ಪತ್ರಿಕಾ ಬಳಗದ ಆತ್ಮೀಯ ಗೆಳೆಯ ವಿಶ್ವನಾಥ್ ಕಾಶಿ ಇನ್ನಿಲ್ಲ

ಪತ್ರಿಕಾ ಬಳಗದ ಆತ್ಮೀಯ ಗೆಳೆಯ ವಿಶ್ವನಾಥ್ ಕಾಶಿ ಇನ್ನಿಲ್ಲ

ಅಶ್ವಸೂರ್ಯ/ಶಿವಮೊಗ್ಗ: ಹಲವು ದಶಕಗಳಿಂದ ಹಲವು ಪತ್ರಿಕೆಗಳ ಮುದ್ರಣ ವಿಭಾಗದಲ್ಲಿ ಕೇಲಸ ಮಾಡಿದ ಆನುಭವಿ ಮತ್ತು ರಾಜ್ಯ ಮಟ್ಟದ ಪತ್ರಿಕಾ ಸಂಸ್ಥೆಯ ಮುದ್ರಣ ಕ್ಷೇತ್ರದಲ್ಲಿ ತನ್ನನ್ನು ತೋಡಗಿಸಿಕೊಂಡು ಜೋತೆಗೆ ತನ್ನದೆ ಅದ ಸ್ವಂತ ಮುದ್ರಣವನ್ನು ತೆರೆದು ದಶಕಗಳ ಕಾಲ ಮಾಧ್ಯಮ ವಲಯದಲ್ಲಿ ಗುರುತಿಸಿಕೊಂಡಿದ್ದ ಕಾಶಿ ಸ್ವಲ್ಪಕಾಲ “ಭುವನ ವಾರ್ತೆ” ದಿನಪತ್ರಿಕೆಯನ್ನು ತನ್ನ ಸಂಪಾದಕತ್ವದಲ್ಲಿ ಹೊರತಂದ ಹಿರಿಮೆ ಕಾಶಿ ಅವರದು. ಪತ್ರಿಕಾ ರಂಗವನ್ನೆ ತನ್ನ ಉಸಿರಾಗಿಸಿಕೊಂಡಿದ್ದ ಕಾಶಿ ಇಂದು ಉಸಿರು ಚೆಲ್ಲಿದ್ದಾರೆ . ವಿಶ್ವನಾಥ್ ಕಾಶಿ ಇಂದು ಮುಂಜಾನೆ ನಿಧನರಾಗಿದ್ದಾರೆ. ಕೆಲ ದಿನಗಳ ಹಿಂದೆ ಹೃದಯ ಸಂಬಂಧಿ ಕಾಯಿಲೆಗೆ ಒಳಗಾಗಿದ್ದ ಕಾಶಿ ಇಂದು ಮುಂಜಾನೆ ಅನಾರೋಗ್ಯದಿಂದ ಬಳಲಿದ್ದಾರೆ ತಕ್ಷಣವೇ ಇವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಚಿಕಿತ್ಸೆಗೆ ಸ್ಪಂದಿಸದ ಹಿನ್ನಲೆಯಲ್ಲಿ ಇಂದು ಮರಳಿ ಬಾರದೂರಿಗೆ ಪಯಣ ಬೆಳೆಸಿದ್ದಾರೆ.

ಊರಗಡೂರು ಶ್ರೀ ವಿನಾಯಕ ಸ್ವಾಮಿ ದೇವಾಲಯದ ರಸ್ತೆಯಲ್ಲಿ ಕಾಶಿ ಅವರ ಪಾರ್ಥಿವ ಶರಿರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಇಂದು ಮಧ್ಯಾಹ್ನ 12 ಗಂಟೆಗೆ ರೋಟರಿ ಚಿತಾಗಾರದಲ್ಲಿ ಅಂತಿಮ ವಿಧಿವಿಧಾನಗಳು ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ ಪತ್ರಕರ್ತೆ ಪದ್ಮಿನಿ ಹಾಗೂ ಇಬ್ಬರು ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಬಿಟ್ಟು ಕಾಶಿ ಅಗಲಿದ್ದಾರೆ.
ಪತ್ರಿಕೆಗಳ ಮುದ್ರಣ ವಿಭಾಗದ ಮೇಧಾವಿ ಕಾಶಿ
ಅವರ ನಿಧನ ಶಿವಮೊಗ್ಗ ಮಾಧ್ಯಮ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಇವರ ಆತ್ಮಕ್ಕೆ ಚಿರಶಾಂತಿ ದೊರಕಲಿ

Leave a Reply

Your email address will not be published. Required fields are marked *

Optimized by Optimole
error: Content is protected !!