‘ಆನ್ ಲೈನ್’ ಗೇಮ್ ಆಡುವ ಮುನ್ನ ಎಚ್ಚರ ಇರಲಿ! ಗಂಡ ಮಾಡಿದ ತಪ್ಪಿಗೆ ಕುಟುಂಬವೆ ಸರ್ವನಾಶ!

ಆನ್ ಲೈನ್’ ಗೇಮ್ ಆಡುವ ಮುನ್ನ ಎಚ್ಚರ ಇರಲಿ! ಗಂಡ ಮಾಡಿದ ತಪ್ಪಿಗೆ ಕುಟುಂಬವೆ ಸರ್ವನಾಶ!

ಅಶ್ವಸೂರ್ಯ/ಶಿವಮೊಗ್ಗ: ಮಡದಿ ಶಾಲಾ ಶಿಕ್ಷಕಿ, ಪತಿ ಮಹಾಶಯ ಕ್ಯಾಬ್ ಡ್ರೈವರ್ ಗಂಡ ಮಾಡಿದ ಅನಾವಶ್ಯಕ ಸಾಲದಿಂದ ಸಂತೋಷದಿಂದ ಇದ್ದ ಕುಟುಂಬವೊಂದು ಸುಡುಗಾಡು ಸೇರಿದೆ.! ಪೋಷಕರು ತಮ್ಮ ಮಗಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೌದು ಇದು ಹಾಸನದಲ್ಲಿ ನಡೆದ ಮನಕಲುಕುವ ಭಯಾನಕ ಪ್ರಕರಣ.!? ದಿನದಿಂದ ದಿನಕ್ಕೆ ಎಲ್ಲಾ ರೀತಿಯಲ್ಲೂ ಜಗತ್ತು ವೇಗವಾಗಿ ಹೋಗುತ್ತಿದೆ. ಅದು ಒಳ್ಳೆಯದೆ ಇರಲಿ ಕೆಟ್ಟದ್ದೆ ಇರಲಿ ನಾವು ಎಲ್ಲಿ ಮತ್ತು ಯಾವ ದಿಕ್ಕಿನಲಿ ಹೆಜ್ಜೆಹಾಕುತ್ತಿದ್ದೇವೆ ಎನ್ನುವ ಅರಿವು ಇಲ್ಲದಂತಾಗಿದೆ. ಕೆಲವರು ಯೋಚಿಸುವಾ ಶಕ್ತಿಯನ್ನು ಕಳೆದುಕೊಂಡು ದುರಾಸೆಗೆ ಬಿದ್ದು ಹಣಮಾಡಲು ಹೋಗಿ ಹೆಣವಾಗುತ್ತಿದ್ದಾರೆ. ಆಸೆಗಳ ಬೆನ್ನಿಗೆ ಬಿದ್ದು ಪ್ರತಿಯೊಂದು ಆಸೆಯನ್ನು ಹೆಗಾದರು ಸೈ ಪೂರೈಸುವ ನಿಟ್ಟಿನಲ್ಲಿ ಸಾಲಕ್ಕೆ ಶರಣಾಗುತ್ತಿದ್ದಾರೆ…ದಿನದ ಬಡ್ಡಿ, ವಾರದ ಬಡ್ಡಿ, ತಿಂಗಳ ಬಡ್ಡಿ ಎಂದು ಬಡ್ಡಿಮಕ್ಕಳು ಹೇಳುವ ಅಧಿಕ ಬಡ್ಡಿಗೂ ಸಾಲಮಾಡಿ ತೀರಿಸಲಾಗದ ಸ್ಥಿತಿಗೆ ತಲುಪಿ ಹಣಕೊಟ್ಟವನ ಕಿರುಕುಳವನ್ನು ಎದುರಿಸಲಾಗದೆ ಕುಟುಂಬಕ್ಕೆ ಕುಟುಂಬವೆ ಆತ್ಮಹತ್ಯೆಗೆ ಶರಣಾಗಿ ಸಾವಿನ ಮನೆ ಸೇರುತ್ತಿದ್ದಾರೆ.

