ಮಾನವೀಯತೆ ಮೆರೆದ ತೀರ್ಥಹಳ್ಳಿಯ ಕುರುವಳ್ಳಿ ನಾಗರಾಜ್
ತೀರ್ಥಹಳ್ಳಿ: ಬುಧವಾರದಂದು ತೀರ್ಥಹಳ್ಳಿ ಪಟ್ಟಣದ ಬೆಟ್ಟಮಕ್ಕಿಯ ಕಿತ್ತನಗದ್ದೆ ರಸ್ತೆಯಲ್ಲಿ ಓಮಿನಿ ವ್ಯಾನ್ ಒಂದು ಚಿತ್ರದುರ್ಗದಿಂದ ತೀರ್ಥಹಳ್ಳಿಗೆ ರಸ್ತೆ ಬದಿಯಲ್ಲಿ ಮಣ್ಣು ಕೆಲಸಕ್ಕೆ ಬಂದಿರುವ ಕೂಲಿ ಕಾರ್ಮಿಕರ ಕುಟುಂಬದ ಮಂದಿಗೆ ವ್ಯಾನಿನಿಂದ ಗುದ್ದಿ ನಿಲ್ಲಿಸದೆ ಸ್ಥಳದಿಂದ ಪರಾರಿ ಅಗಿದ್ದಾರೆ,ಅದೇ ಸಮಯದಲ್ಲಿ ಅದೇ ಮಾರ್ಗದಲ್ಲಿ ಬರುತ್ತಿದ್ದ ತೀರ್ಥಹಳ್ಳಿ ಆರ್ಯ ಈಡಿಗರ ಸಂಘದ ಕಸಬಾ ಹೋಬಳಿ ಚುನಾವಣೆ ಭಾನುವಾರ ನಡೆಯಲಿದ್ದು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಅಭ್ಯರ್ಥಿಗಳಾದ ಕುರುವಳ್ಳಿ ನಾಗರಾಜ್ ಹಾಗೂ ಹೊದಲ ಶೀವು ಅವರುಗಳು ಅದೆ ಮಾರ್ಗದಲ್ಲಿ ಬಂದಿದ್ದಾರೆ ತಕ್ಷಣ ರಸ್ತೆಯಲ್ಲಿ ಬಿದ್ದಿದ್ದ ಕೂಲಿ ಕಾರ್ಮಿಕರ ಕುಟುಂಬದ ಪುಟ್ಟ ಮಗು ಮತ್ತು ತಾಯಿಗೆ ತೀವ್ರರೀತಿಯ ಗಾಯವಾಗಿದ್ದು ತಾಯಿ ಮಗು ನರಳುತ್ತಿರುವುದನ್ನು ನೋಡಿದ ಸಮಾಜ ಸೇವಕ ಕುರುವಳ್ಳಿ ನಾಗರಾಜ್ ಮತ್ತು ಸ್ನೇಹಿತರು ಕೂಡಲೇ ಗಾಯಾಳುಗಳನ್ನು ತಮ್ಮ ಕಾರಿನಲ್ಲಿ ಕರೆದೊಯ್ದು ಜೆಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೂಡಲೇ ಚಿಕಿತ್ಸೆ ನೀಡಿದ ವೈದ್ಯರು ತಾಯಿ ಮಗುವಿಗೆ ಯಾವುದೇ ಪ್ರಾಣ ಅಪಾಯ ಇಲ್ಲ ಎಂದಿದ್ದಾರೆ,
ಹೌದು ತೀರ್ಥಹಳ್ಳಿ ನಾಗರಾಜ್ ಅದೇ ಎಲ್ಲರ ಪ್ರೀತಿಯ ಕುರುವಳ್ಳಿ ನಾಗರಾಜ್ ಸದಾ ಸಾರ್ವಜನಿಕ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ, ಮನವಿತೇ ಮರೆಯುವ ವಿಚಾರದಲ್ಲೊಂತು ಈತ ಸದಾ ಮುಂದೆ,ನಿತ್ಯ ತನ್ನ ಬದುಕಿನ ನಡುವೆಯು ಬಿಡುವು ಮಾಡಿಕೊಂಡು ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಂಡು ಎಲ್ಲರ ಪ್ರೀತಿಗೆ ಪಾತ್ರರಾಗಿರುವ ಕುರುವಳ್ಳಿ ನಾಗರಾಜ್ ಅವರನ್ನು ಅಭಿನಂದಿಸಲೆ ಬೇಕು. ತಾಯಿ ಮಗುವನ್ನು ಕಾಪಡುವಲ್ಲಿ ನಾಗರಾಜ್ ಅವರ ಬೆನ್ನಿಗೆ ನಿಂತ ಹೊದಲ ಶೀವು ಅವರನ್ನು ಅಭಿನಂದಿಸಬೇಕು.