2021,ಸೆಪ್ಟೆಂಬರ್ 18ರಲ್ಲಿ ನೆಡೆದ ಇರ್ಫಾನ್ @ ಟ್ವಿಸ್ಟ್ ಇರ್ಫಾನ್ ಮರ್ಡರ್ ಪ್ರಕರಣ ಆರೋಪಿಗಳಿಗೆ ಜೀವಾವಧಿ ಶಿಕ್ಷೆ.

2021,ಸೆಪ್ಟೆಂಬರ್ 18ರಲ್ಲಿ ನೆಡೆದ ಇರ್ಫಾನ್ @ ಟ್ವಿಸ್ಟ್ ಇರ್ಫಾನ್ ಮರ್ಡರ್ ಪ್ರಕರಣದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ.

  ಅಶ್ವಸೂರ್ಯ/ಶಿವಮೊಗ್ಗ: ಕಳೆದ 2021ರ ಸೆಪ್ಟೆಂಬರ್ 18ರ ರಾತ್ರಿ ತುಂಗಾನಗರ ಪೊಲೀಸ್ ಠಾಣಾ ಸರಹದ್ದಿನ ಟಿಪ್ಪುನಗರದ 7ನೇ ಮುಖ್ಯ ರಸ್ತೆಯ 4ನೇ ಅಡ್ಡ ರಸ್ತೆಯಲ್ಲಿ ಲತೀಫ್, ಫರ್ವೇಜ್, ಸೈಯದ್ ಜಿಲಾನ್, ಜಾಫರ್ ಸಾದಿಕ್ @ ಚುವಾ, ರಾಜಿಕ್, ಶಾಬು @ ಶಾಬಾಜ್, ಶಾಬಿರ್ ಮತ್ತು ತಸ್ಮೀಂ ಎನ್ನುವವರು ಅಕ್ರಮ ಗಾಂಜಾ ಮಾರಾಟದ ವಿಚಾರವಾಗಿ ಶಿವಮೊಗ್ಗ ಅಣ್ಣಾನಗರದ ಇರ್ಫಾನ್ @ ಟ್ವಿಸ್ಟ್ ಇರ್ಫಾನ್ 36 ವರ್ಷದ ಯುವಕನೊಂದಿಗೆ ಜಗಳ ಮಾಡಿದ್ದಾರೆ ಈ ಸಂಧರ್ಭದಲ್ಲಿ ಇರ್ಫಾನ್ @ ಟ್ವಿಸ್ಟ್ ಇರ್ಫಾನ್  ನನ್ನು  ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುತ್ತಾರೆಂದು ಮೃತನ ಸಹೋದರ ನೀಡಿದ ದೂರಿನ ಮೇರೆಗೆ ತುಂಗಾನಗರ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0296/2021 ಕಲಂ 143, 144, 147, 148, 302 ಸಹಿತ 149 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತು.

ಈ ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ದೀಪಕ್ ಎಂ, ಇನ್ಸ್ಪೆಕ್ಟರ್ ತುಂಗಾನಗರ ಪೊಲೀಸ್ ಠಾಣೆ ರವರು ಪ್ರಕರಣವನ್ನು ಕೈಗೆತ್ತಿಕೊಂಡು ತನಿಖೆ ಪೂರೈಸಿ ಆರೋಪಿತರ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.

ತನಿಖಾಧಿಕಾರಿಗಳಾದ ಪೋಲಿಸ್ ಇನ್ಸ್ಪೆಕ್ಟರ್ ದೀಪಕ್ ಎಂ,

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶ್ರೀಮತಿ ಪಿ. ಓ. ಪುಷ್ಪಾ, ಸರ್ಕಾರಿ ಅಭಿಯೋಜಕರು, ಪ್ರಕರಣದ ವಾದ ಮಂಡಿಸಿದ್ದರು, ಶಿವಮೊಗ್ಗ ನಗರದ

ಘನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು, ಪ್ರಕರಣದ ಆರೋಪಿಗಳಾದ 1) ಲತೀಫ್, 20 ವರ್ಷ, RML ನಗರ ಶಿವಮೊಗ್ಗ ಟೌನ್, 2) ಫರ್ವೇಜ್ @ ಪರ್ರು, 23 ವರ್ಷ, ಟಿಪ್ಪುನಗರ ಶಿವಮೊಗ್ಗ ಟೌನ್, 3) ಸೈಯದ್ ಜಿಲಾನ್ @ ಜೀಲಾ, 19 ವರ್ಷ, ಟಿಪ್ಪುನಗರ ಶಿವಮೊಗ್ಗ ಟೌನ್,

4) ಜಾಫರ್ ಸಾದಿಕ್, 20 ವರ್ಷ, ಟಿಪ್ಪುನಗರ ಶಿವಮೊಗ್ಗ ಟೌನ್, 5) ಸೈಯದ್ ರಾಜೀಕ್ @ ರಾಜಿಕ್ 28 ವರ್ಷ, ಟಿಪ್ಪುನಗರ ಶಿವಮೊಗ್ಗ ಟೌನ್, 6) ಮೊಹಮ್ಮದ್ ಶಾಬಾಜ್ @ ಶಾಬು 19 ವರ್ಷ, ಟಿಪ್ಪುನಗರ ಶಿವಮೊಗ್ಗ ಟೌನ್, 7) ಅಬ್ದುಲ್ ಶಾಬೀರ್ @ ಶಾಬಿರ್ 24 ವರ್ಷ, ಟಿಪ್ಪುನಗರ ಶಿವಮೊಗ್ಗ ಟೌನ್, 8) ತಸ್ಲೀಂ @ ಮೊಹಮ್ಮದ್ ಯೂಸೂಫ್, 26 ವರ್ಷ, ಟಿಪ್ಪುನಗರ ಶಿವಮೊಗ್ಗ ಟೌನ್

ಇವರುಗಳ ವಿರುದ್ಧ ಆರೋಪ ದೃಡಪಟ್ಟಿದ್ದು,ಈ ಪ್ರಕರಣದ 5ನೇ ಆರೋಪಿಯಾಗಿದ್ದ ಸೈಯದ್ ರಾಜೀಕ್ @ ರಾಜಿಕ್ ಈತನು ಮೃತಪಟ್ಟಿರುತ್ತಾನೆ. ಉಳಿದ 07 ಜನ ಆರೋಪಿತರಿಗೆ ಮಾನ್ಯ ನ್ಯಾಯಾಧಿಶರಾದ ಶ್ರೀಮತಿ ಪಲ್ಲವಿ ಬಿ.ಆರ್ ರವರು ದಿನಾಂಕ:- 09-08-2024 ರಂದು ಜೀವಾವಧಿ ಶಿಕ್ಷೆ ಮತ್ತು ತಲಾ ರೂ 5,000/- ದಂಡ ವಿಧಿಸಿದ್ದು, ಮೃತ ಇರ್ಫಾನ್ @ ಟ್ವಿಸ್ಟ್ ಇರ್ಫಾನ್ ನ ಹೆಂಡತಿಗೆ ದಂಡದ ಮೊತ್ತದಲ್ಲಿ ರೂ 30,000/- ಗಳನ್ನು ನೀಡಲು ಆದೇಶಿಸಿರುತ್ತಾರೆ.

ಮಾನ್ಯ ಒಕ್ಕಲಿಗ ಸಮಾಜ ಬಾಂಧವರೇ ನಿಮ್ಮ ಅಮೂಲ್ಯವಾದ ಮತವನ್ನು ಈ ಮೇಲ್ಕಂಡ ಅಭ್ಯರ್ಥಿಗಳಿಗೆ ನೀಡುವ ಮೂಲಕ ಸಮುದಾಯದ ಸೇವೆಗೆ ಅವಕಾಶ ಕಲ್ಪಿಸಿ ಕೊಡಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ.

Leave a Reply

Your email address will not be published. Required fields are marked *

Optimized by Optimole
error: Content is protected !!