ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ಉದ್ಯೋಗಕ್ಕೆ ಯತ್ನ.! ಮೂರು ಮಂದಿ ಉದ್ಯೋಗದಲ್ಲಿ ಇದ್ದವರು ಸೇರಿದಂತೆ 48 ಮಂದಿ ಅಂದರ್!

ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ಉದ್ಯೋಗಕ್ಕೆ ಯತ್ನ.! ಮೂರು ಮಂದಿ ಉದ್ಯೋಗದಲ್ಲಿ ಇದ್ದವರು ಸೇರಿದಂತೆ 48 ಮಂದಿ ಅಂದರ್!

ಅಶ್ವಸೂರ್ಯ/ಬೆಂಗಳೂರು: ನಕಲಿ ದಾಖಲಾತಿ ಸಲ್ಲಿಸಿ ಸರ್ಕಾರಿ ಉದ್ಯೋಗ ಪಡೆಯಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಮಂದಿ ಸರ್ಕಾರಿ ನೌಕರರು ಸೇರಿದಂತೆ 48 ಮಂದಿಯನ್ನು ಸಿಸಿಬಿ ಪೋಲಿಸರ ವಿಶೇಷ ವಿಚಾರಣಾ ತಂಡದ ಅಧಿಕಾರಿಗಳು ಬಂಧಿಸಿದ್ದಾರೆ.

37 ಅಭ್ಯರ್ಥಿಗಳು, 11 ಮಂದಿ ಮಧ್ಯವರ್ತಿಗಳು ಬಂಧಿತರಾಗಿದ್ದು, ಇವರಲ್ಲಿ ಮೂವರು ಈಗಾಗಲೇ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡವರಾಗಿದ್ದು ಕಲಬುರ್ಗಿ ಜಿಲ್ಲೆಯ ಮುರಾರ್ಜಿ ದೇಸಾಯಿ ಶಾಲೆಯ ಮುಖ್ಯೋಪಾಧ್ಯಾಯ ಆನಂದ್, ಜೋಗ ಫಾಲ್ಸ್ ಕೆಪಿಟಿಸಿಎಲ್ ಕಚೇರಿಯಲ್ಲಿ ಪ್ರಥಮ ದರ್ಜೆಯ ಸಹಾಯಕ ಕೃಷ್ಣ, ಹಾಸನ ಜಲಸಂಪನ್ಮೂಲ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಪ್ರದೀಪ್ ಬಂಧಿತರು.

ಬಂಧಿತರಿಂದ 17 ಮೊಬೈಲ್, 40 ಲಕ್ಷ ರೂಪಾಯಿ ಮೌಲ್ಯದ ಎರಡು ಕಾರು, ಒಂದು ಕಂಪ್ಯೂಟರ್ ಹಾರ್ಡ್ ಡಿಸ್ಕ್ ವಶಕ್ಕೆ ಪಡೆಯಲಾಗಿದೆ. 2022ರ ಅಕ್ಟೋಬರ್ ನಲ್ಲಿ ಜಲ ಸಂಪನ್ಮೂಲ ಇಲಾಖೆ ದ್ವಿತೀಯ ದರ್ಜೆ ಸಹಾಯಕರ ಬ್ಯಾಕ್ಲಾಗ್ 182 ಹುದ್ದೆಗಳಿಗೆ ನೇರ ನೇಮಕಾತಿಯನ್ನು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿತ್ತು.ಇದರಲ್ಲಿ 62 ಅಭ್ಯರ್ಥಿಗಳು ಸಲ್ಲಿಸಿದ್ದ ಅಂಕ ಪಟ್ಟಿ ಹಾಗೂ ಇತರೆ ದಾಖಲಾತಿಗಳನ್ನು ಪರಿಶೀಲಿಸಿದಾಗ ನಕಲಿ ಎನ್ನುವುದು ಕಂಡುಬಂದಿದೆ. ಆಗ ಶೇಷಾದ್ರಿಪುರಂ ಠಾಣೆಗೆ ಇಲಾಖೆಯ ಅಧಿಕಾರಿಗಳು ದೂರು ನೀಡಿದ್ದಾರೆ.

