ನಾಳೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಆಗಮನ,ಬೃಹತ್ ರ‍್ಯಾಲಿ,ಲಗಾನ್ ಮಂದಿರದಲ್ಲಿ ಕಾರ್ಯಕರ್ತರ ಸಭೆ: ಹೆಚ್ ಎಸ್ ಸುಂದರೇಶ್

ನಾಳೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಆಗಮನ,ಬೃಹತ್ ರ‍್ಯಾಲಿ,ಲಗಾನ್ ಮಂದಿರದಲ್ಲಿ ಕಾರ್ಯಕರ್ತರ ಸಭೆ: ಹೆಚ್ ಎಸ್ ಸುಂದರೇಶ್

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಗೀತಾ ಶಿವರಾಜ್ ಕುಮಾರ್ ಮಾ.20ರಂದು ಬೃಹತ್ ರ‍್ಯಾಲಿ ಮೂಲಕ ಆಗಮಿಸಿ ಲಗಾನ್ ಮಂದಿರದಲ್ಲಿ ಜಿಲ್ಲಾ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್ ಹೇಳಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರ‍್ಯಾಲಿಯು ಬುಧವಾರ ಬೆಳಿಗ್ಗೆ 10 ಕ್ಕೆ ಭದ್ರಾವತಿಯಲ್ಲಿ ಆರಂಭವಾಗಿ 11 ಕ್ಕೆ ಶಿವಮೊಗ್ಗದ ಎಂ ಆರ್ ಎಸ್ ಸರ್ಕಲ್ ಬಳಿ ಆಗಮಿಸಿ ಅಲ್ಲಿಂದ ಬೃಹತ್ ಮೆರವಣಿಗೆಯ ಮೂಲಕ ಲಗಾನ್ ಕಲ್ಯಾಣ ಮಂದಿರಕ್ಕೆ ಬರುತ್ತಾರೆ ಎಂದರು.
ಈ ಮೆರವಣಿಗೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕರಾದ ಸಂಗಮೇಶ್, ಗೋಪಾಲಕೃಷ್ಣ ಬೇಳೂರು ಸೇರಿದಂತೆ ಎಲ್ಲಾ ಮಾಜಿ ಶಾಸಕರು,ಸಚಿವರು ಮತ್ತು ಪಕ್ಷದ ಮುಖಂಡರು ಉಪಸ್ಥಿತರಿರುತ್ತಾರೆ ಎಂದು ಹೇಳಿದರು.


