ಚಲಿಸುತ್ತಿದ್ದ ಕಾರಿನಿಂದ ರಿವಲ್ವಾರ್ ಹಿಡಿದ ಕೈಯನ್ನು ಹೊರಹಾಕಿ ಸಾರ್ವಜನಿಕವಾಗಿ ಭಯಹುಟ್ಟಿಸಿದ ರೌಡಿಗಳ ಬಂಧನ.!!

ಚಲಿಸುತ್ತಿದ್ದ ಕಾರಿನಿಂದ ರಿವಲ್ವಾರ್ ಹಿಡಿದ ಕೈಯನ್ನು ಹೊರಹಾಕಿ ಸಾರ್ವಜನಿಕವಾಗಿ ಭಯಹುಟ್ಟಿಸಿದ ರೌಡಿಗಳ ಬಂಧನ.!!

news.ashwasurya.in

ಲಕ್ನೋ: ಲಕ್ನೋ ನಗರದಲ್ಲಿ ವೇಗವಾಗಿ ಚಲಿಸುತ್ತಿದ್ದ ಕಾರೊಂದರಲ್ಲಿ ಕಿಟಕಿ ಮೂಲಕ ರಿವಲ್ವಾರ್ ಹಿಡಿದು ತೆರಳುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲೇ ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ಬಲೆ ಬೀಸಿದ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.

ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಎನ್ ಕೌಂಟರ್ ಆದ ಆರೋಪಿಗಳ ಮನೆಯನ್ನು ಸರ್ಕಾರ ಧ್ವಂಸಗೊಳಿಸಿದರೂ ಕೂಡ ಆರೋಪಿಗಳಿಗೆ ಇನ್ನೂ ಬುದ್ದಿಬಂದಂತೆ ಕಾಣುತ್ತಿಲ್ಲ. ಇದೀಗ ಮತ್ತೊಂದು ಘಟನೆ ನೆಡೆದಿದೆ ಮತ್ತದೆ ರೀತಿಯಲ್ಲಿ ಸಾರ್ವಜನಿಕರಲ್ಲಿ ಭಯ ಹುಟ್ಟಿಸುವಂತಹ ಘಟನೆ ಘಾಜಿಯಾಬಾದಿನ ಸಿದ್ಧಾರ್ಥ್ ವಿಹಾರ್ ಪ್ರದೇಶದಲ್ಲಿರುವ ರಾಷ್ಟ್ರೀಯ ಹೆದ್ದಾರಿ 24ರಲ್ಲಿ ನಡೆದಿದೆ. ಕಾರೊಂದರಲ್ಲಿ ರಿವಲ್ವಾರ್ ಹಿಡಿದು ರೌಡಿಗಳಂತೆ ಬೆದರಿಕೆ ಹಾಕುವಂತೆ ಕಾರಿನ ಕಿಟಕಿ ಬದಿಯಲ್ಲಿ ಪ್ರದರ್ಶಿಸುವ ವಿಡಿಯೋವನ್ನು ವ್ಯಕ್ತಿಯೊಬ್ಬರು ಮೊಬೈಲ್ ನಲ್ಲಿ ಸೆರೆ ಹಿಡಿದ್ದಿದ್ದು, ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಹರಿಯ ಬಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆದ ಬೆನ್ನಲೆ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯ ಬಳಿಕ ಉತ್ತರ ಪ್ರದೇಶದ ಪೊಲೀಸರು ಪ್ರಕರಣ ದಾಖಲಿಸಿಕೊಂಡು.ಕಾರಿನಲ್ಲಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆಸಿದ್ದಾರೆ. ಎಂದು  ಘಾಜಿಯಾಬಾದ್ ಡಿಸಿಪಿ ತಿಳಿಸಿರುವುದು ಮಾದ್ಯಮದಲ್ಲಿ ವರದಿಯಾಗಿದೆ.

ಸುಧೀರ್ ವಿಧಾತ , ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!