ಎಷ್ಟೇ ಎತ್ತರಕ್ಕೆ ಬೆಳೆದರು ನಮ್ಮೂರು,ನಮ್ ಭಾಷಿ, ನಮ್ಮ ‌ಜನರನ್ನ ಮರೆಯಬಾರದು, ಕುಂದಾಪ್ರ ಭಾಷಿ ಅಲ್ಲ ನಮ್ಮ ಬದಕ್: ರಿಷಬ್ ಶೆಟ್ಟಿ

ಎಷ್ಟೇ ಎತ್ತರಕ್ಕೆ ಬೆಳೆದರು ನಮ್ಮೂರು,ನಮ್ ಭಾಷೆ, ನಮ್ಮ ‌ಜನರನ್ನ ಮರೆಯಬಾರದು, ಕುಂದಾಪ್ರ ಭಾಷಿ ಅಲ್ಲ ನಮ್ಮ ಬದಕ್: ರಿಷಬ್ ಶೆಟ್ಟಿ

ಅಶ್ವಸೂರ್ಯ/ಶಿವಮೊಗ್ಗ: ಕುಂದಾಪ್ರ ಭಾಷಿ ಅಲ್ಲ ನಮ್ಮ ಬದಕ್. ಹೊಸ ಪೀಳಿಗೆ ನಮ್ಮ ಸಂಸ್ಕೃತಿ,ಆಚಾರ ವಿಚಾರಗಳಿಂದ ದೂರ ಉಳಿಯುತ್ತಿದೆ. ನಮಗೆ ರಾಮಾಯಣ, ಮಹಾಭಾರತಗಳೆಲ್ಲವೂ ತಿಳಿದಿದ್ದು ನಮ್ಮ ಮಣ್ಣಿನ ಯಕ್ಷಗಾನದಿಂದ, ಕುಂದಾಪ್ರ ಕನ್ನಡ ಹಬ್ಬದಂತಹ ಕಾರ್ಯಕ್ರಮಗಳ ಮೂಲಕ ಮಕ್ಕಳು ನಮ್ಮತನ ಅರಿತು ಪುನಃ ನಮ್ಮೂರ ಭಾಷಿ,ಸಂಸ್ಕೃತಿಯನ್ನು ಆಚರಣೆಗೆ ತರುವಂತಾಗಬೇಕು.

ನಾವು ಸಿನಿಮಾದಲ್ಲೂ ಅವಕಾಶ ಸಿಕ್ಕಲ್ಲೆಲ್ಲ ನಮ್ಮ ಮಣ್ಣಿನ ಅಕ್ಕಿಮುಡಿ, ಮೀನುಗಾರಿಕೆ, ಕಂಬಳ, ನಾಟಿ ಸೇರಿ ಹಲವು ಸಂಸ್ಕೃತಿಯನ್ನು ತೋರಿಸಿದ್ದೇವೆ ಎಂದ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ. 

ನಾವುಗಳು ಎಷ್ಟೇ ಎತ್ತರಕ್ಕೇರಿದರೂ ನಮ್ಮ ನೆಲದ ಭಾಷೆ,ಸಂಸ್ಕೃತಿ, ಆಚಾರ ವಿಚಾರವನ್ನು ಮರೆಯಬಾರದು. ಹಿರಿಯರ ಹಾದಿ, ಭಾಷೆ- ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಕಾರ್ಯಗಳು ಪ್ರತಿಯೊಬ್ಬರಿಂದ ಆಗಬೇಕು’ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದರು.
ಶನಿವಾರ ಬೆಂಗಳೂರು ಅರಮನೆ ಮೈದಾನದಲ್ಲಿ ಕುಂದಾಪ್ರ ಕನ್ನಡ ಪ್ರತಿಷ್ಠಾನದ ‘ಕುಂದಾಪ್ರ ಕನ್ನಡ ಹಬ್ಬ’ದ ಉದ್ಘಾಟನಾ ಕಾರ್ಯಕ್ರಮದಲ್ಲಿ ದಂಪತಿ ಸಮೇತ ಊರ ಗೌರವ’ ಪ್ರಶಸ್ತಿ ಸ್ವೀಕರಿಸಿ ಕುಂದಾಪುರ ಕನ್ನಡದಲ್ಲಿ ಮಾತನಾಡಿದರು.

ಕುಂದಾಪ್ರ ಭಾಷಿ ನಮ್ಮ ಬದಕ್ ಮರೆತು ಹೊಸ ಪೀಳಿಗೆ ನಮ್ಮ ನೆಲದ ಭಾಷಿ, ಸಂಸ್ಕೃತಿ,ಆಚಾರ ವಿಚಾರಗಳಿಂದ ದೂರ ಉಳಿಯುತ್ತಿದೆ.ನಮ್ಮ ಭಾಷಿ, ನಮ್ಮೂರ ಸಂಸ್ಕೃತಿಗಳು ನಮ್ಮ ವ್ಯಕ್ತಿತ್ವ ಹೇಳುತ್ತದೆ ಹಾಗೂ ಸರಿಯಾದ ದಾರಿಯಲ್ಲಿ ನಡೆಯಲು ನೆರವಾಗುತ್ತದೆ. ನಮ್ಮ ಸಾಧನೆ ಅದರ ಖುಷಿ ನಮ್ಮವರಿಗೆ, ನಮ್ಮ ಮನಸ್ಸಿಗೆ ಸೀಮಿತವಾಬೇಕು. ಅದನು ತಲೆಗೇರಿಸಿಕೊಳ್ಳಬಾರದು’ ಎಂದು ಹೇಳಿದರು.
ಕುಂದಾಪುರ ಶಾಸಕ ಕಿರಣ್ ಕೊಡ್ಡಿ, ‘ಭಾಷೆಯ ಹೆಸರಿನಲ್ಲಿ ಹಬ್ಬ ಆಚರಿಸುತ್ತಿರುವುದು ಹೆಮ್ಮೆಯ ವಿಶೇಷ ಎಂದರು. ಕುಂದಾಪುರ ಭಾಷೆಯನ್ನು ಮುಂದಿನ ಪೀಳಿಗೆಯವರು ಮಾತನಾಡುವುದು ಕಷ್ಟವಾಗಬಹುದು. ಆದರೆ ಇಂತಹ ಕಾರ್ಯಕ್ರಮ ಕುಂದಾಪುರ ಭಾಷೆಯ ಮೇಲೆ ಅಭಿಮಾನ ಮೂಡಿಸಿ ಮಾತನಾಡುವಂತೆ ಮಾಡುತ್ತದೆ ಎಂದರು.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಚಲನಚಿತ್ರ ಸಂಗೀತ ನಿರ್ದೇಶಕ ರವಿ ಬಸ್ರೂರು, ಪ್ರತಿಷ್ಠಾನದ ಅಧ್ಯಕ್ಷ ದೀಪಕ್ ಶೆಟ್ಟಿ, ಎಂ.ಎಸ್‌. ಮಂಜ, ಲೈಫ್‌ಲೈನ್‌  ಫೀಡ್ಸ್‌ ಪ್ರೈ ಮ್ಯಾನೇಜಿಂಗ್‌ ಡೈರೆಕ್ಟರ್‌ ಕಿಶೋರ್‌ ಕುಮಾರ್‌ ಹೆಗ್ಡೆ, ಉದ್ಯಮಿ ಶಿವಕುಮಾರ ಹೆಗ್ಡೆ, ಸತೀಶ್‌ ಶೆಟ್ಟಿ ಇದ್ದರು.

Leave a Reply

Your email address will not be published. Required fields are marked *

Optimized by Optimole
error: Content is protected !!