ಬಂಧಿತ ಆರೋಪಿ ರೌಡಿಶೀಟರ್ ಹಸೈನಾರ್
CRIME NEWS : ಗುತ್ತಿಗೆದಾರನಿಗೆ ಚೂರಿಯಿಂದ ಇರಿದು ದರೋಡೆ: ರೌಡಿಶೀಟರ್ ಬಂಧನ
ಚೂರಿಯಿಂದ ಇರಿದು ಗುತ್ತಿಗೆದಾರನ ದರೋಡೆ ಮಾಡಿದ ಆರೋಪಿ ರೌಡಿಶೀಟರ್ ನನ್ನು ಪೋಲಿಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಉಳ್ಳಾಲ: ಕರಾವಳಿ ನಿತ್ಯ ಕ್ರೈಮ್ ಲೋಕದಲ್ಲಿ ಮುಳುಗಿ ಹೋಗಿದೆ. ಅಕ್ರಮ ದಂಧೆಗಳ ಅಕ್ರಂದನ ಮುಗಿಲು ಮುಟ್ಟಿದೆ.ಪೋಲಿಸ್ ಇಲಾಖೆ ಎಷ್ಟೇ ಅಲರ್ಟ್ ಆಗಿದ್ದರು ಸದ್ದಿಲ್ಲದೆ ಕ್ರೈಮ್ ಒಂದು ನಡೆದು ಹೋಗುತ್ತದೆ ಆ ಮಟ್ಟಕ್ಕೆ ಇಲ್ಲಿಯ ಪಾತಕಲೋಕ ಗರಿಬಿಚ್ಚಿ ಕುಳಿತಿದೆ….ಈ ಹಾದಿಯಲ್ಲಿ ರೌಡಿಶೀಟರ್ ಒಬ್ಬ ಚೂರಿಯಿಂದ ಇರಿದು ಗುತ್ತಿಗೆದಾರನನ್ನು ದರೋಡೆ ಮಾಡಿದ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಅಬ್ಬಕ್ಕ ವೃತ್ತದ ಬಳಿ ಶುಕ್ರವಾರ ಮಧ್ಯಾಹ್ನ ಈ ಪ್ರಕರಣ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಆರೋಪಿ ರೌಡಿಶೀಟರ್ ನನ್ನು ಬಂಧಿಸಿರುವ ಉಳ್ಳಾಲ ಪೊಲೀಸರು ಯಶಸ್ವಿಯಾಗಿದ್ದಾರೆ. ರೌಡಿಶೀಟರ್ ಜೋತೆಗೆ ದರೋಡೆಗೆ ಸಾತ್ ನೀಡಿದ್ದ ಇನ್ನಿಬ್ಬರು ಆರೋಪಿಗಳಿಗಾಗಿ ಪೋಲಿಸರು ಭಲೇ ಬಿಸಿದ್ದಾರೆ.
ಶುಕ್ರವಾರ ಮದ್ಯಾಹ್ನ ಉಳ್ಳಾಲ ದರ್ಗಾದಲ್ಲಿ ನಮಾಝ್ ಮುಗಿಸಿ ತಮ್ಮ ಸ್ವಿಫ್ಟ್ ಕಾರಲ್ಲಿ ತೆರಳುತ್ತಿದ್ದ ಉಳ್ಳಾಲ ಮುಕ್ಕಚ್ಚೇರಿ ನಿವಾಸಿ ಶಮೀರ್(33) ಎಂಬ ಗುತ್ತಿಗೆದಾರನನ್ನು ಉಳ್ಳಾಲದ ಸುಂದರಿ ಭಾಗ್ ನಿವಾಸಿ ಹಸೈನಾರ್ ತಡೆದು ಪರಿಚಯಿಸಿ ಕೊಳ್ಳುವ ನಾಟಕವಾಡಿ ಕಟ್ಟಡವೊಂದರ ಕಾಮಗಾರಿ ಇದೆ ಮಾಡಿಕೊಡುವಿರ ಎಂದು ಗುತ್ತಿಗೆದಾರ ಶಮೀರ್ ಅವರನ್ನು ಕೇಳಿದ ರೌಡಿಶೀಟರ್ ಹಸೈನಾರ್ ಗುತ್ತಿಗೆದಾರನ ಕಾರನ್ನೇರಿ ಅಬ್ಬಕ್ಕ ಸರ್ಕಲ್ ಕಡೆಗೆ ತೆರಳುವಂತೆ ಹೇಳಿದ್ದಾನೆ. ಅಬ್ಬಕ್ಕ ಸರ್ಕಲ್ ಬಳಿ ಕಾರು ನಿಲ್ಲಿಸಲು ಹೇಳಿದ ಹಸೈನಾರ ಅಲ್ಲಿ ಮತ್ತಿಬ್ಬರು ತನ್ನ ಸಹಚರರಾದ ಉಮರ್ ನವಾಬ್ ಮತ್ತು ಅಕ್ಬರ್ ಉಳ್ಳಾಲ್ ಎಂಬಿಬ್ಬರು ಕಾರಿಗೆ ಹತ್ತಿಸಿಕೊಂಡಿದ್ದಾನೆ.
ಉಳ್ಳಾಲದ ಬಸ್ತಿ ಪಡ್ಪು ಎಂಬಲ್ಲಿ ಕಾರು ತಲುಪುತ್ತಿದ್ದಂತೆ ಶಮೀರ್ ಕಾಲಿಗೆ ಆರೋಪಿಗಳು ಚಾಕುವಿನಿಂದ ಇರಿದು ಹಲ್ಲೆಗೈದು ಹಣ ಸಿಗದಿದ್ದಾಗ ಕಾರು,ಲ್ಯಾಪ್ ಟಾಪನ್ನು ದರೋಡೆಗೈದಿದ್ದಾರೆ.ರೌಡಿಗಳಿಂದ ತಪ್ಪಿಸಿಕೊಂಡ ಶಮೀರ್ ಉಳ್ಳಾಲ ಠಾಣೆಗೆ ಬಂದು ದೂರು ನೀಡಿದ್ದಾರೆ.
ಎಸಿಪಿ ಧನ್ಯಾ ನಾಯಕ್ ನಿರ್ದೇಶನದಂತೆ ಉಳ್ಳಾಲ ಪೊಲೀಸ್ ಇನ್ಸ್ ಪೆಕ್ಟರ್ ಬಾಲಕೃಷ್ಣ ನೇತೃತ್ವದ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ ರೌಡಿ ಹಸೈನಾರ್ ನನ್ನು ಮಧ್ಯರಾತ್ರಿಯೇ ಬಂಧಿಸಿದ್ದಾರೆ.ದರೋಡೆ ಮಾಡಿದ ಕಾರು,ಲ್ಯಾಪ್ ಟಾಪ್,ಕೃತ್ಯಕ್ಕೆ ಬಳಸಲಾದ ಚೂರಿಯನ್ನು ದಸ್ತಗಿರಿ ಮಾಡಿಕೊಂಡ ಪೋಲಿಸರ ತಂಡ ತಲೆಮರೆಸಿ ಕೊಂಡಿರುವ ರೌಡಿ ಶೀಟರ್ ಉಮರ್ ನವಾಬ್ ಮತ್ತು ಅಕ್ಬರ್ ಉಳ್ಳಾಲ್ ಬಂಧನಕ್ಕೆ ಭಲೇ ಬಿಸಿದ್ದಾರೆ.
ಸುಧೀರ್ ವಿಧಾತ ,ಶಿವಮೊಗ್ಗ