10 ಬಾರಿ ವಿದ್ಯಾರ್ಥಿನಿಗೆ ಕಚ್ಚಿದ ಹಾವು.! ಕೊನೆಗೂ ಸಿಕ್ಕಿ ಬಿತ್ತು.!
10 ಬಾರಿ ವಿದ್ಯಾರ್ಥಿನಿಗೆ ಕಚ್ಚಿದ ಹಾವು.! ಕೊನೆಗೂ ಸಿಕ್ಕಿ ಬಿತ್ತು.! news.ashwasurya.in ಅಶ್ವಸೂರ್ಯ/ಉತ್ತರ ಪ್ರದೇಶ : ವಿದ್ಯಾರ್ಥಿಯನ್ನು ಬೆಂಬಿಡದೆ ಕಾಡಿದ್ದ ನಾರರಹಾವೊಂದು ಕೊನೆಗೂ ಸೆರೆಯಾಗಿದೆ. ಉರಗ ತಜ್ಞರ ನೆರವಿನಿಂದ ಕೊನೆಗೂ ಹಾವನ್ನು ಸೆರೆ ಹಿಡಿಯಲಾಗಿದೆ ಎಂದು ವರದಿಯಾಗಿದೆ.ದಿನನಿತ್ಯ ಭಯದಲ್ಲೇ ದಿನ ದೂಡುತ್ತಿದ್ದ ವಿದ್ಯಾರ್ಥಿನಿ ಈಗ ನಿಟ್ಟುಸಿರು ಬಿಡುವಂತಾಗಿದೆ.ಹಾವಿನ ಕಾಟಕ್ಕೆ ಬೇಸತ್ತಿದ್ದ, ಹಾವಿನಿಂದ ಕಚ್ಚಿಸಿಕೊಂಡು ಪ್ರತಿ ಕ್ಷಣವೂ ಭಯದಲ್ಲೇ ಕಾಲ ಕಳೆಯುತ್ತಿದ್ದ ಹುಡುಗಿಗೆ ಈಗ ನೆಮ್ಮದಿಯಾಗಿದೆ. ಸುಮಾರು 40 ದಿನಗಳಲ್ಲಿ 10 ಬಾರಿ ವಿದ್ಯಾರ್ಥಿನಿಯನ್ನು ಕಚ್ಚಿದೆ ಎಂದು ತಿಳಿದು…
