ತುಂಗೆಯ ಒಡಲು ಬತ್ತಿ ಹೋಗದಂತೆ ಕಾಪಾಡಿಕೊಳ್ಳಲು ದಿಟ್ಟ ಹೆಜ್ಜೆ ಇಟ್ಟ ನಮ್ಮ ಶಿವಮೊಗ್ಗ ಟೀಮ್.!

ತುಂಗೆಯ ಒಡಲು ಬತ್ತಿ ಹೋಗದಂತೆ ಕಾಪಾಡಿಕೊಳ್ಳಲು ದಿಟ್ಟ ಹೆಜ್ಜೆ ಇಟ್ಟ ನಮ್ಮ ಶಿವಮೊಗ್ಗ ಟೀಮ್.!

ಅಶ್ವಸೂರ್ಯ/ಶಿವಮೊಗ್ಗ: ಕಳೆದ ಎರಡು ಮೂರು ವರ್ಷಗಳಿಂದ ಮಲೆನಾಡಿನ ತುಂಗೆಯ ಒಡಲು ಬೇಸಿಗೆಯಲ್ಲಿ ಬತ್ತಿಹೋಗುತ್ತಿದ್ದಾಳೆ,ತುಂಗೆಯನ್ನೆ ನಂಬಿದವರ ಬದುಕು ಬರಿದಾಗಿಹೋಗಿತ್ತು.! ಆದರೆ ಇದು ಹೀಗೆಯೇ ಮುಂದುವರಿದರೆ ಮಲೆನಾಡು ಭಾಗದಲ್ಲಿ ತುಂಗೆಯ ನೀರನ್ನು ನಂಬಿ ಸಾವಿರಾರು ಮಂದಿ ರೈತರು ಬದುಕು ಕಟ್ಟಿಕೊಂಡಿದ್ದಾರೆ ಜೋತೆಗೆ ತುಂಗಾ ಪಾನದೊಂದಿಗೆ ಉಸಿರಾಡುತ್ತಿರುವ ಲಕ್ಷಾಂತರ ಮಂದಿ ಮುಂದೊಂದು ದಿನ ಪರಿತಪಿಸುವ ದಿನಕ್ಕೆ ತಲುಪಲು ಹೆಚ್ಚಿನ ವರ್ಷಗಳು ಬೇಡವಾಗಿದೆ. ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡ ನಮ್ಮ ಶಿವಮೊಗ್ಗ ತಂಡವು ಮಲೆನಾಡನ್ನು ಉಳಿಸಲು, ತುಂಗೆಯ ಒಡಲು ಬರಿದಾಗದಂತೆ (ಬತ್ತದಂತೆ) ಕಾಪಾಡಿಕೊಳ್ಳಲು ದಿಟ್ಟ ಹೆಜ್ಜೆಯೊಂದನ್ನು ಇಟ್ಟಿದ್ದಾರೆ.!

ಆದ್ದರಿಂದಾಗಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಮಲೆನಾಡಿನ ಕಾಡುಗಳಲ್ಲಿ ಬೃಹತ್ ಪ್ರಮಾಣದಲ್ಲಿ ಸಸಿಗಳನ್ನು ನೆಟ್ಟು, ಟ್ರೀ ಗಾರ್ಡ್ ಗಳಿಂದ ಆ ಸಸಿಗಳನ್ನು ಸಂರಕ್ಷಿಸಿ, ಪೋಷಿಸಿ ಬರಿದಾದ ಕಾಡುಗಳನ್ನು ದಟ್ಟ ಅರಣ್ಯವನ್ನಾಗಿಸುವ ಕಾರ್ಯಕ್ಕೆ ಮುನ್ನುಡಿ ಬರೆದಿದೆ, ಪ್ರತಿ ವರುಷವೂ ಈ ಕಾರ್ಯಕ್ರಮವನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ ಪಣತೊಟ್ಟಿದೆ. ನಮ್ಮ ಶಿವಮೊಗ್ಗ ತಂಡದ ಗಗನ್ ಕೂಳೂರು, ಶರತ್ ಕೋಣೆಗದ್ದೆ, ಭರತ್ ಕೋಣೆಗದ್ದೆ, ತೇಜಸ್ವಿ ಹೊಳೆಕೊಪ್ಪ, ಯಶಸ್ವಿ ಹೊಳೆಕೊಪ್ಪ ಎಂಬ ಸಮಾನ ಮನಸ್ಕ ಯುವಕರು ದಿನಾಂಕ 22 ಜೂನ್ 2024ರ ಶನಿವಾರ ದಂದು ತೀರ್ಥಹಳ್ಳಿ ತಾಲೂಕಿನ ಚಿಪ್ಪಲುಗುಡ್ಡೆ ಮತ್ತು ನವಿಲು ಕಲ್ಲು ಗುಡ್ಡದಲ್ಲಿ ಬೃಹತ್ ಪ್ರಮಾಣದಲ್ಲಿ ಗಿಡಗಳನ್ನು ನೆಟ್ಟು, ಟ್ರೀ ಗಾರ್ಡ್ ಹಾಕುವ ಕಾರ್ಯಕ್ರಮವನ್ನು ಏರ್ಪಾಡು ಮಾಡಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯರೂ,

ಮಾರ್ಗದರ್ಶಕರೂ ಆದ ಶ್ರೀಯುತ ಉಪೇಂದ್ರ ಕೋಣೆಗದ್ದೆ ರವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ತಾಯಿ ಮನೆಯ ಸಂಸ್ಥಾಪಕರು, ಜೆಸಿಐ ಶಿವಮೊಗ್ಗ ರಾಯಲ್ಸ್ ನ ಅಧ್ಯಕ್ಷರು ಆದ ಜೆಎಫ್ಎಸ್ ಸುದರ್ಶನ್ ತಾಯಿಮನೆಯವರು ವಹಿಸಿದ್ದರು, ತೀರ್ಥಹಳ್ಳಿ ಅರಣ್ಯ ಇಲಾಖೆಯ RFO ಲೋಕೇಶ್ ರವರು, DRFO ಶಿವಕುಮಾರ್, DRFO ಪುನಿತ್ ಹಾಗೂ ಸಿಬ್ಬಂದಿವರ್ಗದವರು ಪಾಲ್ಗೊಂಡಿದ್ದರು.

ಜೆಸಿಐ ಸಂಸ್ಥೆ, ಮೇಳಿಗೆ ಮತ್ತು ಕಟ್ಟೆಹಕ್ಕಲು ಗ್ರಾಮ ಪಂಚಾಯತಿ ಯವರು, ಸರಕಾರಿ ಪ್ರೌಢ ಶಾಲೆ ಮೇಳಿಗೆ, ಚಿಪ್ಪಲುಗುಡ್ಡೆ ಸಿದ್ಧಿವಿನಾಯಕ ದೇವಸ್ಥಾನ ವ್ಯವಸ್ಥಾಪಕ ಸೇವಾ ಸಮಿತಿ ಹಾಗೂ ಇನ್ನಿತರ ಸಂಘ-ಸಂಸ್ಥೆಗಳು ಈ ಸತ್ಕಾರ್ಯಕ್ಕೆ ಕೈಜೋಡಿಸಿದ್ದವು. ಎಲ್ಲರ ಸಹಕಾರದಿಂದ 300 ಕ್ಕೂ ಹೆಚ್ಚು ಹೆಮ್ಮರವಾಗಿ ಬೆಳೆಯುವ ಜಾತಿಗೆ ಸೇರಿದ, 25 ವಿವಿಧ ಬಗೆಯ ಗಿಡಗಳನ್ನು ನೆಡಲಾಯಿತು, ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಮೂಡಿ ಬಂದಿತು.

Leave a Reply

Your email address will not be published. Required fields are marked *

Optimized by Optimole
error: Content is protected !!