ತಂದೆಯ ಕೈಹಿಡಿದು ದೊಡ್ಡವಳಾದ ಮಗಳು ಸಾವಿನಂಚಿನಲ್ಲಿ ತಂದೆಯ ಕೈಗೆ ‘ಕೈ’ಯನನ್ನಷ್ಟೇ ಕೊಟ್ಟು ಹೋದಳು! ಚಿತೆ ಏರಿತು ಆಕೆಯ ಕೈಯಷ್ಟೆ.!

ತಂದೆಯ ಕೈಹಿಡಿದು ದೊಡ್ಡವಳಾದ ಮಗಳು ಸಾವಿನಂಚಿನಲ್ಲಿ ತಂದೆಯ ಕೈಗೆ ‘ಕೈ’ಯನನ್ನಷ್ಟೇ ಕೊಟ್ಟು ಹೋದಳು! ಚಿತೆ ಏರಿತು ಆಕೆಯ ಕೈಯಷ್ಟೆ.!

ಅಶ್ವಸೂರ್ಯ/ಶಿವಮೊಗ್ಗ: ಕೇರಳದ ವಯನಾಡ್‌ ರಾವುಲ್ ಗಾಂಧಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಂತಹ ಕ್ಷೇತ್ರ.! ಈ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಭೂಕುಸಿತದ ಸಂದರ್ಭದಲ್ಲಿ ತನ್ನ ಮುದ್ದಿನ ಮಗಳು,ಮಗನಂತ ಅಳಿಯ ಮುದ್ದಾದ ಮೊಮ್ಮಗ ತನ್ನ ಮಡದಿ ಎಲ್ಲರೂ ಇತನ ಕಣ್ಣೆದುರೆ ಜಲ ಪ್ರವಾಹದಲ್ಲಿ ಕಣ್ಮರೆಯಾಗಿ ಬಿಟ್ಟರು.ತನ್ನ ಕುಟುಂಬದವರಿಗಾಗಿ ಆತ ಹುಡುಕಾಡದ ಸ್ಥಳವಿಲ್ಲ. ಕೊನೆಗೆ ದೂರದಲ್ಲಿ ಉಕ್ಕಿ ಹರಿಯುತ್ತಿದ್ದ ಚಲಿಯಾರ್‌ ನದಿಯಲ್ಲಿ ಮಹಿಳೆಯೊಬ್ಬರ ಕೈಯೊಂದು ಸಿಕ್ಕಿದೆ.! ಇದು ಯಾರ ಕೈ! ಅವರ ಕಡೆಯವರು ಯಾರಾದರು ಗುರುತಿಸಬಹುದಾ ಎಂದುಕೊಂಡು ರಕ್ಷಣಕಾರ್ಯಪಡೆಯ ಸದಸ್ಯರು ಅದನ್ನು ಅಲ್ಲೆ ಇಟ್ಟಿದ್ದರು ಗುರುತಿಸಲು ಸಾಧ್ಯವಾಗುವಂತಹ ಕುರುಹು ಅ ಕೈಯಲ್ಲಿತ್ತು.! ಅದರ ಬೆರಳಲ್ಲಿ ಒಂದು ಉಂಗುರವಿತ್ತು.

ಅದನ್ನು ನೋಡಿದ ಒಬ್ಬ ವ್ಯಕ್ತಿ ಈ ಕೈ ನನ್ನ ಮಗಳದು ಎಂದು ದುಃಖಿಸಿದ್ದಾನೆ.! ಮಗಳ ಕೈಯನ್ನು ತನ್ನ ಕೈಯಲ್ಲಿ ಎತ್ತಿಕೊಂಡು ಅತ್ತುಬಿಟ್ಟಿದ್ದಾನೆ ತಂದೆ! ಈ ಸಾವು ಯಾರಿಗೂ ಯಾವ ತಂದೆಯ ಎದುರು ನೆಡೆಯದಿರಲಿ ಎಂದು ಎದೆಬಡಿದುಕೊಂಡು ತನ್ನ ಮನದಾಳದ ನೋವನ್ನೇಲ್ಲ ಹೊರಹಾಕಿದ್ದಾನೆ ಹೆತ್ತ ತಂದೆ.! ಮಗಳ ದೇಹ ಸಿಗದ ಕಾರಣಕ್ಕೆ ತಾನು ಕೈಹಿಡಿದು ಸಾಕಿದ ಮಗಳು ತನ್ನ ಕೈಯಷ್ಟನ್ನೆ ಬಿಟ್ಟುಹೋಗಿದ್ದಳು ಅದನ್ನೇ ಅಪ್ಪಿಕೊಂಡು ಪುತ್ರಿಯ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ ತಂದೆ ಅಕೆಯ ಸಿಕ್ಕ ಒಂದು ಕೈಯನ್ನಷ್ಟೇ ಚಿತೆಯ ಮೇಲೆ ಇಟ್ಟು ಅಗ್ನಿ ಸ್ಪರ್ಶಿಸಿ ದುಃಖಿಸುತ್ತಲೆ ಮಗಳ ಅಂತ್ಯಕ್ರಿಯೆ ಮುಗಿಸಿ. ವಿಧಿಯ ಆಟಕ್ಕೆ ಬಲಿಯಾದ ಮಗಳಿಗೆ ಅಂತಿಮ ವಿಧಾಯ ಹೇಳಿದ್ದಾನೆ !

