ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಚನ್ನಬಸಪ್ಪ (ಚನ್ನಿ)
ಬಿಎಸ್ ಯಡಿಯೂರಪ್ಪನವರ ವಿರುದ್ಧ ಹಗುರ ಮಾತಾಡುವುದು ಮೊದಲು ನಿಲ್ಲಿಸಲಿ; ಕೆಎಸ್ ಈಶ್ವರಪ್ಪನವರ ವಿರುದ್ಧ ಶಾಸಕ ಚನ್ನಬಸಪ್ಪ (ಚನ್ನಿ) ಕಿಡಿ
ASHWASURYA/SHIVAMOGGA
✍️ ಸುಧೀರ್ ವಿಧಾತ
ಶಿವಮೊಗ್ಗದಲ್ಲಿ ಸಂಘಟನೆ ಶಕ್ತಿ ಆಧಾರದ ಮೇಲೆ ಗೆದ್ದಿದ್ದೇವೆ. ಇದನ್ನು ಯಾರೂ ಈ ಜನ್ಮದಲ್ಲಿ ಮರೆಯಬಾರದು.ಯಾರುಯಾರನ್ನು ಬೆಳೆಸಲು ಸಾಧ್ಯವಿಲ್ಲ ಅವರವರ ಶ್ರಮದಿಂದಲೆ ಮೇಲೆ ಬರಲು ಸಾಧ್ಯ ಇಲ್ಲಿ ಯಾರು ಯಾರಿಗೂ ಶಿಷ್ಯರಲ್ಲ ಯಾರು ಗುರುವಲ್ಲ ಪಾರ್ಟಿ ಬಿಟ್ಟು ಹೋರ ಹೋದ ಮೇಲೆ ಮನಸ್ಸಿಗೆ ಬಂದಂತೆ ಮಾತನಾಡುವುದು ಸರಿಯಲ್ಲ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹಾಗೂ ಮಾಜಿ ಎಂಎಲ್ಸಿ ಅಯನೂರು ಮಂಜುನಾಥ್ ವಿರುದ್ಧ ಶಾಸಕ ಚನ್ನಬಸಪ್ಪ ವಾಗ್ದಾಳಿ ನಡೆಸಿದರು.
ಅಶ್ವಸೂರ್ಯ/ಶಿವಮೊಗ್ಗ ; ಶಿವಮೊಗ್ಗದಲ್ಲಿ ಸಂಘಟನೆಯ ಶಕ್ತಿ ಆಧಾರದ ಮೇಲೆ ಗೆದ್ದಿದ್ದೇವೆ. ಇದನ್ನು ಯಾರೂ ಈ ಜನ್ಮದಲ್ಲಿ ಯಾರು ಮರೆಯಬಾರದು. ಪಾರ್ಟಿ ಬಿಟ್ಟು ಹೋರ ಹೋದ ಮೇಲೆ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹಾಗೂ ಮಾಜಿ ಎಂಎಲ್ಸಿ ಅಯನೂರು ಮಂಜುನಾಥ್ ವಿರುದ್ಧ ಶಾಸಕ ಚನ್ನಬಸಪ್ಪ ವಾಗ್ದಾಳಿ ನಡೆಸಿದರು.
ಶಿವಮೊಗ್ಗದಲ್ಲಿ ನಡೆದ ಶಿವಮೊಗ್ಗ ನಗರ ಪೇಜ್ ಪ್ರಮುಖರ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷದಿಂದಲೇ ಗೆದ್ದು, ಅಧಿಕಾರ ಅನುಭವಿಸಿ ಇದೀಗ ಪಕ್ಷದ ವಿರುದ್ಧ ಬಂಡಾಯವೆದ್ದಿರುವ ಇವರ ಸವಾಲನ್ನು ಸ್ವೀಕರಿಸಲು ನಾವು ಸಭೆ ಸೇರಿದ್ದೇವೆ.ಇವರ ಅಧಿಕಾರಕ್ಕೆ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನು ಹೇಗಲು ಕೊಟ್ಟಿದ್ದಾನೆ ಹೊರತು ಇಲ್ಲಿ ಯಾರು ಯಾರಿಗೂ ಶಿಷ್ಯರಲ್ಲ. ಬಿಜೆಪಿ ನಾಯಕರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಮೊದಲು ನಿಲ್ಲಿಸಬೇಕು. ಇಲ್ಲದಿದ್ದರೆ ಇದನ್ನು ಎದುರಿಸುವ ತಾಕತ್ತು ನಮಗೂ ಇದೆ ಎಂದು ಎಚ್ಚರಿಕೆ ನೀಡಿದರು.
ಬಿಎಸ್ ಯಡಿಯೂರಪ್ಪನವರ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಬಿಎಸ್‌ವೈ ಋಣ ಮತ್ತು ಸಂಘಟನೆ ಋಣ ನಿಮ್ಮ ಮೇಲೆ ಇಲ್ಲವಾ? ಕೆಲವರು ಹಿಂದೂ ಹಿಂದೂ ಎಂದು ಮಾತನಾಡ್ತಾರೆ. ಆದರೆ ಹಿಂದುತ್ವದ ಆಧಾರದ ಮೇಲೆ ರಾಷ್ಟ್ರೀಯ ಸ್ವಯಂ ಸ್ವೇವಕ ಸಂಘ ಸ್ಥಾಪನೆಯಾಗಿ ನೂರು ವರ್ಷ ಕಳೆದಿವೆ. ಯಾವುದೋ ಕಾರಣಕ್ಕೆ ಬಿಜೆಪಿ ಸಂಘಟನೆ ಬಗ್ಗೆ, ನಾಯಕರ ಬಗ್ಗೆ ಮಾತನಾಡುವುದಿದ್ದರೆ ಸಹಿಸಿಕೊಳ್ಳುವ ಕಾರ್ಯಕರ್ತರ ಪಡೆ ನಮ್ಮಲ್ಲಿಲ್ಲ. ಏ.18 ರಂದು ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ನಾಮಪತ್ರ ಸಲ್ಲಿಸುತ್ತಾರೆ. ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಒಂದೂವರೆ ಲಕ್ಷ ಮತಗಳನ್ನು ಪಡೆದು ಜಿಲ್ಲೆಯಲ್ಲಿ ಅತೀ ಹೆಚ್ಚಿನ ಲೀಡ್ ಕೊಡುತ್ತೇವೆ ಎಂದರು.