
SHOCKING :ಮರ್ಡರ್ ಮಾಡಿ ‘ಕೊಂದಿದ್ದು ನಾವೇ’ ಎಂದು ಸೆಲ್ಪಿ ವೀಡಿಯೋ’ ಮಾಡಿದ ಹಂತಕರು.!
news.ashwasurya.in
ಅಶ್ವಸೂರ್ಯ/ಹಾಸನ : ಕರುನಾಡಿನಲ್ಲಿ ಬೆಚ್ಚಿ ಬೀಳಿಸೋ ಘಟನೆಯೊಂದು ನಡೆದು ಹೋಗಿದೆ. ಯುವಕನನ್ನು ಬರ್ಬರವಾಗಿ ಹತ್ಯೆಗೈದ ಹಂತಕರು ನಾವೇ ಕೊಲೆ ಮಾಡಿದ್ದೇವೆ ಎಂದು ಸೆಲ್ಪಿ ವೀಡಿಯೋ ಮಾಡಿ ಹರಿಬಿಟ್ಟ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿ ಬಳಿ ಈ ಯುವಕನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಕೀರ್ತಿ ಎಂಬ ಯುವಕನ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ಹಂತಕರು ನಂತರ ಮೃತದೇಹದ ಮುಂದೆ ಸೆಲ್ಪಿ ವಿಡಿಯೋ ಮಾಡಿದ್ದಾರೆ.

ಆಟೋ ಚಾಲಕ ಕೀರ್ತಿ ತಲ್ಯ ಎಂಬಾತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈತ ಹಾಸನದ ಹೂವಿನಹಳ್ಳಿ ಕಾವಲು ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ಶವದ ಮುಂದೆ ಸೆಲ್ಪಿ ವಿಡಿಯೋ ಮಾಡಿದ ಹಂತಕರು ನಂತರ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಅನ್ನು ಹಂಚಿಕೊಂಡಿದ್ದಾರೆ.ಈ ಸಂಬಂಧ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವೀಡಿಯೋ ಆಧರಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.


