ಹೊಸನಗರ: ನಗರ ಹೋಬಳಿಯಲ್ಲಿ ಮಳೆಯ ಆರ್ಭಟ ಮನೆ ಕಳೆದುಕೊಂಡ ಗೋಪಾಲಣ್ಣನಿಗೆ ಹಾಲಗದ್ದೆ ಉಮೇಶ್ ಧನಸಹಾಯ. ಮಳೆಯಿಂದ ಹಾನಿಯಾದ ಸ್ಥಳಗಳಿಗೆ ಭೇಟಿ

ಹೊಸನಗರ: ನಗರ ಹೋಬಳಿಯಲ್ಲಿ ಮಳೆಯ ಆರ್ಭಟ ಮನೆ ಕಳೆದುಕೊಂಡ ಗೋಪಾಲಣ್ಣನಿಗೆ ಹಾಲಗದ್ದೆ ಉಮೇಶ್ ಧನಸಹಾಯ. ಮಳೆಯಿಂದ ಹಾನಿಯಾದ ಸ್ಥಳಗಳಿಗೆ ಭೇಟಿ.

ಅಶ್ವಸೂರ್ಯ/ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಕಳೆದ ಹದಿನೈದು ದಿನಗಳಿಂದಲು ಬಿಟ್ಟು ಬಿಡದೆ ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಜನಜೀವನದ ಅಸ್ತವ್ಯಸ್ತವಾಗಿದೆ. ಅದರಲ್ಲೂ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಂತೂ ದಾಖಲೆಯ ಮಳೆ ಸುರಿಯುತ್ತಿದ್ದು ಜನರ ಬದುಕು ಕೂಡ ಮಳೆಯ ಆರ್ಭಟಕ್ಕೆ ಕೊಚ್ಚಿಕೊಂಡು ಹೋಗಿದೆ. ಮನೆಯ ಸೂರಿನ ಜೋತೆಗೆ ಬೆಳೆದ ಬೆಳೆ ಕೂಡ ನಾಶವಾಗಿದೆ. ಭತ್ತದ ಗದ್ದೆಗಳು ಹೊಳೆಯಂತಾದರೆ. ಅಡಿಕೆ ಮರಗಳು ಗಾಳಿಯ ಬಿರುಸಿಗೆ ಧರೆಗೆ ಉರುಳಿವೆ. ಇನ್ನೂ ಕಾಲು ಸಂಕಗಳು,ಕಿರು ಸೇತುವೆಗಳು,ಎಲ್ಲಿದೆ ಎಂದು ಹುಡುಕುವಂತಾಗಿದೆ.

ಒಟ್ಟಿನಲ್ಲಿ ಮಳೆರಾಯನ ಆರ್ಭಟಕ್ಕೆ ಜನರ ಜೀವನ ನಿತ್ಯ ಆಕಾಶವನ್ನೆ ದಿಟ್ಟಿಸಿ ನೋಡುವಂತಾಗಿದೆ.ಮಳೆರಾಯ ಯಾವಾಗ ಮೌನಕ್ಕೆ ಜಾರುತ್ತಾನೆಂದು.! ಕಂಗಾಲಾದ ರೈತರು, ಶಾಲೆಯಿಂದ ದೂರ ಉಳಿದ ಮಕ್ಕಳು,ಹಸಿವಿನಿಂದ ಬಳಲುತ್ತಿರುವ ಬಡ ಕುಟುಂಬಗಳು.ಇದ್ದ ಮನೆಗಳು ಮಳೆ ಹೊಡೆತಕ್ಕೆ ಧರೆಗುಳಿದ ಸೂರು ಕಳೆದುಕೊಂಡು ಬಿದಿಗೆ ಬಿದ್ದ ಹತ್ತಾರು ಕುಟುಂಬಗಳ ಕಣ್ಣಿರನ್ನು ಕೇಳುವರಿಲ್ಲದಂತಾಗಿದೆ.ಇನ್ನೂ ದನಕರುಗಳ ಸ್ಥಿತಿ ಹೇಳತಿರದಾಗಿದೆ. ಗಮನ ಹರಿಸ ಬೇಕಾದ ಸರ್ಕಾರ ಮತ್ತು ವಿರೋಧ ಪಕ್ಷಗಳು ಮುಡಾ ಹಗರಣದ ಗೂಡಿನೊಳಗೆ ಬೆಚ್ಚಗೆ ಮಲಗಿದ್ದಾರೆ.! ಕರ್ನಾಟಕದಲ್ಲಿ ಏನು ಆಗಿಲ್ಲ ಎನ್ನುವಂತೆ ಒಂದೆ ವಿಷಯವನ್ನಿಟ್ಟುಕೊಂಡು ವಿರೋಧ ಪಕ್ಷದ ನಾಯಕರು ಜಪಮಾಡುತ್ತಿದ್ದರೆ.ಆಡಳಿತ ರೂಢ ಪಕ್ಷ ಕಾಂಗ್ರೆಸಿನ ಮುಖ್ಯಮಂತ್ರಿಗಳು,ಉಪ ಮುಖ್ಯಮಂತ್ರಿಗಳು ಹಾಗೂ ಹತ್ತಾರು ಸಚಿವರು ಸಚಿವ ಸ್ಥಾನದ ಆಕಾಂಕ್ಷೆಗಳು ದೆಹಲಿ ಪ್ರವಾಸಕ್ಕೆ ಮುಂದಾಗಿದ್ದಾರೆ. ಇನ್ನೂ ಸ್ಥಳೀಯವಾಗಿ ಇರುವ ಉಸ್ತುವಾರಿ ಸಚಿವರು ಹಾಗೂ ಶಾಸಕರು ತುಂಬಿದ ನದಿಗಳಿಗೆ ಬಾಗಿನ ಅರ್ಪಿಸುವುದರಲ್ಲಿ ಬ್ಯೂಸಿಯಾಗಿದ್ದಾರೆ. ಎಂದರೆ ಜಲ ಪ್ರಳಯಕ್ಕೆ ಸಿಲುಕಿದ ಜನರ ಸಂಕಷ್ಟವನ್ನು ಕೇಳುವವರು ಯಾರು?