ದೊಡ್ಡ ಹಗರಣವಾದ ಕಾರಣಕ್ಕೆ ಪ್ರಕರಣ ಸಿಸಿಬಿಗೆ ಹಸ್ತಾಂತರವಾಗಿತ್ತು.ಸಿಸಿಬಿಯ ಖಡಕ್ ಅಧಿಕಾರಿ ಇನ್ಸ್ಪೆಕ್ಟರ್ ಶ್ರೀನಿವಾಸ್ ನೇತೃತ್ವದ ಪೊಲೀಸರ ತಂಡ ಕಲಬುರ್ಗಿ ಜಿಲ್ಲೆಯಲ್ಲಿ 25, ಹಾಸನ ಜಿಲ್ಲೆಯಲ್ಲಿ 12, ಬೆಳಗಾವಿಯಲ್ಲಿ 3, ಶಿವಮೊಗ್ಗ, ಕೋಲಾರ, ಕೊಪ್ಪಳ, ವಿಜಯನಗರ, ರಾಯಚೂರು ಸೇರಿದಂತೆ 12 ಜಿಲ್ಲೆಗಳಿಂದ ನಕಲಿ ದಾಖಲೆ ಸೃಷ್ಟಿಸಿ ಅರ್ಜಿ ಸಲ್ಲಿಸಿದ 62 ಮಂದಿಯ ಪೈಕಿ 37 ಅಭ್ಯರ್ಥಿಗಳನ್ನು ಬಂಧಿಸಿದ್ದಾರೆ. ಮಧ್ಯವರ್ತಿಗಳಾಗಿದ್ದ 11 ಮಂದಿಯನ್ನು ಸಿಸಿಬಿ ಪೋಲಿಸರ ತಂಡ ಖೆಡ್ಡಕ್ಕೆ ಕೆಡವಿಕೊಂಡಿದೆ. ಈ ಪ್ರಕರಣದ ಇನ್ನೂ 25 ಅಭ್ಯರ್ಥಿಗಳು ನಾಪತ್ತೆಯಾಗಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

37 ಮಂದಿ ಅಭ್ಯರ್ಥಿಗಳ ಜೊತೆಗೆ 11 ಮಂದಿ ಮಧ್ಯವರ್ತಿಗಳನ್ನು ಬಂಧಿಸಲಾಗಿದೆ.

37 ಮಂದಿ ಅಭ್ಯರ್ಥಿಗಳ ಜೊತೆಗೆ 11 ಮಂದಿ ಮಧ್ಯವರ್ತಿಗಳನ್ನು ಬಂಧಿಸಲಾಗಿದೆ. ಈ ಪೈಕಿ ಮೂವರು ಈಗಾಗಲೇ ಸರ್ಕಾರಿ ನೌಕರರಾಗಿದ್ದಾರೆ. ಆನಂದ್, ಕೃಷ್ಣ ಹಾಗೂ ಪ್ರದೀಪ್ ಬಂಧಿತ ಸರ್ಕಾರಿ ನೌಕರರು. ಆನಂದ್ ಕಲಬುರ್ಗಿ ಜಿಲ್ಲೆ ಮೊರಾರ್ಜಿ ದೇಸಾಯಿ ಶಾಲೆಯ ಪ್ರಾಂಶುಪಾಲರಾದರೆ, ಕೃಷ್ಣ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್) ಜೋಗ್ ಫಾಲ್ಸ್ ಕಚೇರಿಯಲ್ಲಿ ಎಫ್​ಡಿಎ ಹಾಗೂ ಪ್ರದೀಪ್ ಹಾಸನದಲ್ಲಿ ಜಲಸಂಪನ್ಮೂಲ ಇಲಾಖೆಯ ಎಫ್​ಡಿಐ ಆಗಿ ಕೆಲಸ ಮಾಡುತ್ತಿದ್ದರು. ಬಂಧಿತ ಆರೋಪಿಗಳಿಂದ ಒಟ್ಟು 17 ಮೊಬೈಲ್ ಫೋನ್, 40 ಲಕ್ಷ ಮೌಲ್ಯದ ಎರಡು ಕಾರು ಹಾಗೂ ಒಂದು ಕಂಪ್ಯೂಟರ್, ಹಾರ್ಡ್ ಡಿಸ್ಕ್ ವಶಪಡಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ಧಾರೆ.

