ದೆಹಲಿಯ ಉದ್ಯಾನವನದಲ್ಲಿ ತಲೆಗೆ ರಾಡ್ ನಿಂದ ಹೊಡೆದು ಪ್ರೀಯಕರನಿಂದಲೆ ಪ್ರೀಯತಮೆಯ ಹತ್ಯೆ…!!!

ಘಟನಾ ಸ್ಥಳ

ದೆಹಲಿಯ ಮಾಳವೀಯ ನಗರದ ಅರಬಿಂದೋ ಕಾಲೇಜು ಬಳಿಯ ಉದ್ಯಾನವನದಲ್ಲಿ ಈ ಘಟನೆ ನಡೆದಿದೆ.
ಮೃತ ವಿದ್ಯಾರ್ಥಿನಿ ಕಮಲಾ ನೆಹರು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಸ್ನೇಹಿತನೊಂದಿಗೆ ಉದ್ಯಾನವನಕ್ಕೆ ತೆರಳಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಸಂಬಂಧ 28 ವರ್ಷದ ಆರೋಪಿ ಇರ್ಫಾನ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಾಳವೀಯಾ ನಗರದ ಅರಬಿಂದೋ ಕಾಲೇಜು ಬಳಿ 25 ವರ್ಷದ ಯುವತಿಯ ಶವ ಪತ್ತೆಯಾಗಿದೆ. ವಿದ್ಯಾರ್ಥಿನಿ ಮೇಲೆ ರಾಡ್‌ನಿಂದ ಹಲ್ಲೆ ನಡೆಸಲಾಗಿದ್ದು, ತಲೆಗೆ ಬಲವಾದ ಗಾಯವಾಗಿದ್ದು, ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಘಟನೆ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಚಂದನ್ ಚೌಧರಿ ತಿಳಿಸಿದ್ದಾರೆ.
ಇರ್ಫಾನ್ ಮೃತ ಯುವತಿಯೊಂದಿಗೆ ಮದುವೆಯಾಗಲು ಬಯಸಿದ್ದ. ಆದರೆ, ಯುವತಿ ಮನೆಯವರು ಮದುವೆಗೆ ನಿರಾಕರಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಮಾಳವೀಯಾ ನಗರದಂತಹ ಐಷಾರಾಮಿ ಪ್ರದೇಶದಲ್ಲಿ, ರಾಡ್‌ನಿಂದ ಹೊಡೆದು ಯುವತಿಯನ್ನು ಹತ್ಯೆ ಮಾಡಲಾಗಿದೆ.

ದಕ್ಷಿಣ ದೆಹಲಿಯ ಉಪ ಪೊಲೀಸ್ ಆಯುಕ್ತ ಚಂದನ್ ಚೌಧರಿ, “ಉದ್ಯಾನದೊಳಗೆ ಘಟನೆ ನಡೆದಿದೆ. ಮೃತ ಯುವತಿ ಕಾಲೇಜು ವಿದ್ಯಾರ್ಥಿನಿ. ಆಕೆ ತನ್ನ ಸ್ನೇಹಿತನೊಂದಿಗೆ ಉದ್ಯಾನವನಕ್ಕೆ ಬಂದಿದ್ದಳು. ಮೃತಳ ತಲೆಯ ಮೇಲೆ ರಾಡ್ ನಿಂದ ಬಲವಾಗಿ ಹೊಡೆಯಲಾಗಿದೆ. ಆಕೆಯ ಶವದ ಬಳಿ ರಾಡ್‌ ಕೂಡ ಪತ್ತೆಯಾಗಿದೆ. ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ”

ನನ್ನ ಮಗಳನ್ನು ಹತ್ಯೆಮಾಡಿದ ಆರೋಪಿಗೆ “ಮರಣದಂಡನೆ” ಕೊಡಬೇಕು, ನನಗೆ ಒಬ್ಬಳೇ ಮಗಳು ಇದ್ದಳು … ನಾನು ಅವನನ್ನು ಬಿಡುವುದಿಲ್ಲ” ಎಂದು ಸಂತ್ರಸ್ತೆಯ ನೊಂದ ತಂದೆ ಪದೇ ಪದೇ ಹೇಳುತ್ತಿದ್ದರು

