ಸಚಿವ ಮಧುಬಂಗಾರಪ್ಪ ನವರು ಕಾಂಗ್ರೆಸ್ ಅಭ್ಯರ್ಥಿ ಸಹೋದರಿ ಗೀತಾ ಶಿವರಾಜಕುಮಾರ್ ಪರ ಶಿವಮೊಗ್ಗ ಗ್ರಾಮಾಂತರದ ಕೆಲವು ಹಳ್ಳಿಗಳ ಮನೆ ಮನೆಗೆ ತೆರಳಿ ಗ್ಯಾರಂಟಿ ಕಾರ್ಡ್ ವಿತರಿಸಿ ಮತಯಾಚಿಸಿದರು
ASHWASURYA/SHIVAMOGGA
ಸುಧೀರ್ ವಿಧಾತ
ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಒಂದೊಂದು ಭಾಗದಲ್ಲೂ ಬಿರುಸಿನ ಪ್ರಚಾರ ಕೈಗೊಂಡಿದೆ.ಗೀತಾ ಶಿವರಾಜಕುಮಾರ್ ಪರ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಕಾರ್ಯಕರ್ತರು, ಚಿತ್ರನಟರು, ಸಚಿವರುಗಳು ಮತಯಾಚನೆಗೆ ಮುಂದಾಗಿದ್ದಾರೆ,
ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಪ್ರತಿಯೊಂದು ಮನೆ ಮನೆಗೂ ಬೇಟಿಕೊಟ್ಟು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸರ್ಕಾರ ಘೋಷಣೆ ಮಾಡಿ ನಂತರ ಆಡಳಿತ ಚುಕ್ಕಾಣಿ ಹಿಡಿದ ಎಂಟು ತಿಂಗಳಲ್ಲಿ ಎಲ್ಲಾ ಐದು ಗ್ಯಾರಂಟಿಗಳನ್ನು ಜಾರಿಗೆತಂದು ನುಡಿದಂತೆ ನೆಡೆದಿದೆ.. ಈ ಗ್ಯಾರಂಟಿಗಳ ಜೋತೆಗೆ ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿದರೆ ಕೇಲವು ಗ್ಯಾರಂಟಿಗಳನ್ನು ಜಾರಿಗೆ ತರಲು ಮುಂದಾಗಿದೆ. ಈಗ ರಾಜ್ಯಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಮತಬೇಟೆಗೆ ಮುಂದಾಗಿದೆ.
ಇಂದು ಸಹೋದರಿ ಗೀತಾ ಶಿವರಾಜಕುಮಾರ್ ಪರ ಸಹೋದರ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪನವರು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕೆಲವು ಹಳ್ಳಿಗಳಿಗೆ ಭೇಟಿ ನೀಡಿ ಮನೆ ಮನೆಗೆ ತೆರಳಿ ಗ್ಯಾರೆಂಟಿ ಕಾರ್ಡ್ ವಿತರಿಸುವುದರ ಜೋತೆಗೆ ಮನೆಗಳಿಗೆ ಗ್ಯಾರೆಂಟಿ ಕಾರ್ಡ್ ಗಳನ್ನು ಅಂಟಿಸಿ ಲೋಕಸಭಾ ಅಭ್ಯರ್ಥಿ ಶ್ರೀಮತಿ ಗೀತಾ ಶಿವರಾಜ್ ಕುಮಾರ್ ರವರ ಪರ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಸಂತೆ ಕಡೂರ್ ವಿಜಯ್ ಕುಮಾರ್ (ದನಿ) ಇತರ ಮುಖಂಡರು ಕಾರ್ಯಕರ್ತರು ಸಚಿವರಿಗೆ ಸಾಥ್ ನೀಡಿದರು .
ನಮಗೆ ಸರ್ಕಾರದಿಂದ ಸಹಾಯಮಾಡಿದ ನಿಮಗೆ ಧನ್ಯವಾದಗಳು ನಾನು ನಿಮಗೆ ಚುನಾವಣೆಯ ಖರ್ಚಿಗೆ ಹಣ ಕೊಡ್ತಾಇದಿನಿ ತಗೋಳ್ಳಿ. ಎಂದು ಸಚಿವ ಮಧುಬಂಗಾರಪ್ಪ ನವರಿಗೆ ಹಣ ನೀಡಿದ ವೃದ್ಧ ಮಹಿಳೆ