ಆರ್.ಪ್ರಸನ್ನಕುಮಾರ್ ರವರಿಗೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನದ ಅಧಿಕಾರ ಹಸ್ತಾಂತರಿಸಿ ಮಾತನಾಡಿದ ಸೂಡ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್
ASHWASURYA/SHIVAMOGGA
ಸುಧೀರ್ ವಿಧಾತ
ಅಶ್ವಸೂರ್ಯ/ ಶಿವಮೊಗ್ಗ; ಹೆಚ್ ಎಸ್ ಸುಂದರೇಶ್ ಮಾತನಾಡಿ ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಗೀತಾ ಶಿವರಾಜ್ ಕುಮಾರ್ ಪರ ಲೋಕಸಭಾ
ಚುನಾವಣೆಯ ಪ್ರಚಾರ ಕಾರ್ಯ ಭರದಿಂದ ಸಾಗಿದೆ.ಈ ಸಂಧರ್ಭದಲ್ಲಿ ಎಲ್ಲರನ್ನೂ ಜೊತೆಗೊಯ್ಯುವ ಮತ್ತು ಬಿಜೆಪಿಯನ್ನು ಕಿತ್ತೊಗೆಯಲು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಆರ್ ಪ್ರಸನ್ನಕುಮಾರ್ ಮುಂದಾಗಲಿದ್ದಾರೆ.ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅವರಿಗೆ ಅಭಿನಂದನೆಗಳು.
ಅತ್ಯಂತ ಕಷ್ಟಕಾಲದಲ್ಲಿ ಪಕ್ಷ ಸಂಘಟನೆಗೆ ನನಗೆ ಕೆಪಿಸಿಸಿ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರನ್ನಾಗಿ ಜವಬ್ದಾರಿ ವಹಿಸಿದ್ದರು.ಎಲ್ಲರನ್ನೂ ಒಟ್ಟಿಗೆ ಒಯ್ಯುವುದರ ಜೋತೆಗೆ ಪಕ್ಷ ಸಂಘಟನೆಯು ದೊಡ್ಡ ಜವಾಬ್ದಾರಿ ನನ್ನ ಮೇಲಿತ್ತು. ಐದು ವರ್ಷ ನಾಲ್ಕು ತಿಂಗಳಕಾಲ ಶಕ್ತಿ ಮೀರ ಎಲ್ಲವನ್ನೂ ನಿಭಾಯಿಸಿದ್ದೇನೆ. ಬಿಜೆಪಿ ವಿರುದ್ಧ ಹೋರಾಟಕ್ಕೆ ಎಲ್ಲರ ಬೆಂಬಲ ಸಿಕ್ಕಿತ್ತು. ಈ ಮಟ್ಟಕ್ಕೆ ಪಕ್ಷವನ್ನು ನಮ್ಮ ಜೋತೆಗೆ ಸೇರಿ ಬೆಳಸಿದ ಕಾರ್ಯಕರ್ತರಿಗೆ ಪಕ್ಷ ಅಧಿಕಾರಕ್ಕೆ ಬಂದಿರುವ ಸಂಧರ್ಭವಾಗಿದೆ ಯಾವುದಾದರೂ ಜವಾಬ್ದಾರಿ ಕೊಡಬೇಕು. ಪಕ್ಷ ಸಿದ್ಧಾಂತಕ್ಕೆ ಹೋರಾಡಬೇಕು.
ಕರೋನಾ ಸಂದರ್ಭದಲ್ಲೂ ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ನಾಯಕರಿಂದ ಹಣ ಪಡೆಯದೇ ಪಕ್ಷ ಕಟ್ಟಿದ್ದೇವೆ. ಯಾರನ್ನೂ ಬದಲಾಯಿಸಬೇಕಾಗಿಲ್ಲ. ನಿಷ್ಠುರವಾಗಿ ನಡೆದುಕೊಳ್ಳುವ ಸಂದರ್ಭವೂ ಬಂದಿತ್ತು. ಎರಡೂ ರೀತಿಯ ಅಭಿಪ್ರಾಯಗಳು ಸಹಜ.
ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ರವರನ್ನು ಗೆಲ್ಲಿಸುವ ಕೆಲಸ ಆಗಬೇಕಿದೆ. ಬಿಜೆಪಿ ಕಿತ್ತೊಗೆಯಬೇಕಿದೆ.
ಎಂಥ ಸಂದರ್ಭದಲ್ಲೂ ಪಕ್ಷ ಬಿಡುವ, ದ್ರೋಹ ಬಗೆಯುವ ಕೆಲಸ ಮಾಡಿಲ್ಲ. ನಾನು ಟಿಕೆಟ್ ವಿಧಾನಸಭೆಗೆ ಕೇಳಿದ್ದೆ. ಸೂಡಾ ಕೇಳಿರಲಿಲ್ಲ ಅದರು ಸೂಡಾ ಅಧ್ಯಕ್ಷನ ಜವಬ್ದಾರಿ ಕೊಟ್ಟಿದ್ದಾರೆ.ಲೋಕಸಭಾ ಚುನಾವಣೆಗೆ ಹೊಸ ಅಧ್ಯಕ್ಷರನ್ನು ನೇಮಿಸಲು ಹೇಳಿದ್ದೆ.ಅ ಕೆಲಸವು ಆಗಿದೆ ನನಗೆ ಪಕ್ಷ ಸ್ಥಾನಮಾನ ಕೊಟ್ಟಿದೆ. ಶಿವಮೊಗ್ಗ ಜಿಲ್ಲಾ ಅಧ್ಯಕ್ಷನಾಗಿ ಐದು ವರ್ಷ ಪೂರೈಸಿ ನಾಲ್ಕು ತಿಂಗಳು ಕಳೆದಿದ್ದೇನೆ ಜಿಲ್ಲಾಧ್ಯಕ್ಷ ಸ್ಥಾನ ಬೇರೆಯವರಿಗೆ ಕೊಟ್ಟಿರುವುದು ನನಗೆ ಸಂತೋಷವಾಗಿದೆ. ಇದರ ಜೋತೆಗೆ
ಸಂತೋಷದ ವಿಷಯವೆಂದರೆ
ಎನ್ ರಮೇಶ್ ಹಾಗೂ ನಾಗರಾಜ ಗೌಡರಿಗೂ ಕೆಪಿಸಿಸಿಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿ ನೇಮಕವಾಗಿದ್ದಾರೆ ಅವರಿಗೂ ಅಭಿನಂದನೆಗಳು…ನಾನು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷನಾದ ಅವಧಿಯಲ್ಲಿ ನನ್ನೊಂದಿಗೆ ಇದ್ದು ಪಕ್ಷ ಬೆಳವಣಿ ಪಕ್ಷ ಸಂಘಟನೆಯ ಜೋತೆಗೂ ಪಕ್ಷದ ಪ್ರತಿಯೊಂದು ಕಾರ್ಯಕ್ರಮ, ಪ್ರತಿಭಟನೆಗಳಲ್ಲಿ ನನ್ನೊಂದಿಗೆ ಕೈ ಜೋಡಿಸಿರುವ ಜಿಲ್ಲೆಯ ಎಲ್ಲಾ ಶಾಸಕರು ಪಕ್ಷದ ಹಿರಿಯ, ಕಿರಿಯ ನಾಯಕರು ಮತ್ತು ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕರ್ತರಿಗೂ ನನ್ನ ಧನ್ಯವಾದಗಳು..
ಈ ಸಂಧರ್ಭದಲ್ಲಿ
ಆರ್.ಎಂ.ಮಂಜುನಾಥ್ ಗೌಡ, ಎನ್. ರಮೇಶ್, ನಾಗರಾಜ ಗೌಡ , ಶ್ರೀನಿವಾಸ ಕರಿಯಣ್ಣ, ದೇವೇಂದ್ರಪ್ಪ, ಕಲೀಂ ಪಾಷ, ಶಿವಕುಮಾರ್, ವಿಶ್ವನಾಥ ಕಾಶಿ, ಎಸ್ ಪಿ ದಿನೇಶ್, ಮಧು,ಜಿ ಪದ್ಮನಾಭ್, ಶಿ ಜು ಪಾಶ ಉಪಸ್ಥಿತರಿದ್ದರು