ಅಬಕಾರಿ ಇಲಾಖೆಯ ವತಿಯಿಂದ ಎನ್‍ಡಿಪಿಎಸ್ ಜಾಗೃತಿ ಸಭೆ

ಕಾರ್ಯಕ್ರಮದಲ್ಲಿ ಮಕ್ಕಳಿಗೆ ಮಾದಕ ದ್ರವ್ಯ ಮತ್ತು ಮನೋದ್ರೇಕಕಾರಿ ವಸ್ತುಗಳ ಬಳಕೆ ಹಾಗೂ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಯಿತು…..

ಶಿವಮೊಗ್ಗ, ಜುಲೈ 07:
ಅಬಕಾರಿ ಉಪ ಆಯುಕ್ತರು, ಶಿವಮೊಗ್ಗ ಜಿಲ್ಲೆ ಇವರ ನಿರ್ದೇಶನದಂತೆ ಅಬಕಾರಿ ಉಪ ಅಧೀಕ್ಷಕರು ಶಿವಮೊಗ್ಗ ಉಪವಿಭಾಗ, ಶಿವಮೊಗ್ಗ ಇವರ ಮಾರ್ಗದರ್ಶನದಲ್ಲಿ ಅಬಕಾರಿ ಇಲಾಖೆ ವತಿಯಿಂದ ಶಿವಮೊಗ್ಗ ತಾಲ್ಲೂಕಿನ ಮೇಲಿನ ಹನಸವಾಡಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ಶಾಲೆಯಲ್ಲಿ ದಿ: 06-07-2023 ರಂದು ಎನ್‍ಡಿಪಿಎಸ್ ಜಾಗೃತಿ ಸಭೆಯನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಮಕ್ಕಳಿಗೆ ಮಾದಕ ದ್ರವ್ಯ ಮತ್ತು ಮನೋದ್ರೇಕಕಾರಿ ವಸ್ತುಗಳ ಬಳಕೆ ಹಾಗೂ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಯಿತು. ಸಭೆಯಲ್ಲಿ ಶಿವಮೊಗ್ಗ ವಲಯ ನಂ 1 ಅಬಕಾರಿ ನಿರೀಕ್ಷಕಿ ಶೀಲಾ ಎಂ ಧಾರಜ್‍ಕರ್, ಸಿಬ್ಬಂದಿಗಳಾದ ರವೀಂದ್ರ ಪಾಟೀಲ್, ನಾಗಪ್ಪ ಶಿರೋಳ, ನ್ಯಾನ್‍ರಾಜ್, ಮೊರಾರ್ಜಿ ಶಾಲೆಯ ಮುಖ್ಯೋಪಾಧ್ಯಾಯರಾದ ತೇಜಸ್ವಿನಿ, ಸಹಶಿಕ್ಷಕರು ಹಾಜರಿದ್ದರು.


ಎಸ್ ವೈ ಜಗದೀಶ್

Leave a Reply

Your email address will not be published. Required fields are marked *

Optimized by Optimole
error: Content is protected !!