ತಾನಿದ್ದ ಅಪಾರ್ಟ್‌ಮೆಂಟ್ ನಿಂದ ಕೆಳಕ್ಕೆ ಹಾರಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಡೆವಿಡ್ ಜಾನ್ಸನ್ ಆತ್ಮಹತ್ಯೆ ಶರಣು!

ತಾನಿದ್ದ ಅಪಾರ್ಟ್‌ಮೆಂಟ್ ನಿಂದ ಕೆಳಕ್ಕೆ ಹಾರಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಡೆವಿಡ್ ಜಾನ್ಸನ್ ಆತ್ಮಹತ್ಯೆ ಶರಣು.!

ಅಶ್ವಸೂರ್ಯ/ಬೆಂಗಳೂರು: ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಅಪಾರ್ಟ್ಮೆಂಟ್‌ನಿಂದ ಬಿದ್ದು ಇಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಆತ್ಮಹತ್ಯೆಗೆ ಶರಣಾದ ಕ್ರಿಕೆಟಿಗ
ಡೇವಿಡ್ ಜಾನ್ಸನ್ (52) ಆತ್ಮಹತ್ಯೆ ಮಾಡಿಕೊಂಡಿರುವ ಭಾರತದ ಮಾಜಿ ಕ್ರಿಕೆಟಿಗ. ಇಲ್ಲಿನ ಎಸ್‌ಎಲ್‌ವಿ ಪ್ಯಾರಡೈಸ್‌ ಅಪಾರ್ಟ್ಮೆಂಟಿನ 4ನೇ ಮಹಡಿಯಿಂದ ಕೆಳಕ್ಕೆ ಹಾರಿ ಪ್ರಾಣಬಿಟ್ಟಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾದರೂ ಚಿಕಿತ್ಸೆ ಫಲಕಾರಿಯಾಗದೇ ಡೇವಿಡ್ ಜಾನ್ಸನ್‌ ಸಾವನ್ನಪ್ಪಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದಿಲ್ಲವಾದರೂ ಮೇಲ್ನೋಟಕ್ಕೆ ಅನಾರೋಗ್ಯದಿಂದ ಬಳಲುತ್ತಿದ್ದ ಜಾನ್ಸನ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಕೊತ್ತನೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಮೃತ ದೇಹವನ್ನು ಶವಪರೀಕ್ಷೆಗೆ ಕಳುಹಿಸಿದ್ದಾರೆ.

1971ರ ಅಕ್ಟೋಬರ್ 16ರಂದು ಅರಸೀಕೆರೆಯಲ್ಲಿ ಜನಿಸಿದ್ದ ಡೇವಿಡ್ ಜೂಡ್ ಜಾನ್ಸನ್ ಕರ್ನಾಟಕದ ಹೆಸರಾಂತ ಕ್ರಿಕೆಟ್ ಆಟಗಾರರಲ್ಲಿ ಇವರು ಒಬ್ಬರಾಗಿದ್ದಾರೆ ತನ್ನ ವೇಗದ ಬೌಲಿಂಗ್ ನಿಂದಲೇ ಹೆಸರುವಾಸಿಯಾದ ಜಾನ್ಸನ್ ಭಾರತ ತಂಡದ ಪರವಾಗಿ ಆಡಿದ್ದಾರೆ. ಕಾರ್ನಾಟಕದ ಪರವಾಗಿ ಸಾಕಷ್ಟು ರಣಜಿ ಪಂದ್ಯಗಳನ್ನು ಆಡಿದ್ದಾರೆ ಜಾನ್ಸನ್, ಬೆಳಗಾವಿ ಪ್ಯಾಂಥರ್ಸ್ ಪರವಾಗಿಯು ಆಡಿದ್ದಾರೆ. ತಂಡದ ಪರವಾಗಿಯೂ ಆಡಿದ್ದಾರೆ.
ಜಾನ್ಸನ್ ಟೀಂ ಇಂಡಿಯಾ ಪರ ಆಡಿದ 2 ಟೆಸ್ಟ್ ಪಂದ್ಯ, 4 ಇನ್ನಿಂಗ್ಸ್ಗಳಲ್ಲಿ 3 ವಿಕೆಟ್ ಕಿತ್ತು, 143 ರನ್ ಬಾರಿಸಿದ್ದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 39 ಪಂದ್ಯಗಳನ್ನಾಡಿದ್ದು 3,579 ರನ್ ಗಳಿಸಿ, 125 ವಿಕೆಟ್ ಕಿತ್ತಿದ್ದರು. ಲಿಸ್ಟ್-ಎ ಕ್ರಿಕೆಟ್‌ನಲ್ಲಿ 33 ಪಂದ್ಯಗಳನ್ನಾಡಿ 1,293 ರನ್ ಗಳಿಸಿ, 41 ವಿಕೆಟ್ ಪಡೆದ ಸಾಧನೆಯನ್ನು ಮಾಡಿದ್ದಾರೆ. ಕರ್ನಾಟಕ ಕಂಡ ಶ್ರೇಷ್ಠ ಆಟಗಾರರಲ್ಲಿ ಡೇವಿಡ್ ಜಾನ್ಸನ್ ಕೂಡ ಒಬ್ಬರು.

ಇವರು ರಾಜ್ಯಮಟ್ಟದ ಸಾಕಷ್ಟು ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲು ಆಡಿದ್ದಾರೆ.ನಾನು ಕೂಡ ನಮ್ಮ ಭಾರತ್ ತಂಡದ ನಾಯಕನಾಗಿ ಡೆವಿಡ್ ಜಾನ್ಸನ್ ಆಡಿದ ತಂಡದ ವಿರುದ್ಧ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಇವರ ಎದುರಾಳಿಯಾಗಿ ನಾನು ಆಡಿದ್ದೇನೆ.‌..ಜಾನ್ಸನ್ ಅವರ ಆತ್ಮೀಯ ವಲಯ ಬಿಯರ್ ಜಾನ್ಸನ್ ಎಂದು ಕರೆಯುತ್ತಿದ್ದರು.ಒಟ್ಟಿನಲ್ಲಿ ಕರ್ನಾಟಕ ಕಂಡ ಒಬ್ಬ ಶ್ರೇಷ್ಠ ಕ್ರಿಕೆಟಿಗ ಡೆವಿಡ್ ಜಾನ್ಸನ್ ದುರಂತ ಅಂತ್ಯಕಂಡಿದ್ದು ಮಾತ್ರ ನೋವಿನ ಸಂಗತಿ… ಮೃತ ಜಾನ್ಸನ್ ಆತ್ಮಕ್ಕೆ ಚಿರಶಾಂತಿ ದೊರಕಲಿ….

Leave a Reply

Your email address will not be published. Required fields are marked *

Optimized by Optimole
error: Content is protected !!