27 ನೇ ಮಿಳಘಟ್ಟ ವಾರ್ಡಲ್ಲಿ ಹವಾ ಎಬ್ಬಿಸಿದ ಕನ್ನಡ ಸಿನೆಮಾ ರಂಗದ ಬಿಗ್ ಬಜೆಟ್ ನಿರ್ಮಾಪಕರು – ನಿರ್ದೇಶಕರು
ASHWASURYA/SHIVAMOGGA
ಸುಧೀರ್ ವಿಧಾತ
ಅಶ್ವಸೂರ್ಯ/ಶಿವಮೊಗ್ಗ: ಕಾಂಗ್ರೆಸ್ ಪಕ್ಷ ಶಿವಮೊಗ್ಗ ಕ್ಷೇತ್ರದ ಏಂಟು ವಿಧಾನಸಭಾ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರಕ್ಕೆ ಮುಂದಾಗಿದೆ ನಗರದ ಗಲ್ಲಿ ಗಲ್ಲಿಯಲ್ಲೂ ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ರಣಕಹಳೆ ಮೊಳಗಿಸುತ್ತಿದೆ. ಅ ಮಟ್ಟಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಯೊಂದು ಮನೆ ಮನೆಗೆ ತೆರಳಿ ಗ್ಯಾರಂಟಿ ಕಾರ್ಡ್ ತಲುಪಿಸಿ ಶ್ರೀಮತಿ ಗೀತಾ ಶಿವರಾಜಕುಮಾರ್ ಪರ ಮತಯಾಚಿಸುತ್ತಿದ್ದಾರೆ.
ಇಂದು ಶಿವಮೊಗ್ಗ ನಗರದ 27ನೇ ವಾರ್ಡಿನಲ್ಲಿ ಕರ್ನಾಟಕ ಫಿಲಂ ಚೇಂಬರ್ ನ ಪದಾದಿಕಾರಿಗು ಆಗಮಿಸಿದ್ದರು ಪ್ರಮುಖವಾಗಿ ನಿರ್ಮಾಪಕರು ಕನ್ನಡ ಪರ ಹೋರಾಟಗಾರರಾದ ಸಾ.ರಾ.ಗೋವಿಂದ್, ಕನ್ನಡ ಚಿತ್ರರಂಗದ ಹೆಸರಾಂತ ಬಿಗ್ ಬಜೆಟ್ ನಿರ್ಮಾಪಕರು ನಿರ್ದೇಶಕರುಗಳಾದ ಸುರೇಶ್, ಕೆ.ಪಿ.ಶ್ರೀಕಾಂತ್
ಇವರ ಜೋತೆಗೆ ಮತ್ತಿತರ ನಿರ್ಮಾಪಕರು, ನಿರ್ದೇಶಕರು ಶಿವಮೊಗ್ಗ ಮಿಳಘಟ್ಟ ವಾರ್ಡಿನ ವ್ಯಾಪ್ತಿಗೆ ಬರುವ ಸಂತೆ ಮೈದಾನ, ಹೂವಿನ ಮಾರುಕಟ್ಟೆಯಲ್ಲಿ, ಬಸ್ ನಿಲ್ದಾಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಗೀತಾ ಶಿವರಾಜಕುಮಾರ್ ಪರವಾಗಿ ಮತಯಾಚಿಸಿದರು.
ಈ ಸಂದರ್ಭದಲ್ಲಿ ಜಿ.ಡಿ.ಮಂಜುನಾಥ್, ಮಿಳಘಟ್ಟ ವಾರ್ಡಿನ ಉಸ್ತುವಾರಿ ಶಿ.ಜು.ಪಾಶ, ವಾರ್ಡ್ ಅಧ್ಯಕ್ಷ ರಾಮನಾಥ್, ಕಾಂಗ್ರೆಸ್ ಮುಖಂಡರಾದ ಜಿ.ಪದ್ಮನಾಭ್, ಮುಹೀಬ್ ಉಲ್ಲಾ, ಜಿತೇಂದ್ರ ಗೌಡ,ಯೋಗಿಶ್ ಗೌಡ, ಧರ್ಮರಾಜ್, ರವಿಕುಮಾರ್, ವಾಸೀಂ ಇನ್ನಿತರ ಕಾರ್ಯಕರ್ತರು ಬಾಗಿಯಾಗಿದ್ದರು.