ನೀರು ಎಂದು ಭಾವಿಸಿ ಆ್ಯಸಿಡ್ ಕುಡಿದ ಕ್ರಿಕೆಟಿಗ ಮಾಯಾಂಕ್ ಅಗರವಾಲ್.!!

ಭಾರತ ಕಂಡ ಶ್ರೇಷ್ಠ ಕ್ರಿಕೆಟ್ ಆಟಗಾರರಲ್ಲಿ ಒಬ್ಬರಾದ ನಮ್ಮ ಕರ್ನಾಟಕದ ಹೆಮ್ಮೆಯ ಕ್ರಿಕೆಟಿಗ ಹಾಲಿ ಕರ್ನಾಟಕ ರಣಜಿ ತಂಡದ ನಾಯಕ ಮಾಯಾಂಕ್ ಅಗರವಾಲ್….

ನೀರು ಎಂದು ಭಾವಿಸಿ ‘ಆ್ಯಸಿಡ್ ‘ಕುಡಿದ ಮಾಯಾಂಕ್ ಅಗರವಾಲ್..!?

ತ್ರಿಪುರ ವಿರುದ್ಧ ರಣಜಿ ಪಂದ್ಯ ಗೆದ್ದು ಸೂರತ್’ಗೆ ಹೊರಟು ನಿಂತಿತ್ತು ಕರ್ನಾಟಕದ ರಣಜಿ ಕ್ರಿಕೆಟ್ ತಂಡ. ಆಟಗಾರರೆಲ್ಲಾ ಅಗರ್ತಾಲದಲ್ಲಿ ಹತ್ತಿ ಕೂತಿದ್ದರು. ತಂಡದ ನಾಯಕ ಮಯಾಂಕ್ ಅಗರ್ವಾಲ್ ಬಾಯಾರಿಕೆಯಾಗುತ್ತಿದೆ ಎಂದು ತನ್ನ ಸೀಟಿನ ಮುಂಭಾಗದಲ್ಲಿದ್ದ ನೀರಿನ ಬಾಟಲಿಯನ್ನು ಓಪನ್ ಮಾಡಿ ಒಂದು ಗುಟುಕು ಕುಡಿದಿದ್ದಾರೆ ಅಷ್ಟೇ..!

ಬಾಯಿ, ನಾಲಿಗೆ, ಗಂಟಲು ಸುಟ್ಟು ಹೋದ ಅನುಭವ.. ಉರಿ ಉರಿ ಅಂತ ಕಿರುಚಿಕೊಂಡಿದ್ದಾರೆ. ಏನಾಗುತ್ತಿದೆ ಎಂಬುದು ಗೊತ್ತಾಗುವಷ್ಟರಲ್ಲಿ ಮಯಾಂಕ್ ಅಗರವಾಲ್’ನ ಬಾಯಿ, ನಾಲಿಗೆ, ಗಂಟಲು, ಮುಖದ ಕೆಳ ಭಾಗ ಸುಟ್ಟು ಹೋಗಿತ್ತು. ಯಾಕಂದ್ರೆ ಮಯಾಂಕ್ ಕುಡಿದದ್ದು ನೀರಲ್ಲ.., ನೀರಿನ ಬಾಟಲಿಯಲ್ಲಿದ್ದ ಆ್ಯಸಿಡ್ ಅಥವಾ ಆ್ಯಸಿಡ್’ನಂಥಾ ವಿಷಕಾರಿ ದ್ರವ. ಸುದ್ದಿಕೇಳಿ ಒಂದುಕ್ಷಣ ಗರಬಡಿದ ಹಾಗಾಯಿತು.

ಈಗ ಮಯಾಂಕ್ ‘’ಅದೃಷ್ಟವಶಾತ್ out of danger. ಆದರೆ ಘಟನೆ ನಡೆದ ಕ್ಷಣದಿಂದ ಒಂದೇ ಒಂದು ಮಾತೂ ಅವರ ಬಾಯಿಂದ ಹೊರ ಬಂದಿಲ್ಲ.. ಅರ್ಥಾತ್ ಮಾತನಾಡಲು ಆಗುತ್ತಿಲ್ಲ. ಬಾಯಿ, ನಾಲಿಗೆ, ಹಲ್ಲುಗಳಿಗೆ ಡ್ಯಾಮೇಜ್ ಆಗಿದೆ. ತುಟಿಗಳು ದಪ್ಪನೆ ಊದಿಕೊಂಡಿದೆಯಂತೆ
ಸದ್ಯ ಅಗರ್ತಾಲದ TLS ಆಸ್ಪತ್ರೆಯಲ್ಲಿ ICUನಲ್ಲಿ ಮಯಾಂಕ್’ಗೆ ಚಿಕಿತ್ಸೆ ನೀಡಲಾಗುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ನಾಳೆ ಬೆಂಗಳೂರಿಗೆ ಶಿಫ್ಟ್ ಮಾಡಿ ಹೆಚ್ಚಿನ ಚಿಕಿತ್ಸೆ ಮುಂದುವರಿಯಲಿದೆ,