ದೆಹಲಿಯ: ದೆಹಲಿಯ ಉದ್ಯಾನವನದಲ್ಲಿ ತಲೆಗೆ ರಾಡ್ ನಿಂದ ಹೊಡೆದು‌ ಪ್ರೀಯಕರನಿಂದಲೆ ಪ್ರಿಯತಮೆಯ ಹತ್ಯೆ…!!!

ನವದೆಹಲಿ: ದಕ್ಷಿಣ ದೆಹಲಿಯ ಮಾಳವೀಯಾ ನಗರದಲ್ಲಿ ಶುಕ್ರವಾರ ಉದ್ಯಾನವನದಲ್ಲಿ ಕಾಲೇಜು ವಿಧ್ಯಾರ್ಥಿನಿಯೊಬ್ಬಳ ಮೇಲೆ ಹಾಡು ಹಗಲೆ ರಾಡ್‌ನಿಂದ ಬಲವಾಗಿ ಹಲ್ಲೆ ನಡೆಸಲಾಗಿದ್ದು, ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.ಹತ್ಯೆಯಾದ ಯುವತಿ
ನರ್ಗೀಸ್ ಎಂದು ಗುರುತಿಸಲಾಗಿದೆ. ಯುವತಿ ದೆಹಲಿಯ ಕಮಲಾ ನೆಹರು ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾಳೆ ಮನೆಯವರಿಗೂ ಇಷ್ಟವಿಲ್ಲದ ಕಾರಣಕ್ಕೆ ಪ್ರೀತಿಸಿದವನನ್ನು ಆಕೆ ಮದುವೆಯಾಗಲು ನಿರಾಕರಿಸಿದ ಕಾರಣ ಅವಳ ಸ್ವಂತ ಸೋದರಸಂಬಂಧಿ (ಪ್ರೀತಿಸಿದ ಹುಡುಗ) ಅವಳನ್ನು ರಾಡ್ ನಿಂದ ಹೊಡೆದು ಕೊಂದಿದ್ದಾನೆ…!! ದೆಹಲಿಯ ಅರಬಿಂದೋ ಕಾಲೇಜ್ ಬಳಿಯ ಮಾಳವೀಯ ನಗರದ ಉದ್ಯಾನವನದಲ್ಲಿ ಈ ಘಟನೆ ನಡೆದಿದೆ. ಕೊಲೆಗೆ ಸಂಬಂಧಿಸಿದಂತೆ ಆಕೆಯ 28 ವರ್ಷದ ಸೋದರಸಂಬಂಧಿ ಇರ್ಫಾನ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಇರ್ಫಾನ್ ಸರಿಯಾಗಿ ದುಡಿಯುತ್ತಿಲ್ಲ ಎಂಬ ಕಾರಣಕ್ಕೆ ನರ್ಗೀಸ್ ಮನೆಯವರು ಮದುವೆಗೆ ನಿರಾಕರಿಸಿದ್ದರಂತೆ. ಇರ್ಫಾನ್ ಆಹಾರ ವಿತರಣಾ ಸ್ವಿಗ್ಗಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ.
ನರ್ಗೀಸ್ ತನ್ನೊಂದಿಗೆ ಮಾತನಾಡುವುದನ್ನು ನಿಲ್ಲಿಸಿ ಇತನ ಪೋನ್ ನಂಬರ್ ಬ್ಲಾಕ್ ಮಾಡಿದ ನಂತರದಲ್ಲಿ ಇರ್ಫಾನ್ ಅಸಮಾಧಾನಗೊಂಡಿದ್ದಾನೆ. ನರ್ಗೀಸ್ ಮಾಳವೀಯ ನಗರದಲ್ಲಿ ಕೋಚಿಂಗ್ ತರಗತಿಗಳಿಗೆ ಹಾಜರಾಗುತ್ತಿದ್ದ ವೇಳೆ ಮಾತನಾಡಲು ಕೇಳಿಕೊಂಡಿದ್ದಾನೆ. ಆಕೆ ನಿರಾಕರಿಸಿದಾಗ ಕಬ್ಬಿಣದ ರಾಡ್‌ನಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ತನಿಖೆ ವೇಳೆ ಇರ್ಫಾನ್ ಮೂರು ದಿನ ಮೊದಲೇ ಹತ್ಯೆಗೆ ಸ್ಕೆಚ್ ಹಾಕಿದ್ದನಂತೆ.! ಇದನ್ನು ಪೊಲೀಸರಿಗೆ ತಿಳಿಸಿದ್ದಾನೆ.

ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ದೌಡಾಯಿಸಿದ ಉಪ ಪೊಲೀಸ್ ಆಯುಕ್ತ(ದಕ್ಷಿಣ) ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು. ಪರಿಶೀಲನೆ ನಡೆಸಿ ಹತ್ಯೆಗೆ ಸಂಬಂಧಿಸಿದಂತೆ ಇರ್ಫಾನ್‌ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ದೆಹಲಿಯ ದಕ್ಷಿಣ ವಿಭಾಗದ ಡಿಸಿಪಿ ಚಂದನ್ ಚೌಧರಿ

ದಕ್ಷಿಣ ದೆಹಲಿಯ ಡಿಸಿಪಿ ಚಂದನ್ ಚೌಧರಿ ಹೇಳುತ್ತಾರೆ, “ಇಡೀ ಸಮಸ್ಯೆಯು ಮೂಲತಃ ಪ್ರೇಮ ಕೋನದಲ್ಲಿ ತೆರೆದುಕೊಳ್ಳುತ್ತದೆ. ಮತ್ತು ಮದುವೆ ನಿರಾಕರಣೆ ಸಂಭಂಧಿಸಿದ ವಿಷಯವಾಗಿದೆ. ಸಂತ್ರಸ್ತೆ (22 ವರ್ಷ) ಮತ್ತು ಆರೋಪಿ (28 ವರ್ಷ) ಇಬ್ಬರು ಸೋದರ ಸಂಬಂಧಿಗಳು. ಮೃತ ಯುವತಿಯ ಕುಟುಂಬವು ಹುಡುಗನನ್ನು ನಿರಾಕರಿಸಿತ್ತು. ಅವನು ನಿರುದ್ಯೋಗಿಯಾಗಿ ಆಗಿದ್ದರಿಂದ ಹುಡುಗಿಯ ಮನೆಯವರು ಆತನ ಜೋತೆಗೆ ಮದುವೆಯಾಗಲು ಒಪ್ಪಿರಲಿಲ್ಲ.ಮನೆಯವರಿಗೆ ಇಷ್ಷವಿಲ್ಲದ ಕಾರಣಕ್ಕೆ ಹುಡುಗಿ ಪೀತಿಸಿದವನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದಳು … ಹುಡುಗಿ ದೂರವಾದ ಕಾರಣಕ್ಕೆ ಹುಡುಗ ಮಾನಸಿಕವಾಗಿ ತೊಂದರೆಗೀಡಾಗಿದ್ದನು … ಮತ್ತು ಈ ಕಾರಣದಿಂದಲೇ ಇಂದು ಈ ಅಪರಾಧವನ್ನು ಮಾಡಿದ್ದಾನೆ … ಅವನು ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾನೆ. ಮತ್ತು ಹುಡುಗಿ ಎಲ್ಲಿ ಕೋಚಿಂಗ್ ತೆಗೆದುಕೊಳ್ಳುತ್ತಿದ್ದಾಳೆಂದು ಮಾಹಿತಿ ಕಲೆಹಾಕಿದ್ದ. ಆರೋಪಿಯನ್ನು ಇರ್ಫಾನ್ ಎಂದು ಗುರುತಿಸಲಾಗಿದೆ.

ಸುಧೀರ್ ವಿಧಾತ , ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!