ಏಳನೇ ಆರೋಪಿ ಅನುಕುಮಾರ್ ತಂದೆ ಚಂದ್ರಪ್ಪ
ಮಗನ ಬಂಧನ ಸುದ್ದಿ ಕೇಳಿ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಏಳನೇ ಆರೋಪಿ ಅನುಕುಮಾರ್ ತಂದೆ ಹೃದಯಾಘಾತಕ್ಕೆ ಬಲಿ.!
news.ashwasurya.in/Shivamogga
SUDHIR VIDHATA
ಅಶ್ವಸೂರ್ಯ/ಚಿತ್ರದುರ್ಗ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನವಾಗಿದ್ದ 7ನೇ ಆರೋಪಿ ಅನುಕುಮಾರ್ ತಂದೆ ಚಂದ್ರಪ್ಪ ಮಗನ ಬಂಧನದ ವಿಷಯ ಕೇಳಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮಗನ ಬಂಧನದ ಸುದ್ದಿ ಕೇಳಿದ ಆಘಾತದಲ್ಲೇ ಕುಸಿದು ಬಿದ್ದಿದ್ದು ಉಸಿರುಚಲ್ಲಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಗುರುವಾರ ಚಿತ್ರದುರ್ಗದ ಅನು ಅಲಿಯಾಸ್ ಅನುಕುಮಾರ್ ಗುರುವಾರ ಪೊಲೀಸರಿಗೆ ಶರಣವಾಗಿದ್ದ. ಪ್ರೀತಿಯ ಮಗ ಅನುಕುಮಾರನನ್ನು ಪೋಲಿಸರು ಬಂಧಿಸಿ ಬೆಂಗಳೂರಿಗೆ ಕರೆದುಕೊಂಡು ಹೋದ ವಿಷಯ ತಿಳಿಯುತ್ತಳೆ ತಂದೆ ಚಂದ್ರಪ್ಪ ವಿಚಲಿತರಾಗಿದ್ದಾರೆ. ಮಗನ ಮೇಲೆ ಪ್ರಾಣವನ್ನೇ ಇಟ್ಟುಕೊಂಡಿದ್ದ ತಂದೆ ಚಂದ್ರಪ್ಪನ ಪ್ರಾಣಪಕ್ಷಿ ಹಾರಿ ಹೋಗಿದೆ ಹೃದಯಾಘಾತದಿಂದ ಸಾವಿನ ಮನೆಸೇರಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಚಿತ್ರದುರ್ಗದ ಸಿಹಿನೀರ ಹೊಂಡ ಏರಿಯಾದ ಅನುಕುಮಾರ್ 7ನೇ ಆರೋಪಿಯಾಗಿದ್ದ. ಮಗನ ಬಂಧನದ ಸುದ್ದಿ ಕೇಳುತ್ತಲೇ 60 ವರ್ಷದ ಚಂದ್ರಪ್ಪ ನವರಿಗೆ ಲೋ ಬಿಪಿ ಯಾಗಿದ್ದು ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆಸ್ಪತ್ರೆಗೆಯಲ್ಲಿ ಚಿಕಿತ್ಸೆಗೆ ಸ್ಪಂದಿಸಿದ ಚಂದ್ರಪ್ಪ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಒಂದು ಕಡೆ ಮನೆಯ ಜವಾಬ್ದಾರಿಯನ್ನು ಹೊತ್ತಿದ್ದ ಮಗ ಜೈಲು ಪಾಲು ಮತ್ತೊಂದು ಕಡೆ ಮನೆಯ ಹಿರಿನ ಸಾವಿನಿಂದ ಕುಟುಂಬದಸ್ಥರು ಆಘಾತಕ್ಕೊಳಗಾಗಿದ್ದಾರೆ.
ಹುಚ್ಚು ಅಭಿಮಾನದಲ್ಲಿ ತನಗೆ ಸಂಭಂಧ ಇಲ್ಲದೆ ಹೊದರು ಹೆಗಲು ಕೊಟ್ಟು ಅಮಾಯಕನೊಬ್ಬನ ಹತ್ಯೆ ಪ್ರಕರಣದಲ್ಲಿ ಪಾಲುದಾರನಾಗಿ ಜೈಲುಸೇರಿದ್ದಾನೆ ಅನುಕುಮಾರ್. ತಾನು ಮಾಡಿದ ಪಾಪದ ಕೆಲಸಕ್ಕೆ ತನಗೆ ಜೀವಕೊಟ್ಟ ಅಪ್ಪನನ್ನೆ ಕಳೆದುಕೊಂಡಿದ್ದು ಮಾತ್ರ ದುರಂತವೇ ಹೌದು.! ಇದು ಹುಚ್ಚು ಅಭಿಮಾನದಲ್ಲಿ ತೆಲುವ ಪ್ರತಿಯೊಬ್ಬರಿಗೂ ಪಾಠವಾಗಲಿ.ಹೆತ್ತ ಅಪ್ಪನ ಮುಂದೆ ಯಾರು ಹೀರೋ ಅಲ್ಲಾ. ಯಾರು ಬಾಸು ಅಲ್ಲ. ತಂದೆಯ ಋಣ ತೀರಿಸಲು ಸಾಧ್ಯವು ಇಲ್ಲ…
ದರ್ಶನ್ ಮತ್ತು ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ A6, A7 ಆರೋಪಿಗಳನ್ನು ಚಿತ್ರದುರ್ಗ ಡಿವೈಎಸ್ಪಿ ದಿನಕರ್, ಕಾಮಾಕ್ಷಿಪಾಳ್ಯ ಪೊಲೀಸರ ನೇತೃತ್ವದಲ್ಲಿ ಶುಕ್ರವಾರ ಚಿತ್ರದುರ್ಗದಲ್ಲಿ ಬಂಧಿಸಲಾಯಿತು. A7 ಆರೋಪಿ ಬಂಧನದ ಬೆನ್ನಲ್ಲೇ ಆತನ ತಂದೆ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ಚಿತ್ರದುರ್ಗ ಡಿವೈಎಸ್ಪಿ ದಿನಕರ್,ಬೆಂಗಳೂರು ಕಾಮಾಕ್ಷಿಪಾಳ್ಯ ಇನ್ಸ್ ಪೆಕ್ಟರ್ ಸಂಜಯ್ ಗೌಡ ನೇತೃತ್ವದಲ್ಲಿ A6 ಆರೋಪಿ ಜಗ್ಗ ಅಲಿಯಾಸ್ ಜಗಧೀಶ್, ಎ7 ಆರೋಪಿ ಅನಿ ಅಲಿಯಾಸ್ ಅನುಕುಮಾರ್ ಇಬ್ಬರನ್ನೂ ಬಂಧಿಸಿ ಬೆಂಗಳೂರಿಗೆ ಕರೆದೊಯ್ದರು. ಇವರಿಬ್ಬರ
ಬಂಧನದ ಬೆನ್ನಲ್ಲೇ ಆರೋಪಿ ಅನುಕುಮಾರ್ ತಂದೆ ಚಂದ್ರಣ್ಣ (60) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮಗನ ಬಂಧನದಿಂದ ಮನನೊಂದ ತಂದೆ ಚಿತ್ರದುರ್ಗದ ಸಿಹಿ ನೀರು ಹೊಂಡ ಬಳಿಯ ಮನೆಯಲ್ಲಿಯೇ ಕುಸಿದುಬಿದ್ದಿದ್ದಾರೆ.