ರೇಣುಕಾ ಸ್ವಾಮಿಯ ಬರ್ಬರ ಹತ್ಯೆಯನ್ನು ಖಂಡಿಸಿ ಬಿಳಿಕಿ ಮಠದ ಪರಮ ಪೂಜ್ಯರಾದ ಶ್ರೀ ರಾಚೋಟೇಶ್ವರ ಸ್ವಾಮೀಜಿ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

ರೇಣುಕಾ ಸ್ವಾಮಿಯ ಬರ್ಬರ ಹತ್ಯೆಯನ್ನು ಖಂಡಿಸಿ ಬಿಳಿಕಿ ಮಠದ ಪರಮ ಪೂಜ್ಯರಾದ ಶ್ರೀ ರಾಚೋಟೇಶ್ವರ ಸ್ವಾಮೀಜಿ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

ಅಶ್ವಸೂರ್ಯ/ಶಿವಮೊಗ್ಗ: ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘ ಹಾಗೂ ಜಿಲ್ಲೆಯ ವಿವಿಧ ಸಂಘಟನೆಗಳಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಚಿತ್ರದುರ್ಗದ ರೇಣುಕಾ ಸ್ವಾಮಿಯ ಬರ್ಬರ ಹತ್ಯೆಯನ್ನು ಖಂಡಿಸಿ ಬಿಳಿಕಿ ಮಠದ ಪರಮ ಪೂಜ್ಯರಾದ ಶ್ರೀ ಶ್ರೀ ಶ್ರೀ ರಾಚೋಟೇಶ್ವರ ಸ್ವಾಮೀಜಿ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಘಟನೆಯ ಕುರಿತು ಉಗ್ರವಾಗಿ ಖಂಡಿಸಲಾಯಿತು.

ರಾಜ್ಯ ಸರ್ಕಾರ ಈ ಒಂದು ಪ್ರಕರಣದಲ್ಲಿ ಯಾವುದೇ ಹಸ್ತಕ್ಷೇಪ ಮಾಡದೆ ವಿಶೇಷ ಪ್ರಕರಣ ಎಂದು ಭಾವಿಸಿ ಪ್ರಭಾವಿಗಳ ಒತ್ತಡಕ್ಕೆ ಮಣಿಯದೇ ನಿಷ್ಪಕ್ಷಪಾತ ತನಿಖೆ ನಡೆಸಿ ಕೊಲೆ ನಡೆಸಿರುವ ಆರೋಪಿಗಳಿಗೆ ಕಾನೂನು ರೀತ್ಯಾ ಕಠಿಣ ಶಿಕ್ಷೆ ವಿಧಿಸಲು ಕ್ರಮಕೈಗೊಳ್ಳುವಂತೆ ಈ ಮೂಲಕ ಕಣ್ಣೀರಿನಲ್ಲಿ ದಿನದೂಡುತ್ತಿರುವ ಕುಟುಂಬದ ಸದಸ್ಯರಿಗೆ ಸೂಕ್ತ ನ್ಯಾಯ ಕೊಡಿಸುವಂತೆ ಈ ಸಂದರ್ಭದಲ್ಲಿ ಆಗ್ರಹ ಪಡಿಸಲಾಯಿತು.

ಈ ಸಂದರ್ಭದಲ್ಲಿ ಪ್ರಮುಖರಾದ ಶ್ರೀ ರುದ್ರೇಗೌಡ ಅವರು, ಶ್ರೀ ಜ್ಯೋತಿಪ್ರಕಾಶ್ ರವರು, ಶ್ರೀ ಜಗದೀಶ್ ಅವರು, ಶ್ರೀ ಮರುಳೇಶ್ ಅವರು, ಶ್ರೀ ಚಂದ್ರಪ್ಪ ಅವರು, ಶ್ರೀ ಬಳ್ಳೇಕೆರೆ ಸಂತೋಷ ಅವರು, ಶ್ರೀ ಆಯನೂರು ಮಂಜುನಾಥ್ ಅವರು, ಶ್ರೀ ರೇಣುಕಾರಾಧ್ಯ ಅವರು, ಶ್ರೀಮತಿ ರೇಣುಕಾ ನಾಗರಾಜ್ ಅವರು, ಶ್ರೀಮತಿ ಅನಿತಾ ರವಿಶಂಕರ್, ಪತ್ರಕರ್ತ ಸೋಮನಾಥ್ ಅವರು ಸೇರಿದಂತೆ ಸಮಾಜದ ಅನೇಕ ಗಣ್ಯರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Optimized by Optimole
error: Content is protected !!