ಶಿವಮೊಗ್ಗ: ಬಿಜೆಪಿ ಹಿರಿಯ ಮುಖಂಡ ಮಾಜಿ ಎಂಎಲ್​​ಸಿ ಮತ್ತೂರು ಎಂ.ಬಿ‌.ಭಾನುಪ್ರಕಾಶ್ ಪ್ರತಿಭಟನೆ ವೇಳೆ ಹೃದಯಾಘಾತದಿಂದ ನಿಧನ

ಮಾಜಿ ಎಂಎಲ್​​ಸಿ ಎಂ ಬಿ ಭಾನುಪ್ರಕಾಶ್

ಶಿವಮೊಗ್ಗ: ಬಿಜೆಪಿ ಹಿರಿಯ ಮುಖಂಡ ಮಾಜಿ ಎಂಎಲ್​​ಸಿ ಮತ್ತೂರು ಎಂ.ಬಿ‌.ಭಾನುಪ್ರಕಾಶ್ ಪ್ರತಿಭಟನೆ ವೇಳೆ ಹೃದಯಾಘಾತದಿಂದ ನಿಧನ

ತನ್ನ ಕಡೆಯ ಕ್ಷಣದ ಸಮಯವನ್ನು ಪಕ್ಷದ ಕಾರ್ಯಕರ್ತರೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿ ನಮ್ಮೆಲ್ಲರನ್ನು ಅಗಲಿದ ನೆಚ್ಚಿನ ಎಂ ಬಿ ಭಾನುಪ್ರಕಾಶ್

ಅಶ್ವಸೂರ್ಯ/ಶಿವಮೊಗ್ಗ: ಬಿಜೆಪಿ ಹಿರಿಯ ಮುಖಂಡ ಮತ್ತೂರಿನ ಎಂ.ಬಿ‌.ಭಾನುಪ್ರಕಾಶ್ ಅವರು ಇಹಲೋಕ ತ್ಯಜಿಸಿದರು. ಹೃದಯಾಘಾತದಿಂದ ಇಂದು ( ಸೋಮವಾರ,17) ಮರಣ ಹೊಂದಿದರು. ಇವರಿಗೆ 70 ವರ್ಷ ವಯಸ್ಸಾಗಿತ್ತು ಎಂದು ತಿಳಿದು ಬಂದಿದೆ.

ತೈಲ ಬೆಲೆ ಏರಿಕೆ ಖಂಡಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಇಂದು ಶಿವಮೊಗ್ಗದಲ್ಲಿ ಪ್ರತಿಭಟನೆಯನ್ನು ಬಿಜೆಪಿಯ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ತೆರಳುತ್ತಿದ್ದ ವೇಳೆ ಬಿಸಿಲಿನ ತಾಪಕ್ಕೆ ಸುಸ್ತಾದವರಂತೆ ಕಂಡು ಬಂದ ಭಾನುಪ್ರಕಾಶ್ ಅವರಿಗೆ ಹೃದಯಾಘಾತವಾಗಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದ ಹಿನ್ನಲೆಯಲ್ಲಿ ಭಾನುಪ್ರಕಾಶ್ ಸಾವಿಗೆ ಶರಣಾಗಿದ್ದಾರೆ. ಶಿವಮೊಗ್ಗ ಜಿಲ್ಲೆ ಕಂಡಂತಹ ಪ್ರಾಮಾಣಿಕ ರಾಜಕಾರಣಿಗಳಲ್ಲಿ ಮತ್ತೂರಿನ ಭಾನುಪ್ರಕಾಶ್ ಕೂಡಾ ಒಬ್ಬರು.

ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ (ಚನ್ನಿ) ಅವರೊಂದಿಗೆ ಎಂ ಬಿ ಭಾನುಪ್ರಕಾಶ್

2009 ರಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಇವರು, 2013-19 ರವರೆಗೆ ಎಂಎಲ್ ಸಿಯಾಗಿದ್ದರು.ಬಿಜೆಪಿಯ ಪಕ್ಷ ಸಂಘಟನೆಯಲ್ಲಿ ಇವರ ಕೊಡುಗೆ ಅಪಾರ‌‌‌,ತಮ್ಮ ರಾಜಕೀಯ ಬದುಕಿನುದ್ದಕ್ಕೂ ಪಕ್ಷದ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಹಿರಿಮೆ ಕೂಡ ಇವರದಾಗಿದೆ.
ಗಾಜನೂರು ಜಿ.ಪಂ. ಕ್ಷೇತ್ರದಿಂದ ಆಯ್ಕೆಯಾಗಿದ್ದ ಭಾನುಪ್ರಕಾಶ್ 2001ರಿಂದ 2005ರ ಅವಧಿಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಬಿಜೆಪಿ ತೊರೆದು ಸಮಾಜವಾದಿ ಪಕ್ಷದಿಂದ ಶಿವಮೊಗ್ಗ ಲೋಕಸಭೆ ಕ್ಷೇತ್ರಕ್ಕೆ ಸ್ಪರ್ಧಿಸಿದ್ದಾಗ ಬಿಜೆಪಿಯಿಂದ ಭಾನುಪ್ರಕಾಶ್ ಎದುರಾಳಿಯಾಗಿ ಸ್ಪರ್ಧೆ ಮಾಡಿ ಸೋತಿದ್ದರು‌. RSS ನ ಕಟ್ಟಾ ಅನುಯಾಯಿಯಾಗಿದ್ದ ಭಾನುಪ್ರಕಾಶ್ ಬಿಜೆಪಿಯ ಪ್ರಬಲ ನಾಯಕರಾಗಿದ್ದರು ತಮ್ಮ ಮಾತುಗಾರಿಕೆ, ಸರಳತೆಯಿಂದಲೇ ಗುರುತಿಸಿಕೊಂಡಂತವರು.

ಡಾಕ್ಟರ್.ಧನಂಜಯ ಸರ್ಜಿ ಅವರೊಂದಿಗೆ ಎಂ ಬಿ ಭಾನುಪ್ರಕಾಶ್

ಇಂದು ತೈಲ ಬೆಲೆ ಹೆಚ್ಚಳ ವಿರೋಧಿಸಿ ಕಾಂಗ್ರೆಸ್ಸಿನ ಆಡಳಿತದ ವಿರುದ್ಧ ಬಿಜೆಪಿ ಪಕ್ಷದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಕುಸಿದು ಬಿದ್ದು ಹೃದಯಾಘಾತದಿಂದ ಮರಣಹೊಂದಿದ್ದಾರೆ ಭಾನುಪ್ರಕಾಶ್, ಸಾವಿನ ಸಂಧರ್ಭದಲ್ಲು ಪಕ್ಷದ ಕಾರ್ಯಕ್ರಮದಲ್ಲೆ ಸಾವಿನ ಮನೆ ಸೇರಿದ್ದಾರೆ. ಭಾನುಪ್ರಕಾಶ್ ಶಿವಮೊಗ್ಗ ಜಿಲ್ಲೆ ಕಂಡಂತಹ ಪ್ರಾಮಾಣಿಕ ರಾಜಕಾರಣಿ,ನಗುಮೊಗದ ಸರದಾರ,RSS ನ ಕಟ್ಟಾಳು ಇನ್ನೂ ನಮ್ಮೊಂದಿಗೆ ಇಲ್ಲ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ…..

Leave a Reply

Your email address will not be published. Required fields are marked *

Optimized by Optimole
error: Content is protected !!