ಹೊರನಾಡಿನಲ್ಲಿ ಯಡಿಯೂರಪ್ಪ ಕುಟುಂಬದಿಂದ ಚಂಡಿಕಾ ಹೋಮ.!?
ಅಶ್ವಸೂರ್ಯ/ಶಿವಮೊಗ್ಗ
✍️ ಸುಧೀರ್ ವಿಧಾತ
ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೊರನಾಡಿನ ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ಭಾನುವಾರ ವಿಶೇಷ ಪೂಜೆ, ಹೋಮ ನೆರವೇರಿಸಿದರು.
ಪುತ್ರ ಬಿ.ವೈ. ವಿಜಯೇಂದ್ರ ಮತ್ತು ಕುಟುಂಬದ ಸದಸ್ಯರೊಂದಿಗೆ ಅವರು ನವಚಂಡಿ ಪಾರಾಯಣ ನಡೆಸಿದರು. ಆನಂತರ ಅನ್ನಪೂರ್ಣೇಶ್ವರಿಗೆ ರಥೋತ್ಸವ ಸೇವೆ ಮತ್ತು ಮಹಾಚಂಡಿಕಾ ಹೋಮ ನೆರವೇರಿಸಿದರು.
ಲೋಕಸಭಾ ಚುನಾವಣೆಗೂ ಮುನ್ನ ಯಡಿಯೂರಪ್ಪ ಕುಟುಂಬವು ಈ ಸೇವೆಗಳನ್ನು ಸಲ್ಲಿಸಿದ್ದು ವಿಶೇಷವಾಗಿತ್ತು.ಇದು ತಮ್ಮ ಶತ್ರುಗಳ ನಾಶಕ್ಕೆ ಮಾಡಿರುವಂತಹ ಚಂಡಿಕಾ ಹೋಮವಂತೆ.!? ಅದೇನೇ ಇರಲಿ ದೇವಸ್ಥಾನದ ಮುಖ್ಯಸ್ಥ ಜಿ. ಭೀಮೇಶ್ವರ ಜೋಷಿ ಯಡಿಯೂರಪ್ಪ ಕುಟುಂಬಸ್ಥರಿಗೆ ಪ್ರಸಾದ ವಿತರಿಸಿದರು. ರಾಮನಾರಾಯಣ ಜೋಷಿ ಅವರು ಯಡಿಯೂರಪ್ಪ ಕುಟುಂಬವನ್ನು ದೇಗುಲಕ್ಕೆ ಬರಮಾಡಿಕೊಂಡರು.
ಯಡಿಯೂರಪ್ಪ ಕುಟುಂಬ ಬ್ಯೂಸಿ ಶಡ್ಯೂಲ್ ನಲ್ಲು ಹೊರನಾಡು ಅನ್ನಪೂರ್ಣೇಶ್ವರಿ ದೇವಿಯ ದರ್ಶನಮಾಡಿದ್ದು ಮಾತ್ರ ವಿಷೇಶವಾಗಿದೆ