ ಮುಚ್ಚುತ್ತಾಳೆ.ತನ್ನ ಒಬ್ಬ ಸಹಾಯಕನೊಂದಿಗೆ, ಅವರು ಅದನ್ನು ಬಿದಿರಿನ ಸ್ಟ್ರೆಚರ್‌ನಲ್ಲಿ ಇರಿಸಿ ನಂತರ ತನ್ನದೆ ವಾಹನದಲ್ಲಿ ದೆಹಲಿಯ ಸರಾಯ್ ಕಾಲೇ ಖಾನ್ ಸ್ಮಶಾನಕ್ಜೆ ತೆಗೆದುಕೊಂಡು ಹೋಗಿ ಅಲ್ಲಿಯ ಮೆಟ್ಟಿಲುಗಳ ಮೇಲೆ ಇಡುತ್ತಾರೆ. ಒಮ್ಮೆ ಶವ ಸುಡುವ ಕುಲುಮೆಯಲ್ಲಿ ಅವಳು ಶವವನ್ನು ಒಳಗೆ ಸರಿಸಲು ಮೃದುವಾದ ತಳ್ಳುವಿಕೆಯಿಂದ ಮುಕ್ತಿ ನೀಡುತ್ತಾಳೆ ಮತ್ತು ಪ್ರಾರ್ಥನೆಯಲ್ಲಿ ತನ್ನ ತಲೆಯನ್ನು ಬಾಗಿಸಿ ಅಗ್ನಿ ಸ್ಪರ್ಶಿಸಿ ಕುಲುಮೆಗೆ ದೂಡುತ್ತಾಳೆ.
ಸುಮಾರು ಮೂರು ವರ್ಷಗಳ ಕಾಲ,ಪೂಜಾ ಶರ್ಮಾ ಅವರು ಪೋಲೀಸ್ ದಾಖಲೆಗಳು ಪೂರ್ಣಗೊಂಡ ನಂತರ ಶವಗಳನ್ನು ಶವಾಗಾರಗಳಿಂದ ಸಂಗ್ರಹಿಸಲು ಮತ್ತು ಅವುಗಳನ್ನು ಸ್ಮಶಾನಕ್ಕೆ ಕೊಂಡೊಯ್ಯಲು ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದಾರೆ, ಅನಾಮಧೇಯ ಶವಗಳನ್ನು ಸ್ಮಶಾಣಕ್ಕೆ ಕೊಂಡೊಯ್ದು ಅವುಗಳಿಗೆ ಗೌರವದ ಅಂತಿಮ ವಿದಾಯವನ್ನು ನೀಡುತ್ತಾರೆ.
26 ವರ್ಷ ವಯಸ್ಸಿನ ಪೂಜಾ ಶರ್ಮಾ ಸುಮಾರು 5,000 ಹೆಚ್ಚು ಅನಾಮಧೇಯ ಮೃತ ದೇಹಗಳಿಗೆ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದ್ದಾರೆ, ದಿನಕ್ಕೆ ಸರಾಸರಿ ಎರಡರಿಂದ ಹತ್ತು ಮೃತದೇಹಗಳು ಪೂಜಾ ಅವರ ಕೈಯಿಂದ ಮುಕ್ತಿ ಪಡೆಯುತ್ತಿವೆ.