ಡಾ.ಧನಂಜಯ ಸರ್ಜಿಗೆ ಅತ್ಯಧಿಕ ಮತಗಳ ಅಂತರದ ಗೆಲುವು : ವಿಧಾನ ಪರಿಷತ್ ಸದಸ್ಯ ಡಿ. ಎಸ್. ಅರುಣ್ ವಿಶ್ವಾಸ
ASHWASURYA/SHIVAMOGGA
SUDHIR VIDHATA
ಅಶ್ವಸೂರ್ಯ/ಕೊಡಗು : ನೈರುತ್ಯ ಪದವೀಧರ ಕ್ಷೇತ್ರದ ಐದು ಜಿಲ್ಲೆಯ ಹಾಗೂ ಮೂರು ತಾಲೂಕಿನ ಬಿಜೆಪಿ ಕಾರ್ಯಕರ್ತರು ಶಕ್ತಿಮೀರಿ ಕೆಲಸ ಮಾಡುತ್ತಿದ್ದು, ಈ ಬಾರಿಯು ಬಿಜೆಪಿ ಅಭ್ಯರ್ಥಿ ಡಾ ಧನಂಜಯ ಸರ್ಜಿ ಅವರು ಅತಿ ಹೆಚ್ಚು ಅಂತರದಿಂದ ಗೆಲ್ಲಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ನೈರುತ್ಯ ಪದವಿಧರರ ಕ್ಷೇತ್ರದ ಚುನಾವಣೆಯ ಹಿನ್ನೆಲೆ ಕಾರ್ಯಕರ್ತರ ಮತ್ತು ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿ, 1988ರಲ್ಲಿ ಪ್ರಾರಂಭವಾದ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಇಲ್ಲಿಯವರೆಗೆ ನಡೆದ ಆರು ಬಾರಿ ಚುನಾವಣೆಯಲ್ಲಿ ಆರು ಬಾರಿಯೂ ಬಿಜೆಪಿ ಗೆದ್ದಿದೆ. ಡಾ. ಧನಂಜಯ ಸರ್ಜಿ ಅವರು ಒಂದು ರೈತಾಪಿ ಕುಟುಂಬ ವರ್ಗದಲ್ಲಿ ಬೆಳೆದು, 10ನೇ ವರ್ಷಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿ ಸಂಘದ ಎಲ್ಲಾ ಜವಾಬ್ದಾರಿಗಳನ್ನು ಅದ್ಭುತವಾಗಿ ನಿರ್ವಹಿಸಿ ಆ ವಯಸ್ಸಿನಲ್ಲಿ ಸಂಘಟನೆಯ ಶಿಸ್ತನ್ನು ಪಡೆದುಕೊಂಡವರು, ಪದವೀಧರರ ಹಿತಕಾಯಲು ಅವರು ಸದಾ ಬದ್ಧರಾಗಿದ್ದಾರೆ ಎಂದರು.
ನೈರುತ್ಯ ಪದವಿಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಡಾ. ಧನಂಜಯ ಸರ್ಜಿ ಅವರು ಮಾತನಾಡಿ, ಕಾರ್ಯಕರ್ತರು ಭಾರತೀಯ ಜನತಾ ಪಾರ್ಟಿಯ ಬಹುದೊಡ್ಡ ಶಕ್ತಿ , ನೈರುತ್ಯ ಪದವಿಧರರ ಚುನಾವಣೆಗೆ ಕಾರ್ಯಕರ್ತರೇ ಅಭ್ಯರ್ಥಿಗಳು. ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ನಾನು ಪದವೀಧರರ ಸಮಸ್ಯೆಯನ್ನು ಅತಿ ಹತ್ತಿರದಿಂದ ಬಲ್ಲವನು. ನಾನು ಒಬ್ಬ ವೈದ್ಯನಾಗಿ ಪದವೀಧರ ಕ್ಷೇತ್ರದ ಸಮಸ್ಯೆಗಳ ಸಂಪೂರ್ಣ ಅರಿವಿದೆ, ಸ್ಪಂದಿಸುವ ಇಚ್ಛಾಸಕ್ತಿಯೂ ನನಗಿದ್ದು, ವಿದ್ಯಾವಂತ ಹಾಗೂ ಪ್ರಜ್ಞಾವಂತ ಮತದಾರರು ಬೆಂಬಲಿಸಿ, ತಮ್ಮ ಸೇವೆಯನ್ನು ಮಾಡಲು ಅವಕಾಶವನ್ನು ನೀಡುವಂತೆ ಮನವಿ ಮಾಡಿದರು
ಕೊಡಗು ಜಿಲ್ಲಾ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಡಾ. ಬಿ. ಸಿ. ನವೀನ್ ಕುಮಾರ್ ಮಾತನಾಡಿ, ಈಗಾಗಲೇ ನೈರುತ್ಯ ಪದವೀಧರರ ಚುನಾವಣೆಯ ದಿನಾಂಕ ಘೋಷಣೆಯಾಗಿದೆ. ಕೊಡಗು ಜಿಲ್ಲೆಯಲ್ಲಿ ಸುಮಾರು ಮೂರುವರೆ ಸಾವಿರ ಪದವೀಧರರು ನೋಂದಣಿ ಮಾಡಿಕೊಂಡಿದ್ದಾರೆ, ವಿಧಾನ ಪರಿಷತ್ ಚುನಾವಣೆಗೆ ನಾವೆಲ್ಲರೂ ಒಟ್ಟಾಗಿ ನಾಯಕರ ಸೂಚನೆಯಂತೆ ಕೆಲಸ ಮಾಡೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ರವಿ ಕಾಳಪ್ಪ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಸತೀಶ್ ಕಾಂಗೇರ, ಮಾದಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಿ. ಕೆ.ಲೋಕೇಶ್ ಮಹೇಶ್ ಜೈನಿ, ಜಿಲ್ಲಾ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಡಾ. ಬಿ. ಸಿ. ನವೀನ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನಾನು ಮತ್ತು ನನ್ನ ತಂಡ…..