ಪ್ಲ್ಯಾಶ್ ಬ್ಯಾಕ್

ನನ್ನ ಪತ್ರಿಕೆ ” ಕ್ರೈಮ್ ವಿಧಾತ ” ದಲ್ಲಿ ಪ್ರಕಟಗೊಂಡಿದ್ದ ನಕಲಿ ಅಂಕದ ಪಟ್ಟಿಯ ಜಾಲದ ವರದಿ

ಜೋಗ ಫಾಲ್ಸ್ ಕೆಪಿಟಿಸಿಎಲ್ ಕಚೇರಿಯಲ್ಲಿ ಪ್ರಥಮ ದರ್ಜೆಯ ಸಹಾಯಕ ಕೃಷ್ಣನ ಬಂಧನ ಹಿಂದೆಯು ಆಗಿತ್ತು

ಜಿಲ್ಲಾ ಎಸ್ಪಿ ಅಭಿನವ್ ಖರೆ ಅವರ ಮಾರ್ಗದರ್ಶನದಲ್ಲಿ ಅಂದಿನ ಸೊರಬ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದ ಮಂಜುನಾಥ್ ಲಿಂಗರೆಡ್ಡಿ ಅವರು ನಕಲಿ ಅಂಕದ ಪಟ್ಟಿಯ ಜಾಲದ ಬೆನ್ನು ಹತ್ತಿದ್ದರು.ರಾಷ್ಟ್ರಾದ್ಯಂತ ಹಲವು ರಾಜ್ಯದಲ್ಲಿ ಬೇರು ಬಿಟ್ಟಿದ್ದ ನಕಲಿ ಅಂಕದ ಪಟ್ಟಿಯ ಖದೀಮರನ್ನು ಬಂಧಿಸಿದ ಹಿರಿಮೆ ಹಾಲಿ ಕೆಜಿಎಫ್ ನಲ್ಲಿ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯಮಂತ್ರಿ ಪದಕ ವಿಜೇತ ಮಂಜುನಾಥ್ ಲಿಂಗರೆಡ್ಡಿ ಅವರದಾಗಿತ್ತು.

ಅಂದು ಬಂಧನಕ್ಕೆ ಒಳಗಾಗಿದ್ದ ನಕಲಿ ಅಂಕದ ಪಟ್ಟಿಯ ಸೃಷ್ಟಿ ಕರ್ತರು

ಇತ್ತೀಚೆಗೆ ಬೆಂಗಳೂರು ಸಿಸಿಬಿ ಪೋಲಿಸರ ತಂಡ ಬಂಧಿಸಿರುವ ನಕಲಿ ಅಂಕದ ಪಟ್ಟಿ ನೀಡಿ ಕೆಲಸಿ ಗಿಟ್ಟಿಸಿ ಜೋಗ ಫಾಲ್ಸ್ ನಲ್ಲಿ ಕೆಪಿಟಿಸಿಎಲ್ ಕಛೇರಿಯಲ್ಲಿ ಪ್ರಥಮ ದರ್ಜೆಯ ಸಹಾಯಕನಾಗಿದ್ದ ಕೃಷ್ಣ ನನ್ನು ಅಂದು ಕೂಡ ಮಂಜುನಾಥ್ ಲಿಂಗರೆಡ್ಡಿ ಅವರು ಬಂಧಿಸಿ ಪ್ರಕರಣ ದಾಖಲಿಸಿದ್ದರು.
ಈತ ಯಾವ ಅಧಾರದ ಮೇಲೆ ಮತ್ತೆ ಕರ್ತವ್ಯದಲ್ಲಿದ್ದ ಎನ್ನುವುದು ಮಾತ್ರ ನಿಗೂಢವಾಗಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!