✍️ ಸುಧೀರ್ ವಿಧಾತ
ಜೈಲು ಅವರಣದಲ್ಲೆ ರೌಡಿಗಳ ಕಾಳಗ.!! ತಮಿಳ್ ರಮೇಶನ ಮೇಲೆ ಅಟ್ಯಾಕ್ ಮಾಡಿದ್ನಾ ಕಾಡಾ ಕಾರ್ತಿಕ್ .!?
The Never Ending Story
ಅಶ್ವಸೂರ್ಯ/ಶಿವಮೊಗ್ಗ; ಶಿವಮೊಗ್ಗ ಜಿಲ್ಲಾ
CRIME NEWS
ಶಿವಮೊಗ್ಗ ಜಿಲ್ಲಾ ಸರಹದ್ದಿನ ಪಾತಕಲೋಕ ಮತ್ತೆ ಆಕ್ಟೀವ್ ಆಗಿದೆ.! ಜೈಲು ಆವರಣದಲ್ಲೆ ರಣಕೇಕೆ ಹಾಕಲು ಮುಂದಾಗಿದ್ದಾರೆ ನಟೋರಿಯಸ್ ರೌಡಿಗಳು. ಶಿವಮೊಗ್ಗದ ಲೋಡ್ ಗಟ್ಟಲೆ ರೌಡಿಗಳು ಬಳ್ಳಾರಿ,ಧಾರವಾಡ,ಮೈಸೂರು, ಮತ್ತು ಶಿವಮೊಗ್ಗ ಸೇರಿದಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲುಗಳ ಬ್ಯಾರಕ್ ನ ಹಿಂದೆ ಬಂಧಿಗಳಾಗಿದ್ದಾರೆ. ಅದರಲ್ಲೂ ವಿರೋಧಿಪಡೆಗಳ ಎರಡು ರೌಡಿಗಳ ಟೀಮ್ ಗಳು ಕೆಲವು ಪ್ರಕರಣಗಳಿಗೆ ಸಂಬಂದಿಸಿದಂತೆ ಒಂದೇ ಜೈಲಿನಲ್ಲಿದ್ದಾರೆ.! ಬ್ಯಾರಕ್ ಗಳು ಬೇರೆ ಬೇರೆಯಾಗಿದ್ದರು ಒಂದೆ ಜೈಲಿನಲ್ಲಿದ್ದಾರೆ.! ಕರ್ನಾಟಕದಲ್ಲಿ ಬೆಂಗಳೂರು ಬಿಟ್ಟರೆ ಶಿವಮೊಗ್ಗ ಪಾತಕಲೋಕ ಸದಾ ಆಕ್ಟೀವ್ ಆಗಿರುತ್ತದೆ ಒಂದಲ್ಲ ಒಂದು ಪ್ರಕರಣಗಳು ಜಿಲ್ಲೆಯ ನಾನಾ ಠಾಣೆಗಳಲ್ಲಿ ದಾಖಲಾಗುತ್ತಿರುತ್ತವೆ. ಇತ್ತೀಚೆಗೆ ಶಿವಮೊಗ್ಗ ಅಂಡರ್ ವರ್ಲ್ಡ್ ಆಕ್ಟೀವ್ ಆಗಿರುವುದೇ ರಿವೆಂಜಿನ ನೆತ್ತರಿಗಾಗಿ.ಇಲ್ಲಿಯ ಭೂಗತ ಜಗತ್ತಿನಲ್ಲಿ ಸಾಕಷ್ಟು ಗ್ಯಾಂಗ್ ಗಳು ತಮ್ಮ ಅಧಿಪತ್ಯ ಸಾಧಿಸಲು ಒಂದಲ್ಲ ಒಂದು ರೀತಿಯಲ್ಲಿ ಕ್ರೈಮ್ ಮಾಡಿ ಸುದ್ದಿಯಲ್ಲಿವೆ.! ಪೋಲಿಸರು ತಮ್ಮ ರಿವಲ್ವಾರಿನ ಎಷ್ಟೇ ಬುಲೇಟ್ ಗಳನ್ನು ರೌಡಿಗಳ ಕಾಲಿಗೆ ನುಗ್ಗಿಸಿದರು ರೌಡಿಗಳ ಆರ್ಭಟ ಮಾತ್ರ ಕಡಿಮೆಯಾಗಿಲ್ಲ ಈ ನೆಲದಲ್ಲಿ ರಿವೆಂಜಿನ ನಂಜು ಚಿಗಿತುಕೊಂಡಿದೆ ಸದಾಕಾಲವೂ ಪ್ರತಿಕಾರಕ್ಕಾಗಿ ರೌಡಿಗಳ ಗ್ಯಾಂಗ್ ಗಳು ಮಚ್ಚು ಮಸಿಯುತ್ತಿವೆ.!! ಪ್ರತಿ ಗ್ಯಾಂಗಿನಲ್ಲೂ ರಿವೆಂಜಿನೇಟಿಗೆ ಕೆಲವು ತಲೆಗಳು ಉರುಳಿ ಹೋಗಿವೆ.