ಘಟನೆಯ ಹಿನ್ನಲೆ…

ಕೇರಳದ ವಯನಾಡ್‌ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ತನ್ನ ಕುಟುಂಬವನ್ನೆ ಕಳೆದುಕೊಂಡು ಕೊನೆ ಒಬ್ಬರ ಮೃತದೇಹವು ಸಿಗದೆ ರೋಧಿಸುತ್ತಿದ್ದ ವ್ಯಕ್ತಿಗೆ ಕೊನೆಗೆ ಸಿಕ್ಕಿದ್ದು ಮಗಳ ಕೈಯಷ್ಟೆ.! ಈ ದುರಂತಕ್ಕೆ ಸಾಕ್ಷಿಯಾದ ಕೇರಳದ ವಯನಾಡ್‌ನಲ್ಲಿ ಕಂಡುಬಂದ ಹತ್ತಾರು ಘಟನೆಗಳಲ್ಲಿ ಇದೊಂದು ಮನಕಲುಕುವ ಘಟನೆಯಾಗಿದೆ.
ಈ ಘಟನೆಯಲ್ಲಿ ಸಿಕ್ಕ ಮಗಳ ಕೈಯೊಂದನ್ನೆ ಚಿತೆಗಿಟ್ಟು ಅಗ್ನಿಸ್ಫರ್ಶ ಮಾಡಿದ ನತದೃಷ್ಟ ತಂದೆಯ ಹೆಸರು ರಾಮಸ್ವಾಮಿ. ಇತನ ಪುತ್ರಿ ಜೀಶಾ. ತಂದೆಯ ಕೈ ಹಿಡಿದೇ ಬೆಳೆದ ಮುದ್ದಾದ ಮಗಳು. ರಾಮಸ್ವಾಮಿ ಅವರು ತನ್ನ ಮಗನ ಸಮಾನನಾದ ಮುರುಗನ್‌ಗೆ ತನ್ನ ಪುತ್ರಿ ಜೀಶಾಳನ್ನು ಕೈ ಹಿಡಿದು ಧಾರೆ ಎರೆದುಕೊಟ್ಟಿದ್ದರು. ಆದರೆ ಭೂಕುಸಿತದಲ್ಲಿ ಮಗಳು, ಅಳಿಯ, ಮೊಮ್ಮಗ ಅಕ್ಷಯ್‌ ಹಾಗೂ ರಾಮಸ್ವಾಮಿಯ ಮಡದಿ ತಂಕಮ್ಮ ಎಲ್ಲರೂ ಭೂಕುಸಿತದ ಪ್ರವಾಹದಲ್ಲಿ ಕಣ್ಮರೆಯಾಗಿಬಿಟ್ಟರು.! ಭೂಕುಸಿತ ಜಲಪ್ರವಾಹಕ್ಕೆ ಅವರೆಲ್ಲಾ ಕೊಚ್ಚಿ ಹೋಗಿದ್ದರು. ರಾಮಸ್ವಾಮಿ ಅದು ಹೇಗೋ ಬಚಾವಾಗಿ ಬಿಟ್ಟಿದ್ದರು.! ಕಣ್ಮರೆಯಾದ ಕುಟುಂಬದವರಲ್ಲಿ ಮುದ್ದಾದ ಮೊಮ್ಮಗ ಅಕ್ಷಯ್‌ ಶವ ಮಾತ್ರ ಸಿಕ್ಕಿತ್ತು. ಉಳಿದವರ ಸುಳಿವೆ ಇಲ್ಲಾ.? ಮೃತ ದೇಹಗಳ ಹುಡುಕಾಟಕ್ಕೆ ಮುಂದಾಗಿದ್ದ
ರಕ್ಷಣಾ ಪಡೆಗೆ ಚಲಿಯಾರ್‌ ನದಿಯಲ್ಲಿ ಮಹಿಳೆಯೊಬ್ಬರ ಒಂದು ಕೈ ಸಿಕ್ಕಿತ್ತು. ಅದರ ಬೆರಳಲ್ಲಿ ಉಂಗುರ ಇತ್ತು. ಉಂಗುರದಲ್ಲಿ ‘ಮುರುಗನ್‌’ ಎಂಬ ಹೆಸರಿದ್ದರಿಂದ ಅದನ್ನು ನೋಡಿದ ರಾಮಸ್ವಾಮಿ ದುಃಖ ತಡೆಯಲಾಗದೆ ನನ್ನ ಮಗಳು, ನನ್ನ ಮಗಳು.ಎಂದು ಎದೆ ಬಡಿದುಕೊಂಡು ಅಳಲಾರಂಭಿಸಿದ್ದ. ಕಣ್ಣೀರಿಡುತ್ತಲೆ ಮಗಳ ಅಂತ್ಯಕ್ರಿಯೆಗಾಗಿ ಸಣ್ಣ ಚರಿತೆಯನ್ನು ಮಾಡಿ ರೋಧಿಸುತ್ತಾ ತನ್ನ ತಲೆಯನ್ನು ಚಚ್ಚಿಕೊಳ್ಳುತ್ತಾ ಕೈಹಿಡಿದು ಬೆಳಸಿದ ಮಗಳ ಸಿಕ್ಕ ಕೈಯೊಂದನ್ನೆ ಚಿತೆಯಲ್ಲಿಟ್ಟು ಅಗ್ನಿ ಸ್ಫರ್ಶಮಾಡಿದ ತಂದೆ ರಾಮಸ್ವಾಮಿಯ ಸ್ಥಿತಿ ಯಾರಿಗೂ ಬಾರದಿರಲಿ.ಈ ಸಂಧರ್ಭದಲ್ಲಿ ನೆರೆದಿದ್ದವರ ಕಣ್ಣಂಚಿನಲ್ಲೂ ದುಃಖ ಮಡುಗಟ್ಟಿದೆ…..

Leave a Reply

Your email address will not be published. Required fields are marked *

Optimized by Optimole
error: Content is protected !!