ನಿಗಮ-ಮಂಡಳಿ ಪಟ್ಟಿ ಪ್ರಕಟಕ್ಕೆ ಕ್ಷಣಗಣನೆ ಮುಂದೂಡುವ ಪ್ರಶ್ನೆಯೆ ಇಲ್ಲ : ಡಿ.ಕೆ. ಶಿವಕುಮಾರ್
News.Ashwasurya.in
ಯಾವ ಸಮಯದಲ್ಲಿ ಬೇಕಾದರೂ ನಿಗಮ, ಮಂಡಳಿ ಆಯ್ಕೆ ಪಟ್ಟಿ ಪ್ರಕಟವಾಗಬಹುದು. ಈ ಪಟ್ಟಿ ಮುಂದೂಡುವ ಸಾಧ್ಯತೆ ಇಲ್ಲ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಚುನಾವಣೆ ಸಮಯದಲ್ಲಿ ನಾವು ಯಾರಿಗೆ ಮಾತು ಕೊಟ್ಟಿದ್ದೆವೋ ಅವರಿಗೆಲ್ಲ ಸ್ಥಾನಮಾನ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಬೆಂಗಳೂರು(ಜ.16): ನಿಗಮ-ಮಂಡಳಿ ನೇಮಕ ಮಾಡುವುದನ್ನು ಮು೦ದಡುವ ಸಾಧ್ಯತೆಯಿಲ್ಲ. ಯಾವ ಕ್ಷಣದಲ್ಲಿ ಬೇಕಾದರೂ ಆಯ್ಕೆ ಪಟ್ಟಿ ಪ್ರಕಟ ವಾಗಬಹುದು ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೋಮವಾರ ಸುದ್ದಿಗಾರರ ಜತೆ ಮಾತನಾಡುತ್ತ ಹೇಳಿದ್ದಾರೆ.