ಇದೆ ಹಾದಿಯಲ್ಲಿ ಹೆಜ್ಜೆಹಾಕಿದ ಹಾಸನದ ಕುಟುಂಬವೊಂದು ಒಂದು ಮೂರುದಿನದಿಂದ ಕಾಣೆಯಾಗಿತ್ತು.ಮನೆಯ ಯಜಮಾನ ಶ್ರೀನಿವಾಸ್ ಸಾಲದ ಹೊರೆಯಲ್ಲಿದ್ದರು. ಸಾಲವು ಮನೆಯ ಆರ್ಥಿಕ ಸ್ಥಿತಿಯನ್ನೇ ಬುಡಮೇಲು ಮಾಡಿತ್ತು.! ಶ್ರೀನಿವಾಸ್ ಆನ್ ಲೈನ್ ಗೇಮ್ ಚಟಕ್ಕೆ ಬಿದ್ದು ಸಿಕ್ಕ ಸಿಕ್ಕಲ್ಲಿ ಸಾಲಮಾಡಿದ್ದ.!
ಆಗಸ್ಟ್ 15 ದೇಶಾದ್ಯಂತ 78ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕೆ ಮುಂಜಾನೆ ಅಣಿಯಾಗುತ್ತಿದ್ದರೆ.ಇತ್ತ ಹಾಸನ ನಗರದ ಜನರು ಮಾತ್ರ ಎಚ್ಚರಗೊಂಡಾಗ ಇಡೀ ನಗರವನ್ನು ಬೆಚ್ಚಿಬೀಳಿಸಿದ ನೋವಿನ ಸುದ್ದಿಯೊಂದು ವರದಿಯಾಗಿತ್ತು.!
ಸಾಲ ಬಾಧೆ ತಾಳಲಾರದೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನದಲ್ಲಿ ನಡೆದು ಹೋಗಿತ್ತು.? ಹಾಸನದಲ್ಲಿ ಕಾರು ಚಾಲಕನಾಗಿದ್ದ ಶ್ರೀನಿವಾಸ್ ಮತ್ತು ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಪತ್ನಿ ಶ್ವೇತಾ ಜೊತೆಗೆ ಮುದ್ದಾದ 13 ವರ್ಷದ ಮಗಳು ನಾಗಶ್ರೀಯೊಂದಿಗೆ ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ನಗರದ ಪ್ರತಿಯೊಬ್ಬರನ್ನೂ ಮೌನಕ್ಕೆ ಜಾರುವಂತೆ ಮಾಡಿತ್ತು.! ಆನ್ ಲೈನ್ ಗೇಮ್ ಚಟಕ್ಕೆ ಬಿದ್ದು ಸಿಕ್ಕ ಸಿಕ್ಕಲ್ಲಿ ಸಾಲ ಮಾಡಿಕೊಂಡು ಅದನ್ನು ತೀರಿಸಲಾಗದೇ ಮನೆಯ ಯಜಮಾನ ಶ್ರೀನಿವಾಸ್ ಸೂಸೈಡ್ ಮಾಡಿಕೊಳ್ಳುವ ತೀರ್ಮಾನಕ್ಕೆ ಬಂದಿರಬಹುದು. ತಾನು ಮಾಡಿದ ತಪ್ಪಿಗೆ ಶ್ರೀನಿವಾಸ್ ತನ್ನ ಹೆಂಡತಿ ಮಗಳನ್ನು ಕರೆದುಕೊಂಡು ಕಾಣೆಯಾಗಿದ್ದ. ಇತನ ಬಂಧು ಬಳಗದವರು ಮತ್ತು ಸ್ನೇಹಿತರು ಮೂವರೂ ಕಾಣೆಯಾಗಿದ್ದಾರೆ. ಎಂದು ಪೊಲೀಸರಿಗೆ ದೂರು ನೀಡಿದ್ದರು.ಕಾರ್ಯಚರಣೆಗೆ ಇಳಿದ ಪೋಲಿಸರಿಗೆ ಹೇಮಾವತಿ ನಾಲೆಯಲ್ಲಿ ಮೂವರ ಶವ ಪತ್ತೆಯಾಗಿತ್ತು.!

ಒಂದೇ ಕುಟುಂಬದ ಮೂವರು ಸದಸ್ಯರು ಇದ್ದಕ್ಕಿದ್ದಂತೆ ಎಲ್ಲಿ ಕಣ್ಮರೆಯಾದರು ಎಂದು ಪೊಲೀಸರು ಹುಡುಕಾಟಕ್ಕೆ ಮುಂದಾಗಿದ್ದರು.ನಂತರ ಹಾಸನ ನಗರದಿಂದ 40 ಕಿ.ಮೀ ದೂರದಲ್ಲಿರುವ ಬಾಗೂರು ಹೋಬಳಿಯ ಕಾಲುವೆಯಲ್ಲಿ ಎರಡು ಶವಗಳು ತೇಲುತ್ತಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆದರೆ ಮಗಳು ನಾಗಶ್ರೀ ಅವರ ಶವ ಕಾಣೆಯಾಗಿತ್ತು.

ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂದು ಪೊಲೀಸರು ಕೂಡ ಗೊಂದಲಕ್ಕೆ ಒಳಗಾಗಿದ್ದರು. ಶ್ರೀನಿವಾಸ್ ತನ್ನ ಕುಟುಂಬದೊಂದಿಗೆ ಏಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುವ ಬಗ್ಗೆಯೂ ಗೊಂದಲವಿತ್ತು.
ಶ್ರೀನಿವಾಸ್ ಸಾಲದ ಹೊರೆಯಲ್ಲಿದ್ದರು ಎನ್ನುವುದನ್ನು ತಿಳಿದ ಪೋಲಿಸರು ಈ ಹಾದಿಯಲ್ಲಿ ತನಿಖೆಗೆ ಮುಂದಾದಾಗ ಶ್ರೀನಿವಾಸ್ ಅವರ ಕುಟುಂಬವು ಆಘಾತಕಾರಿ ಸಂಗತಿಯನ್ನು ಪೋಲಿಸರ ಎದುರು ಬಹಿರಂಗಪಡಿಸಿದ್ದರು. ಶ್ರೀನಿವಾಸ್ ಸಾಲದ ಹೊರೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ. ಶ್ರೀನಿವಾಸ್ ವೃತ್ತಿಯಲ್ಲಿ ಕಾರು ಚಾಲಕನಾಗಿದ್ದು, ಪತ್ನಿ ಶ್ವೇತಾ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಶ್ರೀನಿವಾಸ್ ಅನೇಕ ಸ್ಥಳಗಳಿಂದ ಸಾಲ ಪಡೆದಿದ್ದರು ಮತ್ತು ಅವುಗಳನ್ನು ಮರುಪಾವತಿಸಲು ಸಾಧ್ಯವಾಗಿರಲಿಲ್ಲ. ಸಾಲವು ಮನೆಯ ಆರ್ಥಿಕ ಸ್ಥಿತಿಯನ್ನು.ನೆಮ್ಮದಿಯನ್ನು ಹಾಳುಮಾಡಿತ್ತು. ಸಾಲಕೊಟ್ಡವರ ಕಿರುಕುಳ ಒತ್ತಡವೂ ಹೆಚ್ಚಾಗಿತ್ತಂತೆ. ಮೂವರೂ ಕಳೆದ ಮಂಗಳವಾರ (ಆಗಸ್ಟ್,13) ಕಾಣೆಯಾಗಿದ್ದು, ಅವರ ಕುಟುಂಬ ಸದಸ್ಯರು ಅವರನ್ನು ಹುಡುಕುತ್ತಿದ್ದರು. ಅವರು ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ದೂರು ದಾಖಲಿಸಿದ್ದರು.
ಸಾಲದ ಶೂಲಕ್ಕೆ ಸಿಕ್ಕಿದ ಕುಟುಂಬ ಒಂದು ಆತ್ಮಹತ್ಯೆಗೆ ಶರಣಾಗಿತ್ತು.

ಶ್ರೀನಿವಾಸ್ ಮತ್ತು ಶ್ವೇತಾ ಅವರ ಶವಗಳನ್ನು ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ಗುರುವಾರ ಮಾದಾಪುರ ಬಳಿಯ ಕಾಲುವೆಯಿಂದ ಹೊರತೆಗೆದಿದ್ದಾರೆ. ಸ್ಥಳಕ್ಕೆ ಎಸ್ಪಿ ಮೊಹಮ್ಮದ್ ಸುಜಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಒಟ್ಟಿನಲ್ಲಿ ಅಡ್ಡಹಾದಿಯಲ್ಲಿ ಹಣಮಾಡುವ ದುಶ್ಚಟಕ್ಕೆ ಬಿದ್ದ ಮನೆಯ ಯಜಮಾನ ಶ್ರೀನಿವಾಸ್ ತಪ್ಪು ಮಾಡದ ಮಡದಿ‌ ಮಗಳನ್ನು ಬಲಿಕೊಟ್ಟದ್ದು ಮಾತ್ರ ದುರಂತವೆ ಹೌದು….

Leave a Reply

Your email address will not be published. Required fields are marked *

Optimized by Optimole
error: Content is protected !!