ಲಂಚದ ಹಣ ಹಂಚಿಕೊಳ್ಳುವಾಗಲೇ ಸಿಕ್ಕಿಬಿದ್ದ ತ್ರಿಮೂರ್ತಿ ಪೊಲೀಸ್; ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು ಲಂಚದ ‘ದೃಶ್ಯ’!

ಲಂಚದ ಹಣ ಹಂಚಿಕೊಳ್ಳುವಾಗಲೇ ಸಿಕ್ಕಿಬಿದ್ದ ತ್ರಿಮೂರ್ತಿ ಪೊಲೀಸ್; ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು ಲಂಚದ ದೃಶ್ಯ!

ಅಶ್ವಸೂರ್ಯ/ಶಿವಮೊಗ್ಗ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿನ ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಲಂಚಾವತಾರದ ಬಗ್ಗೆ ಆಗಾಗ ಸುದ್ದಿ ಹಾಗೂ ವಿಡಿಯೋಗಳು ಹರಿದಾಡುತ್ತಲೆ ಇರುತ್ತವೆ. ಇಂತದ್ದೆ ಒಂದು ಘಟನೆ ಲಂಚದ ಎಪಿಸೋಡ್ ಗೆ ಸೇರ್ಪಡೆಯಾಗಿದೆ. ಆದರೆ ಈ ಪ್ರಕರಣದಲ್ಲಿ ಲಂಚ ಪಡೆದ ಮೂವರು ಪೊಲೀಸರು ಸಸ್ಪೆಂಡ್ ಆಗಿದ್ದಾರೆ.
ಈ ಘಟನೆ ಕಳೆದ ಶನಿವಾರದಂದು ದೆಹಲಿಯ ಗಾಜಿಪುರದಲ್ಲಿನ ತ್ರಿಲ್ ಲವ್ರಿ ಸರ್ಕಲ್ ಬಳಿ ಇರುವ ಪೊಲೀಸ್ ಚೌಕಿಯಲ್ಲಿ ನಡೆದಿದ್ದು. ಲಂಚಪಡೆದ ಸ್ಥಳದಲ್ಲಿ ಸಿಸಿ ಟಿವಿ ಹದ್ದಿನಕಣ್ಣು ನಮ್ಮನ್ನು ಗಮನಿಸುತ್ತಿದೆ ಎನ್ನುವ ಅರಿವು ಇಲ್ಲದೆ. ಲಂಚಕ್ಕೆ ಕೈಯೊಡ್ಡಿ ಖಾಕೀ ಕಳಚುವಂತೆ ಮಾಡಿಕೊಂಡಿದ್ದಾರೆ.! ಅಮಾನತುಗೊಂಡ ಪೊಲೀಸರು ವ್ಯಕ್ತಿಯೊಬ್ಬನಿಂದ ಲಂಚ ಪಡೆದಿದ್ದಲ್ಲದೆ ಅದನ್ನು ಬಳಿಕ ಸಮನಾಗಿ ಹಂಚಿಕೊಂಡಿದ್ದಾರೆ. ಲಂಚ ಪಡೆಯುವ ಮುನ್ನ ಓರ್ವ ಪೊಲೀಸ್, ಆ ವ್ಯಕ್ತಿಯ ಬಳಿ ಚೌಕಾಸಿ ಕೂಡ ನಡೆಸಿದ್ದಾನೆ.

ಸಿಸಿ ಟಿವಿ ದೃಶ್ಯಾವಳಿಯಲ್ಲಿ ಕಂಡುಬರುವಂತೆ ಓರ್ವ ಪೊಲೀಸ್, ಚೌಕಿಗೆ ಬಂದ ವ್ಯಕ್ತಿ ಬಳಿ ಮಾತಿನಲ್ಲಿ ತೊಡಗುತ್ತಾನೆ. ಬಹುಶಃ ಅವರಿಬ್ಬರ ಮಧ್ಯೆ ಹಣದ ವ್ಯವಹಾರ ಕುರಿತಂತೆ ಚರ್ಚೆ ನಡೆದಿರುವಂತೆ ಕಾಣುತ್ತದೆ. ಬಳಿಕ ಆ ವ್ಯಕ್ತಿ ಹಣದ ಕಂತೆ ಇರುವ ಬಂಡಲ್ ಅನ್ನು ಟೇಬಲ್ ಮೇಲೆ ಇಟ್ಟಿದ್ದು, ಅಲ್ಲಿಂದ ತೆರಳುತ್ತಾನೆ. ಇದನ್ನು ತೆಗೆದುಕೊಂಡ ಪೊಲೀಸ್ ಕೌಂಟ್ ಮಾಡಿ ಬಳಿಕ ಅಲ್ಲಿದ್ದ ಇತರೆ ಇಬ್ಬರಿಗೂ ಹಂಚುತ್ತಾನೆ. ಈ ಸಂದರ್ಭದಲ್ಲಿ ಎಲ್ಲರ ಮುಖದಲ್ಲೂ ಮಂದಹಾಸವಿರುತ್ತದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರ ಗಮನಕ್ಕೂ ಬಂದಿದ್ದು, ಇದೀಗ ಇಬ್ಬರು ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಹಾಗೂ ಓರ್ವ ಹೆಡ್ ಕಾನ್ಸ್ಟೇಬಲ್ ಸೇರಿದಂತೆ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಅಲ್ಲದೆ ಈ ಕುರಿತಂತೆ ಇಲಾಖಾ ತನಿಖೆ ಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ಆದೇಶಿಸಿರುವುದಾಗಿ ತಿಳಿದುಬಂದಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!