ನೀರೆಂದು ಆ್ಯಸಿಡ್ ಕುಡಿದರೇ ಮಯಾಂಕ್ ಅಗರ್ವಾಲ್?
ಇತ್ತೀಚಿನ ಮಾಹಿತಿಗಳ ಪ್ರಕಾರ, ಸ್ಟೋರೇಜ್ ಏರಿಯಾದಲ್ಲಿ ವಿಮಾನದ ಸಿಬ್ಬಂದಿಯು ವಾಟರ್ ಬಾಟಲ್‌ನಲ್ಲಿ ಆ್ಯಸಿಡ್ ಇಟ್ಟಿದ್ದರು ಎನ್ನಲಾಗಿದೆ. ಮಯಾಂಕ್ ಅಗರ್ವಾಲ್ ಅವರು ನೀರೆಂದು ತಪ್ಪಾಗಿ ಭಾವಿಸಿ ಆ್ಯಸಿಡ್ ಕುಡಿದಿದ್ದಾರೆ. ಆ್ಯಸಿಡ್ ಕುಡಿದ ಮರುಕ್ಷಣವೇ ಅವರು ಎಲ್ಲವನ್ನು ಉಗುಳಿದ್ದಾರೆ. ಹಾಗಾಗಿ ಆ್ಯಸಿಡ್ ಅವರ ಹೊಟ್ಟೆಯನ್ನು ತಲುಪಿರುವ ಸಾಧ್ಯತೆ ಕ್ಷೀಣವಾಗಿದೆ. ವೈದ್ಯರು ಅವರ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಿದ್ದಾರೆ.
 

ಮಾಯಾಂಕ್ ಆರೋಗ್ಯದ ಕುರಿತು ತ್ರಿಪುರಾ ಆರೋಗ್ಯ ಕಾರ್ಯದರ್ಶಿ ಕಿರಣ್ ಗಿಟ್ಟೆ ಪಿಟಿಐ ಗೆ ನೀಡಿದ ವರದಿ

ಕರ್ನಾಟಕ ರಣಜಿ ತಂಡದ ಸದಸ್ಯ ಮಯಾಂಕ್ ಅಗರ್ವಾಲ್ ವಿಮಾನದಲ್ಲಿ ಪ್ರಯಾಣಿಸುವಾಗ ಆಕಸ್ಮಿಕವಾಗಿ ನೀರಿನ ಪೌಚ್ ಸೇವಿಸಿದ್ದಾರೆ. ತಕ್ಷಣವೇ ಅವರಿಗೆ ಉರಿ ಉರಿಯಿತು. ಅವರ ಸ್ಥಿತಿ ಸ್ಥಿರವಾಗಿದೆ. ಇದರಿಂದ ಬಹುಬೇಗ ಹೊರಬರಲಿ ಎಂದು ಹಾರೈಸುತ್ತೇವೆ. ತನಿಖೆ ನಡೆಯುತ್ತಿದೆ ಎಂದು ತ್ರಿಪುರಾ ಆರೋಗ್ಯ ಕಾರ್ಯದರ್ಶಿ ಕಿರಣ್ ಗಿಟ್ಟೆ ಹೇಳುತ್ತಾರೆ.

ಐಎಲ್‌ಎಸ್ ಆಸ್ಪತ್ರೆ ಅಗರ್ತಲಾ ಭಾರತೀಯ ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ಅವರ ಆರೋಗ್ಯದ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, “ಅವರು ಪ್ರಾಯೋಗಿಕವಾಗಿ ಸ್ಥಿರರಾಗಿದ್ದಾರೆ ಮತ್ತು ನಿರಂತರವಾಗಿ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ” ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!