ಸುಳ್ಳು ಮತ್ತು ಸತ್ಯದ ನಡುವೆ ಚುನಾವಣೆ. ನಿನ್ನೆಯ ಮೋದಿ ಕಾರ್ಯಕ್ರಮಕ್ಕೆ ಒಂದು ಲಕ್ಷ ಜನ ಐದು ಜಿಲ್ಲೆಗಳಿಂದ ಕಾರ್ಯಕ್ರಮಕ್ಕೆ ಸೇರಿಲ್ಲ. ಹಣ ಕೊಟ್ಟು ಕರೆತಂದ ಜನರಷ್ಟೆ ಇದ್ದರು.ಕೆಲವು ಬಸ್ಸುಗಳಲ್ಲಿ ಐದರಿಂದ ಹತ್ತು ಜನರಿದ್ದರಷ್ಟೆ.
ಮೋದಿ ಮತ್ತು ಎಸ್ ಬಿಐಗೆ ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ವಿಚಾರದಲ್ಲಿ ಕಪಾಳಮೋಕ್ಷ ಮಾಡಿದೆ.
ಇಡಿ,ಐಟಿ ರೈಡ್ ಮಾಡಿಸಿ ಹೆದರಿಸಿ ಹಣ ವಸೂಲಿ ಮಾಡಲಾಗಿದೆ. ಮೋದಿಗೆ ಕಾಂಗ್ರೆಸ್ ವಿರುದ್ಧ ಮಾತಾಡುವ ನೈತಿಕತೆ ಇಲ್ಲ.ಈ ಚುನಾವಣೆಯಲ್ಲಿ ಗೀತಾ ಶಿವರಾಜ್ ಕುಮಾರ್ ರವರು ಗೆಲ್ಲೋದು ಗ್ಯಾರಂಟಿ. ಕುಟುಂಬ ರಾಜಕಾರಣದ ಬಗ್ಗೆ ಕಾಂಗ್ರೆಸ್ ವಿರುದ್ಧ ಟೀಕೆ ಮಾಡುತ್ತಿದ್ದ ಈಶ್ವರಪ್ಪ ಈಗ ಮಗನಿಗೆ ಟಿಕೇಟ್ ಕೇಳ್ತಿರೋದು ದುರಂತ. ಸುಳ್ಳು ಹೇಳ್ತಿರೋದು ಕಾಂಗ್ರೆಸ್ ಅಲ್ಲ ಮೋದಿ ಮತ್ತು ಬಿಜೆಪಿ ಪಕ್ಷದವರು ಎಂದರು.
ಆರ್ಥಿಕ ಸದೃಢತೆಗೆ ಮತ್ತೆ ಐದು ಗ್ಯಾರಂಟಿಗಳ ಘೋಷಣೆ ರಾಹುಲ್ ಗಾಂಧಿ ಮತ್ತು ಖರ್ಗೆಯವರಿಂದ.
ಯುವಕರಿಗೆ, ಮಹಿಳೆಯರಿಗೆ, ಕಾರ್ಮಿಕರಿಗೆ ರಕ್ಷಣೆ ಕೊಡುವ ಕೆಲಸ ಕಾಂಗ್ರೆಸ್ ಮಾಡಲಿದೆ. ಪಂಚ ಗ್ಯಾರಂಟಿಗಳು ಫಲಾನುಭವಿಗಳಿಗೆ ಅನುಕೂಲವಾಗಿದೆ. ಖಜಾನೆ ಖಾಲಿಯಾಗಿಲ್ಲ. ಮೋದಿ ಸರ್ಕಾರ ಸಾಲದಲ್ಲಿದೆ. ಅಂಧಭಕ್ತಿ ಸತ್ಯ ನೋಡದಂತೆ ಮಾಡಿದ್ದೇ ಮೋದಿಯ ಗ್ಯಾರಂಟಿ ಹತ್ತು ವರ್ಷಗಳಲ್ಲಿ ಸಾಲ ಮಾಡಿದ್ದೇ ಮೋದಿಯ ಇನ್ನೊಂದು ಗ್ಯಾರಂಟಿ ಸಾಧನೆ. ಭಾರತ ಮಾತಾ ಕೀ ಜೈ ಅನ್ನೋರು ಕುಸ್ತಿಪಟುವಿನ ನೋವು ಅರ್ಥ ಮಾಡಿಕೊಂಡಿಲ್ಲ. ಮಣಿಪುರದ ಬಗ್ಗೆ ಮಾತಾಡಲ್ಲ…ದುಷ್ಟರ ಕೈಗೆ ಸಿಲುಕಿ ಬೆತ್ತಲಾಗಿ ನಡುರಸ್ತೆಯಲ್ಲಿ ಓಡಿದ ಅ ಹೆಣ್ಣುಮಗಳ ಬಗ್ಗೆ ಮಾತನಾಡಿಲ್ಲ ದೇಶದ ಪ್ರಧಾನಿಯಾಗಿ
ಪ್ರಧಾನಿಯ ಮುಂದೆ ಯಾವುದೇ ಸಾಧನೆಯಿಲ್ಲ. ಮೋದಿ ಅಲೆ ಇಲ್ಲವೇ ಇಲ್ಲ. ಈಶ್ವರಪ್ಪರವರೇ ನೇರವಾಗಿ ಸೆಡ್ಡು ಹೊಡೆಯುವಂಥ ಪರಿಸ್ಥಿತಿ ಇದೆ. ನಾವೆಲ್ಲ ಕಾಂಗ್ರೆಸ್ಸಿಗರು
ಒಗ್ಗಟ್ಟಾಗಿದ್ದೇವೆ. ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರ್ತೀವಿ. ನೂರಕ್ಕೆ ನೂರು ಗೆಲುವು ನಮ್ಮದೇ…
ಬಂಗಾರಪ್ಪರವರ ಕೊಡುಗೆ ಬಹಳ ದೊಡ್ಡದಿದೆ. ಗೀತಾ ಶಿವರಾಜ್ ಕುಮಾರ್ ಕೊಡುಗೆ, ಸೇವೆಯೂ ದೊಡ್ಡದಿದೆ.ಬಂಗಾರಪ್ಪನವರ ಮಗಳಾಗಿ ಅವರು ಇನ್ನಷ್ಟು ಕೇಲಸಮಾಡಲು ನಾವು ಈ ಬಾರಿ ಗೆಲ್ಲಿಸಿಕೊಂಡು ಬರಬೇಕಿದೆ
ಈಶ್ವರಪ್ಪ ಬಂಡಾಯ ಬಹಳ ದೊಡ್ಡ ಲಾಭತರಲಿದೆ. ಬಿಜೆಪಿ ಈಗ ಏನೆಂದು ಅವರಿಗೆ ಅರ್ಥವಾಗಿದೆ. ರೇಣುಕಾಚಾರ್ಯ, ಸಿಟಿ ರವಿ, ಈಶ್ವರಪ್ಪರವರ ಕಥೆ ಏನಾಯ್ತೆಂದು ಎಲ್ಲರಿಗೂ ಗೊತ್ತಾಗಿದೆ

ಪತ್ರಿಕಾಗೋಷ್ಠಿಯಲ್ಲಿ ಆಯನೂರು ಮಂಜುನಾಥ್, ಆರ್.ಪ್ರಸನ್ನ ಕುಮಾರ್, ಕಲಗೋಡು ರತ್ನಾಕರ್, ಹೆಚ್.ಸಿ.ಯೋಗೇಶ್, ಚಂದ್ರಭೂಪಾಲ್, ಕಲೀಂ ಪಾಷ, ಶಿ.ಜು.ಪಾಶ, ಹೆಚ್ ಎಂ ಮಧು, ರಮೇಶ್ ಶಂಕರಘಟ್ಟ, ಪ್ರವೀಣ್, ಜಿ.ಪದ್ಮನಾಭ್,ಚಂದ್ರಶೇಖರ್ ಮುಜ್ಜು ಸೇರಿದಂತೆ ಹಲವರಿದ್ದರು.

Leave a Reply

Your email address will not be published. Required fields are marked *

Optimized by Optimole
error: Content is protected !!