ಇತ್ತೀಚೆಗಂತೂ ನಟೋರಿಯಸ್ ರೌಡಿಗಳ ನಜರು ಶಿವಮೊಗ್ಗ ಜಿಲ್ಲೆಯ ಕಲ್ಲು ಕೋರೆ, ಮರಳು ಮಾಫಿಯಾ, ಇನ್ನೂಳಿದ ಅಕ್ರಮ ದಂಧೆಗಳ ಅಧಿಪತ್ಯಸಾಧಿಸಲು ಇನ್ನಿಲ್ಲದ ಕಸರತ್ತು ನೆಡೆಸುತ್ತಿದ್ದಾರೆ.ಇಂತಹ ನಟೋರಿಯಸ್ ಗಳ ಜೋತೆಗೆ ಅದಷ್ಟು ಬೇಗ ಕಾಸು ಮಾಡಬೇಕೆಂಬ ಜಿದ್ದಿಗೆ ಬಿದ್ದರಿರುವ ಬೇರಳೆಣಿಕೆಯ ಪೋಲಿಸರು ಪವಿತ್ರ ಖಾಕೀಗೆ ಕಲೆ ಅಂಟಿಸಿಕೊಂಡು ದಂಧೆಕೋರರಿಗೆ ನೆರಳಾಗಿದ್ದಾರೆ ಒಬ್ಬನಂತೂ ಮರಳು ಕೋರೆ ಯಲ್ಲಿ ಪಾಲುದಾರನಾಗಿದ್ದಾನೆ ಎಂದರೆ ನೀವು ನಂಬಲೆ ಬೇಕು.!
ಯಾವ ಮಟ್ಟಕ್ಕೆ ಶಿವಮೊಗ್ಗದ ಭೂಗತಲೋಕ ರಿವೆಂಜಿಗೆ ಬಿದ್ದಿದೆ ಎಂದರೆ ಅದಕ್ಕೊಂದು ಉದಾಹರಣೆ ಇಲ್ಲಿದೆ.!
ರಿವೆಂಜಿನ ಬೆನ್ನಿಗೆ ಬಿದ್ದ ಶಿವಮೊಗ್ಗದ ರೌಡಿ ಗ್ಯಾಂಗ್ ಒಂದು ಮೈಸೂರಿನ ಜೈಲು ಆವರಣದಲ್ಲೆ ಶಿವಮೊಗ್ಗದ ಮತ್ತೊಬ್ಬ ರೌಡಿಯ ಮೇಲೆ ಅಟ್ಯಾಕ್ ಮಾಡಿದೆ.!
ಮೈಸೂರು ಕೇಂದ್ರ ಕಾರಾಗೃಹದಲ್ಲಿ ಶಿವಮೊಗ್ಗದ ರೌಡಿಗಳು ಹೊಡೆದಾಡಿಕೊಂಡಿರುವ ಬಗ್ಗೆ ಸುದ್ದಿ ಹೋರಬಿದ್ದಿದೆ.!?
