ಗನ್ ತೋರಿಸಿ ಯುವತಿಯನ್ನು ಎಳೆದೊಯ್ದ ದುಷ್ಕರ್ಮಿಗಳು.! ಅಂಗಲಾಚಿದರೂ ಸಹಾಯ ಮಾಡಲಾಗದೆ ಕೈಕಟ್ಟಿ ನಿಂತ ಸ್ಥಳಿಯರು!
ಅಶ್ವಸೂರ್ಯ/ಶಿವಮೊಗ್ಗ: ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಬೆಚ್ಚಿಬೀಳಿಸುವಂತಹ ಘಟನೆಯೊಂದು ವರದಿಯಾಗಿದೆ. ಹಾಡಹಗಲೇ ದುಷ್ಕರ್ಮಿಗಳು ಮನೆಯೊಂದರ ಬಳಿ ಹೋಗಿ ಮಹಿಳೆಯೊಬ್ಬಳನ್ನು ಬಲವಂತವಾಗಿ ಎಳೆದೊಯ್ದಿದ್ದಾರೆ.ಈ ಘಟನೆ ಸಾರ್ವಜನಿಕರ ಕಣ್ಣೆದುರಲ್ಲೇ ನೆಡೆದರು ನಡೆದುಹೋಗಿದೆ ಎನು ಮಾಡಲಾಗದ ಸ್ಥಿತಿ ಅವರದಾಗಿತ್ತು.! ದುಷ್ಕರ್ಮಿಗಳು
ಕೈಯ್ಯಲ್ಲಿ ಗನ್ ಹಾಗೂ ದೊಣ್ಣೆ ಹಿಡಿದು ಅಲ್ಲಿರುವವರನ್ನು ಬೆದರಿಸಿ ಮಹಿಳೆಯನ್ನು ಎಳೆದುಕೊಂಡು ಹೋಗಿದ್ದಾರೆ. ಘಟನೆಯಿಂದ ಅಕ್ಷರಶಃ ತತ್ತರಿಸಿದ್ದ ಮಹಿಳೆ ಸಹಾಯಕ್ಕಾಗಿ ಅಂಗಲಾಚುತ್ತಿದ್ದಳು. ತನ್ನನ್ನು ಬಿಟ್ಟುಬಿಡುವಂತೆ ಕಣ್ಣೀರಿಟ್ಟಿದ್ದಾಳೆ. ಆದರೆ ಮಹಿಳೆಯದ್ದು ಅರಣ್ಯ ರೋದನವಾಗಿಬಿಟ್ಟಿತ್ತು.
ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋ ಸಹ ವೈರಲ್ ಆಗಿದ್ದು. ಮಹಿಳೆಯ ಕೂದಲನ್ನು ಹಿಡಿದು ದುಷ್ಕರ್ಮಿಗಳು ಎಳೆದುಕೊಂಡು ಹೋಗುತ್ತಿರುವ ದೃಶ್ಯ ಭಯಾನಕವಾಗಿದೆ. ಆಕೆಯನ್ನು ಬಿಡಿಸಲು ಪ್ರಯತ್ನಿಸಿದ ಸಾರ್ವಜನಿಕರನ್ನು ಬಂದೂಕು ತೋರಿಸಿ ದುಷ್ಕರ್ಮಿಗಳು ಬೆದರಿಸಿದ್ದಾರೆ.ಅಷ್ಟೇ ಅಲ್ಲ ದೊಣ್ಣೆಗಳನ್ನೂ ಝಳಪಿಸಿದ್ದಾರೆ. ಘಟನೆಯಿಂದ ಆಘಾತಗೊಂಡ ವೃದ್ಧೆಯೊಬ್ಬಳು ಸ್ಥಳದಲ್ಲಿ ಸಹಾಯ ಮಾಡುವಂತೆ ಅಂಗಲಾಚುತ್ತಿರುವ ದೃಶ್ಯ ಕೂಡ ಕ್ಯಾಮರಾದಲ್ಲಿ ಸೆರೆಯಾಗಿದೆ.
ದುಷ್ಕರ್ಮಿಗಳ ಕೈಯಲ್ಲಿದ್ದ ಬಂದೂಕು ಸ್ಥಳೀಯರನ್ನು ಬೆಚ್ಚುವಂತೆ ಮಾಡಿದ್ದರಿಂದ ಸಾರ್ವಜನಿಕರು ಮಹಿಳೆಯ ರಕ್ಷಣೆಗೆ ಮುಂದಾಗಲು ಸಾಧ್ಯವಾಗಿಲ್ಲ ಎಲ್ಲರೂ ಮೂಕ ಪ್ರೇಕ್ಷಕರಾಗಿದ್ದರು. ಈ ಘಟನೆಯು ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನೆಡೆದಿದ್ದು ಕಾನೂನು ಮತ್ತು ಸುವ್ಯವಸ್ಥೆ ಯಾವ ಮಟ್ಟದಲ್ಲಿದೆ ಎಂದು ಸ್ಥಳೀಯರನ್ನು ಯೋಚಿಸುವಂತೆ ಮಾಡಿದೆ.?