ತೀರ್ಥಹಳ್ಳಿಯ ಖ್ಯಾತ ಉದ್ಯಮಿ ಸರಳ ಪ್ರವೀಣ್ ಇನ್ನಿಲ್ಲ.!
news.ashwasurya.in/shivamogga
SUDHIR VIDHATA
ಅಶ್ವಸೂರ್ಯ/ತೀರ್ಥಹಳ್ಳಿ : ಪಟ್ಟಣದ ಹೆಸರಾಂತ ಹಾರ್ಡ್ ವೇರ್ ಆಂಗಡಿ ಸಿರಿಬೈಲ್ ಹಾರ್ಡ್ವೇರ್ ನ ಮಾಲೀಕರಾದ, ಸರಳ ವ್ಯಕ್ತಿತ್ವದ ತೀರ್ಥಹಳ್ಳಿ ತಾಲ್ಲೂಕಿನ ಚಿರಪರಿಚಿತ ವ್ಯಕ್ತಿ ಸರಳ ಪ್ರವೀಣ್ (40) ವರ್ಷ ಅನಾರೋಗ್ಯದ ಹಿನ್ನಲೆಯಲ್ಲಿ ಮಣಿಪಾಲ್ ಆಸ್ಪತ್ರೆಗೆ ಕೊಂಡೊಯ್ಯವ ಸಂಧರ್ಭದಲ್ಲಿ ಮಾರ್ಗದ ಮಧ್ಯೆ ಸಾವಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಮೃತ ಪ್ರವೀಣ್ ತಮ್ಮ ಉದ್ಯಮ ಕ್ಷೇತ್ರದಲ್ಲಿ ತಾಲೂಕಿನಾದ್ಯಂತ ಜನಮೆಚ್ಚುಗೆ ಯೊಂದಿಗೆ ಸರಳ ಪ್ರವೀಣ್ ಎಂದೇ ಮನೆಮಾತಾಗಿದ್ದರು.ಪ್ರತಿಯೊಬ್ಬರನ್ನೂ ಗೌರವದಿಂದಲೆ ಕಾಣುತ್ತ ಎಲ್ಲರೊಂದಿಗೂ ಬೇರೆಯುವ ದೊಡ್ಡ ಮನಸ್ಸಿನ ಸರಳ ವ್ಯಕ್ತಿತ್ವದ ಸರಳ ಪ್ರವೀಣ್ ಎಲ್ಲರ ಪ್ರೀತಿ ಪಾತ್ರರಾಗಿದ್ದರು ಎಂದರೆ ತಪ್ಪಾಗಲಾರದು. ತನ್ನ ಉದ್ಯಮ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಉತ್ತಮ ಸಾಧನೆ ಮಾಡುತ್ತ ಎತ್ತರಕ್ಕೆ ಬೆಳೆದಿದ್ದ ಪ್ರವೀಣ್ ಅವರನ್ನು ಸಾಕಷ್ಟು ಸಂಘ ಸಂಸ್ಥೆಗಳು ಗೌರವಿಸಿ ಸನ್ಮಾನಿಸಿದ್ದವು.ತನ್ನ ವ್ಯವಹಾರ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಲೇ ದೂರದ ಸಾಕಷ್ಟು ದೇಶವನ್ನು ಸುತ್ತಿ ಬಂದ ಹಿರಿಮೆ ಪ್ರವೀಣ್ ಅವರದಾಗಿತ್ತು.ಸರಳ ಪ್ರವೀಣ್ ಅವರ ಸಾವಿನ ಸುದ್ದಿ ಕೇಳಿದ ಕೇಲವರಿಗಂತೂ ನಂಬಲು ಅಸಾಧ್ಯವಾಗಿದೆ. ಮೃತ ಸರಳ ಪ್ರವೀಣ್ ಅವರು ತಾಯಿ, ಪತ್ನಿ, ಇಬ್ಬರು ಗಂಡು ಮಕ್ಕಳು ಬಂಧು ಬಳಗದವರ ಜೋತೆಗೆ ಅಪಾರ ಸಂಖ್ಯೆಯ ಮಿತ್ರ ವೃಂದವನ್ನು ಬಿಟ್ಟು ಅಗಲಿದ್ದಾರೆ. ಮೃತರ ಸರಳ ಪ್ರವೀಣ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಬೆಟ್ಟಮಕ್ಕಿಯ ಅವರ ನಿವಾಸದಲ್ಲಿ ಇಡಲಾಗಿದೆ.
ಇವರ ಅಗಲಿಕೆಯ ನೋವು ಸಂಪೂರ್ಣ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಸೂತಕದ ಛಾಯೆ ಅವರಿಸುವಂತೆ ಮಾಡಿದೆ. ಸರಳ ಪ್ರವೀಣ್ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ ಮಂಜುನಾಥ್ ಗೌಡ,
ಶಾಸಕ ಆರಗ ಜ್ಞಾನೇಂದ್ರ, ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.