ಅದರಲ್ಲೂ ಹೊಸನಗರ ತಾಲೂಕಿನ ನಗರ ಹೋಬಳಿಯಲ್ಲಿ ನಿರಂತರವಾಗಿ ದಾಖಲೆಯ ಮಳೆ ಸುರಿಯುತ್ತಿದ್ದು. ಸಾಕಷ್ಟು ಹಾನಿಯಾಗಿದೆ. ಇದೆಲ್ಲವನ್ನೂ ಗಮನಿಸಿದ ಬಿಜೆಪಿಯ ಯುವ ನಾಯಕ.ಹಾಲಿ ಹೊಸನಗರ ಪುರಸಭೆಯ ಸದಸ್ಯ ಹಾಲಗದ್ದೆ ಉಮೇಶ್ ಅವರು ತಮ್ಮ ‌ಬೆಂಬಲಿಗರೊಂದಿಗೆ ನಗರ‌ ಹೋಬಳಿ ಕ್ಷೇತ್ರದಲ್ಲಿ ಹಾನಿಗೊಳಗಾದ ಸ್ಥಳಗಳಿಗೆ ಬೇಟಿ ನೀಡಿದ್ದಾರೆ.

ಈ ನಿಟ್ಟಿನಲ್ಲಿ ನಗರ ಹೋಬಳಿಯ ಬೈಸೆ ಗ್ರಾಮದ ಚಂದ್ರಣ್ಣ ಹಾಗೂ ಅಕ್ಕಪಕ್ಕದ ತೋಟದಲ್ಲಿ ಹಳ್ಳದ ತಡೆಗೊಡೆ ಒಡೆದು ಸಾಕಷ್ಟು ಫಸಲು ಬರುತ್ತಿದ್ದ ಅಡಿಕೆ ಮರಗಳು ಧರೆಗುಳಿ ಬಹಳಷ್ಟು ಹಾನಿಯಾಗಿದ್ದು ಎಲ್ಲವನ್ನೂ ಹಾಲಗದ್ದೆ ಉಮೇಶ್ ಭೇಟಿ ನೀಡಿ ವಿಕ್ಷಿಸಿದ್ದಾರೆ ಜೋತೆಗೆ ಸ್ಥಳೀಯ ಶಾಸಕರಾದ ಆರಗ ಜ್ಞಾನೇಂದ್ರ ಅವರ ಗಮನಕ್ಕೆ ತಂದು ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.

ಇನ್ನೂ ನಗರ ಹೋಬಳಿಯ ಕೆರೆಗದ್ದೆ ಗೋಪಾಲಣ್ಣನ ಮನೆಯ ಗೋಡೆ ಕುಸಿದಿದ್ದು ಸ್ಥಳಕ್ಕೆ ಹಾಲಗದ್ದೆ ಉಮೇಶ್, ಎನ್ ವೈ ಸುರೇಶ್ . ಬೈಸೆ ಪಂಚಾಯತ್‌ ಸದಸ್ಯರಾದ ಕುಮಾರ್ ಹಾಗೂ ಶಾಸಕರ ಆಪ್ತ ಸಹಾಯಕರಾದ ಹಿರಿಮನೆ ರಾಜೇಶ್. ಮತ್ತು ಮಧುಕರ್ ಹಾಗೂ ಮುಂತಾದ ಸ್ಥಳೀಯರು ನಾಯಕರು ಹಾಲ್ಗದ್ದೆ ಉಮೇಶ್ ಅವರ ಜೊತೆಗಿದ್ದು ಹಾನಿಗೊಳಗಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿ ಕ್ಷೇತ್ರದ ಶಾಸಕರ ಗಮನಕ್ಕೆ ತಂದಿದ್ದಾರೆ.ಶಾಸಕರು ಸರ್ಕಾರದ ಗಮನಕ್ಕೆ ತಂದು ಸೂಕ್ತ ಪರಿಹಾರ ಕೊಡಿಸುವ ಭರವಸೆಯನ್ನು ನೀಡಿದ್ದಾರೆ. ಇದೆ ಸಂಧರ್ಭದಲ್ಲಿ ಹಾಲಗದ್ದೆ ಉಮೇಶ್ ಅವರು ತಮ್ಮ ಕೈಲಾದ ಧನ ಸಹಾಯವನ್ನು ಮನೆ ಕಳೆದುಕೊಂಡ ಗೋಪಾಲಣ್ಣನವರಿಗೆ ನೀಡಿದ್ದಾರೆ.

ಇಂತಹ ಸಂಕಷ್ಟದ ಸಮಯದಲ್ಲಿ ಆಡಳಿತಾರೂಢ ಪಕ್ಷದ
ಜನನಾಯಕರು ಕಣ್ಮರೆಯಾದ ಸಂಧರ್ಭದಲ್ಲಿ ಒಬ್ಬ ಯುವನಾಯಕ ಹಾಲಗದ್ದೆ ಉಮೇಶ್ ಜನರ ರೈತರ ಸಂಕಷ್ಟಕ್ಕೆ ಕೈಜೋಡಿಸಿರುವುದು ನೊಂದ ಜೀವಗಳಿಗೆ ಒಂದಷ್ಟು ಧೈರ್ಯ ತುಂಬಿದಂತಾಗಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!