ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ದಶಮತ್ ರಾವತ್ ಅವರನ್ನು ಭೇಟಿ ಮಾಡಿದರು ಮತ್ತು ಭೋಪಾಲ್‌ನಲ್ಲಿರುವ ಸಿಎಂ ಹೌಸ್‌ಗೆ ಅವರನ್ನು ಕರೆದುಕೊಂಡು ಬಂದು ಗೌರವಿಸಿ ಸ್ವತಹ ಸಿ ಎಂ ಅವರೆ ಆತನ ಪಾದಗಳನ್ನು ತೊಳೆದಿದ್ದಾರೆ. ಆರೋಪಿ ಪ್ರವೇಶ್ ಶುಕ್ಲಾ ರಾವತ್ ಎಂಬಾತ ರಸ್ತೆ ಬದಿಯಲ್ಲಿ ಕುಳಿತಿದ್ದ ದಶಮತ್ ರಾವತ್ ಎಂಬಾತನ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಸಿಎಂ ಅವರು “… ಆ ವಿಡಿಯೋ ನೋಡಿದ ನನಗು ತುಂಬಾ ನೋವಾಯಿತು. ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ.ನನ್ನ ರಾಜ್ಯದ ಜನರು ನನಗೆ ದೇವರಿದ್ದಂತೆ….” ಎಂದಿದ್ದಾರೆ ಜೋತೆಗೆ ಆತನನ್ನು ಸಿ ಎಂ ನಿವಾಸಕ್ಕೆ ಕರೆದುಕೊಂಡು ಬಂದು ಗೌರವಿಸಿ ಕಳಿಸಿದಗದಾರೆ..
ಮಧ್ಯಪ್ರದೇಶದಲ್ಲಿ ಸಿಧಿ ಬುಡಕಟ್ಟು ಯುವಕನ ಮೇಲೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದ ವಿಡಿಯೋ ಒಂದು ಎಲ್ಲೆಂದರಲ್ಲಿ ಹರಿದಾಡಿತ್ತು.
ಸಿಧಿ ಜಿಲ್ಲೆಯಲ್ಲಿ ದಿನಗೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದ ಯುವಕನ ಮೇಲೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿದ ಘಟನೆ ನಡೆದು. ಈ ಫಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಆರೋಪಿಯನ್ನು ಪ್ರವೇಶ್ ಶುಕ್ಲಾ ಎಂದು ಗುರುತಿಸಿದ ಪೊಲೀಸರು ಬುಧವಾರ ಆತನನ್ನು ಬಂಧಿಸಿದ್ದಾರೆ.
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಇತ್ತೀಚೆಗೆ ಮೂತ್ರ ವಿಸರ್ಜನೆಯ ಘಟನೆಯಲ್ಲಿ ಸಂತ್ರಸ್ತನಾಗಿದ್ದ ಬುಡಕಟ್ಟು ಯುವಕನ ಪಾದಗಳನ್ನು ತೊಳೆದರು. ದಶಮತ್ ರಾವತ್ ಅವರನ್ನು ಸಿಎಂ ಗುರುವಾರ ಭೋಪಾಲ್‌ನಲ್ಲಿರುವ ತಮ್ಮ ನಿವಾಸಕ್ಕೆ ಕರೆಸಿಕೊಂಡರು. ಅವರನ್ನು ಕುರ್ಚಿಯಲ್ಲಿ ಕೂರಿಸಿ ಸಿಎಂ ಕೆಳಗೆ ಕುಳಿತುಕೊಂಡು ಸಿ ಎಂ ಶಿವರಾಜ್ ಸಿಂಗ್ ಚೌಹಾಣ್ ತಮ್ಮ ಎರಡೂ ಕಾಲುಗಳನ್ನು ತಟ್ಟೆಯಲ್ಲಿಟ್ಟು ನೀರಿನಿಂದ ಪಾದಗಳನ್ನು ತೊಳೆದರು. ಬಳಿಕ ಮಾಲಾರ್ಪಣೆ ಮಾಡಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಬಳಿಕ ಮುಖ್ಯಮಂತ್ರಿಗಳು ನನಗೆ ಊಟ ಹಾಕಿದ್ದಾರೆ ಎಂದು ದಶಮತ್ ರಾವತ್ ಹೇಳಿಕೊಂಡಿದ್ದಾರೆ
ಈ ಸಂದರ್ಭದಲ್ಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ಮೂತ್ರ ವಿಸರ್ಜನೆಯ ವಿಡಿಯೋ ನೋಡಿ ಮನಸ್ಸಿಗೆ ನೋವಾಗಿದೆ.ಇದಕ್ಕಾಗಿ ಕ್ಷಮೆ ಯಾಚಿಸಿದ್ದಾರೆ. ಪ್ರಜೆಗಳು ದೇವರ ಸಮಾನ ಎಂದು ಸಿ ಎಂ ಹೇಳಿಕೊಂಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದ ತಪ್ಪಿತಸ್ಥನನ್ನು ಕೂಡಲೇ ಬಂಧಿಸಿ ಅವನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶ ನೀಡಿರುವುದಾಗಿ ಸಿಎಂ ಈ ಹಿಂದೆ ಬಹಿರಂಗಪಡಿಸಿದ್ದಾರೆ.
ಮತ್ತೊಂದೆಡೆ, ಆರೋಪಿ ಪ್ರವೇಶ್ ಶುಕ್ಲಾ ಬಿಜೆಪಿಗೆ ಸೇರಿದವರು ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ಘಟನೆಯು ದಲಿತರು ಮತ್ತು ಬುಡಕಟ್ಟು ಜನಾಂಗದವರ ಮೇಲಿನ ಬಿಜೆಪಿಯ ದ್ವೇಷವನ್ನು ಪ್ರತಿಬಿಂಬಿಸುತ್ತದೆ ಎಂದು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ. ಬಿಜೆಪಿ ಆಡಳಿತದಲ್ಲಿ ಅವರ ಮೇಲೆ ಅತ್ಯಾಚಾರ ನಡೆಯುತ್ತಿದೆ ಎಂದು ರಾಹುಲ್ ಆರೋಪಿಸಿದ್ದಾರೆ. ಆದರೆ ಆ ವ್ಯಕ್ತಿಗೂ ತಮ್ಮ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ಹೇಳಿಕೊಂಡಿದೆ. ಈ ಕುರಿತು ತನಿಖೆ ನಡೆಸಲು ನಾಲ್ವರು ಹಿರಿಯ ಸದಸ್ಯರ ಸಮಿತಿ ರಚಿಸುವುದಾಗಿ ಬಿಜೆಪಿ ರಾಜ್ಯ ಶಾಖೆ ಪ್ರಕಟಿಸಿರುವುದು ಗಮನಾರ್ಹ
ಸುಧೀರ್ ವಿಧಾತ ,ಶಿವಮೊಗ್ಗ
Voice of common man in words