ನೀವುಗಳು ನಿಮ್ಮ ಜೀವನದ ಹಾದಿಯಲ್ಲಿ ಸಾಕಷ್ಟು ಪ್ರೇಮಿಗಳನ್ನು ನೋಡಿರಬಹುದು. ಪ್ರೀತಿಸಿದವರಲ್ಲಿ ಕೆಲವರು ತಾವು ಪ್ರೀತಿಸಿದವರನ್ನೇ ಮದುವೆಯಾಗಿ ಬಿಗಿದರೆ ಇನ್ನೂ ಕೆಲವರು ಗಾಢವಾಗಿ ಪ್ರೀತಿಸಿಯು ಕೇಲವು ಕಾರಣಗಳಿಂದ ದೂರ ಉಳಿದು ಪ್ರೀತಿಸಿದವರ ನೆನಪಲ್ಲೆ ಮದುವೆಯಾಗದೆ ಹಾಗೆ ಉಳಿಯುತ್ತಾರೆ.!! ಏನೇ ಪರಿಸ್ಥಿತಿ ಎದುರಾದರು ಪ್ರೀತಿಸಿದವರ ನೆನಪಲ್ಲೆ ದಿನ ಕಳೆಯುತ ಮದುವೆಯಿಂದ ದೂರ ಉಳಿಯುತ್ತಾರೆ. ಇನ್ನೂ ಕೆಲವರು ಬೇರೆಯವರನ್ನು ಮದುವೆಯಾದರು ಪ್ರೀತಿ ಮಾತ್ರ ಮರೆಯಲಾಗದೆ ಹೃದಯದ ಯಾವುದೋ ಒಂದು ಮೂಲೆಯಲ್ಲಿ ಜಾಗ ಕೊಟ್ಟಿರುತ್ತಾರೆ.
ಇಬ್ಬರು ದೂರವಾಗಿ ಮೂವತೈದು ವರ್ಷದ ನಂತರ ಒಬ್ಬರಿಗೊಬ್ಬರು ಎದುರಾದ ಪ್ರೇಮಿಗಳು..!
ಕಾಲೇಜು ದಿನಗಳಲ್ಲಿ ಪ್ರೀತಿಸಿದವರಲ್ಲಿ ಮದುವೆಯಾಗುವವರ ಸಂಖ್ಯೆ ಕಡಿಮೆ. ಹಲವಾರು ಕಾರಣಗಳಿಗಾಗಿ ಪ್ರೇಮಿಗಳು ಬೇರೆಯಾಗುತ್ತಾರೆ ಆಕರ್ಷಣೆಗೆ ಬೇರೆಯವರನ್ನು ಪ್ರೀತಿಸಿ ಮದುವೆಯಾಗುವುದು ಉಂಟು.! ಇನ್ನೂ
ಮನೆಯವರ ಒತ್ತಡಕ್ಕೆ ಮಣಿದೋ ಅಥವಾ ತಮ್ಮ ನಡುವಿನ ತಪ್ಪುಗ್ರಹಿಕೆಯಿಂದ ಪ್ರೀತಿಸಿದವರನ್ನೆ ಕೈಕೊಟ್ಟು ದೂರ ಆಗುತ್ತಾರೆ. ಕೆಲವೊಮ್ಮೆ ಬೇರೆಯಾದ ಪ್ರೇಮಿಗಳು ಅದೆಷ್ಟೋ ವರ್ಷದ ನಂತರ ಅಕಸ್ಮಾತ್ತಾಗಿ
ಸಿಕ್ಕಿ ಎದುರಾದಾಗ ಹೇಗೆ ಪ್ರತಿಕ್ರಿಯಿಸಬಹುದು? ಅ ಕ್ಷಣ ಎನಾಗಬಹುದು.? ಅಂದು ಗಾಢವಾಗಿ ಪ್ರೀತಿಸಿದವರ ಮನಸ್ಸು ಅ ಕ್ಷಣ ಸ್ಫೋಟಗೊಳ್ಳಬಹುದು..! ಹಳೆಯ ನೆನಪುಗಳು ಮರುಕಳಿಸ ಬಹುದು.? ಇವೆಲ್ಲದಕ್ಕೂ ಉತ್ತರ
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಒಂದನ್ನು ನೋಡಿದರೆ ಖಂಡಿತವಾಗಿಯು ನಿಮ್ಮ ಮನ ಕರಗದೆ ಇರಲಾರದು.
ಹೌದು, 35 ವರ್ಷಗಳ ಹಿಂದೆ ಮನೆಯವರ ಕಾರಣದಿಂದ ಬೇರ್ಪಟ್ಟ ಇಬ್ಬರು ಪ್ರೇಮಿಗಳ ನಡುವಿನ ಮನಃಪೂರ್ವಕ ಸಂಭಾಷಣೆಯ ವಿಡಿಯೋವೊಂದು ಟ್ವಿಟರ್ನಲ್ಲಿ ವೈರಲ್ ಆಗಿದೆ. ಇಲ್ಲಿ ವಿಶೇಷ ಎನಂದರೆ ಇಬ್ಬರೂ ಮನೆಯವರ ಕಾರಣಕ್ಕೆ ಪರಸ್ಪರ ಬೇರೆ-ಬೇರೆಯಾದ್ರೂ ಇವರಿಬ್ಬರು ಯಾರನ್ನು ಮದುವೆಯಾಗಿಲ್ಲ.!! ಇದಕ್ಕೆ ಹೇಳುವುದು ನಿಜವಾದ ಪ್ರೀತಿ ಅಂತ. ಈ ಇಬ್ಬರು ಪ್ರೇಮಿಗಳ ನಡುವಿನ ಸಂಭಾಷಣೆ ಕಂಡು ನೆಟ್ಟಿಗರ ಕಣ್ಣಾಲೆಯಲ್ಲಿ ನೀರು ಇಣುಕಿದೆ. ಮನಕರಗಿದೆ.
ಉದ್ಯಾನವನವೊಂದರ ಕಲ್ಲು ಬೆಂಚಿನ ಮೇಲೆ ಕೇಲ ಕಾಲ ಕುಳಿತು ಮಾತುಕತೆ ನಡೆಸಿದ ಈ ಅಮರ ಪ್ರೇಮಿಗಳು. ಅಂದಿನ ಪ್ರೀತಿಯ ಕ್ಷಣಗಳು.
ಬೇರ್ಪಟ್ಟ ನಂತರದ ದೂರವಿದ್ದು ಅನುಭವಿಸಿದ ಯಾತನೆ. ಹಳೆಯ ಬರೆದ ಪ್ರೇಮ ಪತ್ರಗಳು ಸೇರಿದಂತೆ ಹತ್ತು ಹಲವು ವಿಷಯಗಳನ್ನು ಒಬ್ಬರಿಗೊಬ್ಬರು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಹಳೆಯ ನೆನಪುಗಳನ್ನು ಮೆಲುಕುಹಾಕುತ್ತಲೆ ಕಣ್ಣೀರಾಗಿದ್ದಾರೆ. ಈ ಭಾವನಾತ್ಮಕ ವಿಡಿಯೋವನ್ನು ನೋಡಿದವರ ಮನಸ್ಸು ಒಂದೊಮ್ಮೆ ಮರುಗದೆ ಇರಲಾರದು
ಸುಧೀರ್ ವಿಧಾತ, ಶಿವಮೊಗ್ಗ