ತಾಯಿ-ಮಗ ಕಿಡ್ನ್ಯಾಪ್ ಲೈಂಗಿಕ ಕಿರುಕುಳ: ರೌಡಿಗಳ ಬಂಧನ!
ಅಶ್ವಸೂರ್ಯ/ಶಿವಮೊಗ್ಗ: ಸಿಲಿಕಾನ್ ಸಿಟಿಯಲ್ಲಿ ಹಣಕ್ಕಾಗಿ ತಾಯಿ ಮಗನನ್ನು ಕಿಡ್ನ್ಯಾಪ್ ಮಾಡಿ ಮಹಿಳೆಗೆ ಲೈಂಗಿಕ ಕಿರುಕುಳ ಕೊಟ್ಟ ಆರೋಪದ ಮೇಲೆ ಇಬ್ಬರು ರೌಡಿಶೀಟರ್ಸ್ ಗಳನ್ನು ಸೇರಿ ಒಟ್ಟು 9 ಮಂದಿಯನ್ನ ಚಂದ್ರಲೇಔಟ್ ಪೊಲೀಸರು ಖೆಡ್ಡಕ್ಕೆ ಕೆಡವಿ ಕೊಂಡು. ಜೈಲಿಗೆ ಬಿಟ್ಟುಬಂದಿದ್ದಾರೆ. ರೌಡಿ ಶೀಟರ್ ಜೋಸೆಫ್, ಶ್ರೀನಿವಾಸ್ @ ಪಾಗಲ್ ಸೀನ (ರೌಡಿಶೀಟರ್), ಸೌಮ್ಯಾ, ಪ್ರತಾಪ್, ಜತಿನ್, ವಿಘ್ನೇಶ್, ಸೈಯದ್ ಶಹಬುದ್ದೀನ್, ಸ್ವಾತಿ, ಮಾದೇಶ ಬಂಧಿತ ಆರೋಪಿಗಳಾಗಿದ್ದಾರೆ.
ಇದೇ ತಿಂಗಳ ಆ.13 ರಂದು ಜೋಸೆಫ್ ಮತ್ತು ಶ್ರೀನಿವಾಸ್ ಹಣ ವಸೂಲಿ ಮಾಡಲೆಂದು ತಾಯಿ-ಮಗನನ್ನು ಕಿಡ್ನ್ಯಾಪ್ ಮಾಡಿದ್ದರು. ಬಳಿಕ ಇಬ್ಬರನ್ನೂ ಪರಿಚಯಸ್ಥ ಪ್ರತಾಪ್ ಮನೆಯಲ್ಲಿ ಅಕ್ರಮವಾಗಿ ಇರಿಸಿ ಟಾರ್ಚರ್ ನೀಡಿದ್ದರಂತೆ.ದೈಹಿಕ ಮತ್ತು ಲೈಂಗಿಕ ದೌರ್ಜನ್ಯ ಎಸಗಿ 2 ಲಕ್ಷ ರೂ. ಕೊಡುವಂತೆ ಕಿರುಕುಳ ನೀಡಿದ್ದಾರೆ. ಇಬ್ಬರ ಬಳಿಯು ಹಣವಿಲ್ಲ ಎಂದು ಗೊತ್ತಾದಾಗ ತಾವೇ ಬಿಟ್ಟು ಕಳಿಸಿದ್ದಾರೆ.
ರೌಡಿಗಳ ಬಂಧನದಿಂದ ಹೊರಬಂದ ಮಹಿಳೆ ನೇರವಾಗಿ ಹೋಗಿ ಚಂದ್ರಲೇಔಟ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಚಂದ್ರ ಲೇಔಟ್ ಪೊಲೀಸರು ಘಟನೆಗೆ ಕಾರಣರಾದ ಇಬ್ಬರು ರೌಡಿಶೀಟರ್ಗಳ ಜೋತೆಗೆ ಇಬ್ಬರು ಮಹಿಳೆಯರು ಸೇರಿ 9 ಮಂದಿಯನ್ನ ಹೆಡೆಮುರಿ ಕಟ್ಟಿ ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿಗಳಾದ ಜೋಸೆಫ್ ಮತ್ತು ಪಾಗಲ್ ಸೀನ ಚಂದ್ರಾ ಲೇಔಟ್ ಠಾಣೆಯ ರೌಡಿ ಶೀಟರ್ ಗಳಾಗಿದ್ದು, ಶಹಬುದ್ದೀನ್ ಮತ್ತು ವಿಘ್ನೇಶ್ ವಿರುದ್ಧ ಈ ಹಿಂದೆ ಹಲ್ಲೆ ಪ್ರಕರಣಗಳಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಸದ್ಯ ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕಿಡ್ನ್ಯಾಪ್ ಗೆ ಕಾರಣವೇನೆಂದು ಪೋಲಿಸರ ತನಿಖೆಯಿಂದ ಹೊರಬರಬೇಕಿದೆ