ಸದ್ಯ ಮೈಸೂರು ಕಾರಾಗೃಹದಲ್ಲಿ ಶಿವಮೊಗ್ಗದ ರೌಡಿಶೀಟರ್ ಹಂದಿ ಅಣ್ಣಿಯ ಕೊಲೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ಕಾರ್ತಿಕ್ ಅಲಿಯಾಸ್ ಕಾಡಾ ಕಾರ್ತಿ ಹಾಗೂ ಆತನ ಸಹಚರರಿದ್ದಾರೆ.
ಇನ್ನೂ ಮಾರ್ಕೆಟ್ ಗಿರಿ ಮತ್ತು ನಟೋರಿಯಸ್ ಬಾಲು ಮರ್ಡರ್ ಕೇಸಿಗೆ ಸಂಭಂದಿಸಿದಂತೆ ಆರೋಪಿಯಾಗಿದ್ದ ಮತ್ತು ಇತ್ತೀಚೆಗೆ ಹಂದಿ ಅಣ್ಣಿಯ ಕೊಲೆ ಕೇಸಿನಲ್ಲಿದ್ದ ಕಾರ್ತಿಕ್ ಸಹಚರ ಹತ್ಯೆ ಪ್ರಕರಣದಲ್ಲೂ ರಮೇಶ ಆರೋಪಿಯಾಗಿದ್ದ.! ಹಂದಿ ಅಣ್ಣಿಯ ಆಪ್ತಮಿತ್ರ ತಮಿಳ್ ರಮೇಶ್ ಮತ್ತು ಇತನ ಸಹಚರ ಸುನೀಲ್ರನ್ನು ದಾವಣಗೆರೆ ಜೈಲಿನಿಂದ ಮೈಸೂರು ಜೈಲಿಗೆ ಶಿಫ್ಟ್ ಮಾಡಲಾಗಿತ್ತು.! ಇಲ್ಲಿ ತಮಿಳ್ ರಮೇಶ ಕಾಡ ಕಾರ್ತಿಯ ಲಾಂಗಿನೇಟಿಗೆ ಉಸಿರು ಚೆಲ್ಲಿದ ಹಂದಿ ಅಣ್ಣಿಯ ಗ್ಯಾಂಗಿನ ಪರಮಾಪ್ತ ಶಿಷ್ಯನಾಗಿದ್ದಾನೆ ಇನ್ನೂ ಕಾಡ ಕಾರ್ತಿ ಹಂತಕರ ಏಟಿಗೆ ಹರಗೆಯ ಹೊಲದಲ್ಲಿ ಉಸಿರು ಚೆಲ್ಲಿದ ರೌಡಿಶೀಟರ್ ಬಂಕ್ ಬಾಲುವಿನ ಪರಮಶಿಷ್ಯನಾಗಿದ್ದಾನೆ ಬಂಕ್ ಬಾಲು ಪ್ರಕರಣದಲ್ಲಿ ತಮಿಳ್ ರಮೇಶ ಆರೋಪಿಯಾಗಿ ಜೈಲು ಸೇರಿದ್ದ ಅ ನಂತರದಲ್ಲಿ ಕೇಸು ಖುಲಾಸೆಯಾಗಿ ಹೊರಬಂದಿದ್ದ.ಬಾಲು ಹತ್ಯೆಯಾದ ನಂತರದಲ್ಲಿ ಅವನ ಶಿಷ್ಯ ಕಾರ್ತಿಕ್ ರಿವೆಂಜಿಗೆ ಬಿದ್ದಿದ್ದ ಈ ಹಾದಿಯಲ್ಲಿ ಬಾಲು ಮರ್ಡರ್ ಪ್ರಕರಣದಲ್ಲಿ ಹಂದಿ ಅಣ್ಣಿಯು ಬಾಗಿಯಾಗಿದ್ದ ಎನ್ನುವ ಕಾರಣಕ್ಕೆ ಹಾಡುಹಗಲೆ ಕಾರ್ತಿಕ್ ನಡುರಸ್ತೆಯಲ್ಲೆ ತನ್ನ ಸಹಚರರ ಜೋತೆ ಸೇರಿ ಹಂದಿ ಅಣ್ಣಿಯ ಕಥೆ ಮುಗಿಸಿದ್ದ. ಅ ನಂತರದಲ್ಲಿ ಹಂದಿ ಅಣ್ಣಿಯ ಪ್ರಕರಣಕ್ಕೆ ಸಂಬಂದಿಸಿದಂತೆ ಇಬ್ಬರು ಕಾಡ ಕಾರ್ತಿಯ ಶಿಷ್ಯಂದಿರು ಕೋರ್ಟಿಗೆ ಬಂದು ವಾಪಸ್ ಹೊನ್ನಾಳಿಗೆ ತೆರಳುವ ವೇಳೆ ಸ್ಕೆಚ್ ಹಾಕಿ ರಿವೆಂಜಿಗೆ ಬಿದ್ದ ಅಣ್ಣಿಯ ಶಿಷ್ಯ ತಮಿಳ್ ರಮೇಶ ಮತ್ತು ಆತನ ಸಹಚರರು ಅವರಿಬ್ಬರ ಮೇಲೆ ಅಟ್ಯಾಕ್ ಮಾಡಿದ್ದಾರೆ.! ಒಬ್ಬ ಸ್ಥಳದಲ್ಲೇ ಸತ್ತರೆ ಇನ್ನೊಬ್ಬ ಬಲವಾದ ಮಚ್ಚಿನೇಟಿನಿಂದ ನೆತ್ತರು ಹರಿದು ನೆಲಕ್ಕೂರುಳಿದರು ಆಸ್ಪತ್ರೆಯ ಚಿಕಿತ್ಸೆಯ ನಂತರ ಚೇತರಿಸಿಕೊಂಡು ಬದುಕುಳಿದಿದ್ದಾನೆ.! ಈ ರಿವೆಂಜಿನ ನಂಜು ಮುಂದುವರೆದು
ಈ ಎರಡು ಗ್ಯಾಂಗ್ಗಳ ನಡುವೆ ಮೈಸೂರು ಜೈಲಿನಲ್ಲಿ ಹೊಡೆದಾಟ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಜೈಲಿನಲ್ಲಿ ಕಾಡಾ ಕಾರ್ತಿ ಮತ್ತವನ ಟೀಂ ತಮಿಳ್ ರಮೇಶ್ನ ಮೇಲೆ ಹಲ್ಲೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದ್ದರು ಜೈಲು ಅಧಿಕಾರಿಗಳಿಂದ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಮೈಸೂರು ಕೇಂದ್ರ ಕಾರಾಗೃಹದ ಅಧೀಕ್ಷಕರಾದ ಮಹಾದೇವ ನಾಯಕ್ ರವರು ರೌಡಿಗಳಿಗೆ ಸಂಭಂದಿಸಿದಂತಹ ಯಾವುದೇ ಘಟನೆಯು ನಡೆದಿಲ್ಲ ಎಂದಿದ್ದಾರೆ.ಒಟ್ಟಿನಲ್ಲಿ ಮೈಸೂರು ಜೈಲ್ ಆವರಣದಿಂದಲೆ ನಟೋರಿಯಸ್ ರೌಡಿಗಳ ಬಡಿದಾಟದ ಸುದ್ದಿಯೊಂದು ಹರಿದಾಡುತ್ತಿದೆ.!?
ಶಿವಮೊಗ್ಗದ ಪಾತಕಲೋಕ ರಿವೆಂಜಿನ ನೆತ್ತರಿಗಾಗಿ ಹೊಂಚುಹಾಕಿ ಕುಳಿತಿದೆ. ರೌಡಿಗಳು ತಮ್ಮ ಅಧಿಪತ್ಯ ಸಾಧಿಸುವ ನಿಟ್ಟಿನಲ್ಲಿ ಹೆಣವಾಗಿ ಹೋಗುತ್ತಿದ್ದಾರೆ ತಮ್ಮ ತಮ್ಮ ಶತ್ರು ಸಂಹಾರಕ್ಕೆ ನಿಂತ ರೌಡಿಪಡೆಗಳು ಸದಾ ಆಕ್ಟೀವ್ ಆಗಿದ್ದಾರೆ. ಇನ್ನೂ ಕೇಲವರು ತಮ್ಮ ತಲೆ ಉರುಳಬಹುದೇನ್ನುವ ಆತಂಕದಲ್ಲೆ ದಿನಕಳೆದರೆ ಇನ್ನೂ ಕೇಲವರು ಭೂಗತರಾಗಿದ್ದಾರೆ.! ಒಟ್ಟಿನಲ್ಲಿ ರಿವೆಂಜಿನ ನಂಜು ಶಿವಮೊಗ್ಗ ಅಂಡರ್ ವರ್ಲ್ಡ್ ಮಣ್ಣಿನಲ್ಲಿ ಬೂದಿಮುಚ್ಚಿದ ಕೆಂಡದಂತೆ ಹೋಗೆ ಆಡುತ್ತಿದೆ ಎನ್ನುವುದು ಅಷ್ಟೇ ಸತ್ಯ ….
ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಐಪಿಎಸ್
ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಕೂಡ ಶಿವಮೊಗ್ಗ ಖಡಕ್ ಆಗಿದೆ ದಕ್ಷ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಐಪಿಎಸ್ ಅವರ ಮಾರ್ಗದರ್ಶನದಲ್ಲಿ ಅಯಾ ತಾಲ್ಲೂಕಿನ ಪೋಲಿಸ್ ಅಧಿಕಾರಿಗಳು ಮತ್ತು ಅವರ ಪೋಲಿಸರ ತಂಡ ಕ್ರಿಮಿನಲ್ ಗಳ ಹೆಡೆಮುರಿಕಟ್ಟಲು ಸಿದ್ಧರಾಗಿದ್ದಾರೆ ಈಗಾಗಲೇ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕೇಲವು ರೌಡಿಗಳ ನಡುಮುರಿದು ಜೈಲಿಗಟ್ಟಿದ್ದಾರೆ ಇನ್ನೂ ಮೀತಿ ಮೀರಿ ವರ್ತಿಸುತ್ತಿದ್ದ ಕೇಲವು ರೌಡಿಗಳು ಮತ್ತು ನಟೋರಿಯಸ್ ಗಳ ಕಾಲನ್ನು ತಮ್ಮ ಸರ್ವಿಸ್ ರಿವಲ್ವಾರಿನಿಂದ ಸಿಳಿದ್ದಾರೆ. ಜಿಲ್ಲೆಯಲ್ಲಿ ಅದರಲ್ಲೂ ಶಿವಮೊಗ್ಗ ನಗರದಲ್ಲಿ ಪೋಲಿಸರು ಎಷ್ಟೇ ಆಕ್ಟೀವ್ ಆಗಿದ್ದರು ರೌಡಿಗಳು ಅಷ್ಟೇ ಆಕ್ಟೀವ್ ಆಗಿರುವುದಂತು ಸತ್ಯ.! ಇಲ್ಲಿ ಈ ನಟೋರಿಯಸ್ ರೌಡಿಗಳು ಸಾರ್ವಜನಿಕ ವಲಯದಲ್ಲಿ ತೊಂದರೆ ಕೊಡುವುದಕ್ಕಿಂತ ಅವರವರೆ ಹೊಡೆದಾಡಿ ಸಾಯುವುದೆ ಪರಿಪಾಠವಾಗಿದೆ.!