ಶಿವಮೊಗ್ಗ : ಭದ್ರಾವತಿಯಲ್ಲಿ ಸರ್ಕಾರಿ ನೌಕರ ಪತಿ ಕೊಟ್ಟ ಚಿತ್ರಹಿಂಸೆಗೆ ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಪತ್ನಿ.!

news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ಬಾಳಿ ಬದುಕ ಬೇಕಾಗಿದ್ದ ಮುದ್ದಾದ ಯುವತಿಯ ಜೀವ ಗಂಡನೆಂಬ ರಕ್ಕಸನ ಕಿರುಕುಳಕ್ಕೆ ನಲುಗಿ ಹೋಗಿದೆ.!? ಗಂಡನ ದಿನನಿತ್ಯದ ಹಿಂಸೆಯನ್ನು ತಾಳಲಾರದೆ ಭದ್ರಾವತಿಯಲ್ಲಿ ಯುವತಿ ಆತ್ಮಹತ್ಯೆಗೆ ಶರಣಾಗಿ ಸಾವಿನ ಮನೆ ಸೇರಿದ್ದಾಳೆ.!? ಸರ್ಕಾರಿ ಕೆಲಸದವನೇ ಬೇಕು ಬೇಕು ಎಂದು ಮನೆಯವರು ಮಗಳಿಗೆ ಮದುವೆ ಮಾಡಿದರು.! ಮದುಯಾಗಿ ಕೇವಲ ಏಳು ತಿಂಗಳಿಗೆ ಮಗಳು ಸರ್ಕಾರಿ ನೌಕರ ಗಂಡನ ಚಿತ್ರಹಿಂಸೆಗೆ ಹೆದರಿ ಮಸಣದ ಹಾದಿ ಹಿಡಿದಿದ್ದಾಳೆ.!
ತಮ್ಮ ಮಗಳಿಗೆ ಸರ್ಕಾರಿ ಕೆಲಸದಲ್ಲಿರುವ ಹುಡುಗನೇ ಬೇಕೆಂದು ಹುಡುಕಿ-ಹುಡುಕಿ ಕೊನೆಗೂ ಸರ್ಕಾರಿ ನೌಕರ ವರನನ್ನು ನೋಡಿ ಮದುವೆ ಮಾಡಿದ ತಪ್ಪಿಗೆ ಮುದ್ದಾದ ಮಗಳು ಸಾವಿಗೆ ಶರಣಾಗಿದ್ದಾಳೆ.! ಮಗಳನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಗಂಡ ಹಾಗೂ ಅತ್ತೆ-ಮಾವನ ಕಿರುಕುಳಕ್ಕೆ ಬೇಸತ್ತು ಮದುವೆಯಾದ ಏಳೇ ತಿಂಗಳಿಗೆ ಯುವತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ.
ಅಳಿಯನ ವಿರುದ್ಧ ಕಿರುಕುಳ ಆರೋಪ..

ಪ್ರೀತಿಯಿಂದ ಸಾಕಿದ ಮುದ್ದಾದ ಮಗಳನ್ನು ಕಳೆದುಕೊಂಡ ಪೋಷಕರು ಸರ್ಕಾರಿ ನೌಕರ ಅಳಿಯನೆ ಬೇಕು ಎಂದು ವರ ಹುಡುಕಿ ತಪ್ಪು ಮಾಡಿಬಿಟ್ವಿ.?ಎಂದು ಲತಾ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಡಿಬಿ ಹಳ್ಳಿಯ ಪರಮೇಶ್ವರಪ್ಪ- ರುದ್ರಮ್ಮ ದಂಪತಿಯ ಪುತ್ರಿ ಲತಾಗೆ ದಿಂಡದ ಹಳ್ಳಿಯ ಸರ್ಕಾರಿ ನೌಕರ ಗುರುರಾಜ್ ಎಂಬಾತನಿಗೆ ಕೊಟ್ಟು ತಮ್ಮ ಶಕ್ತಿ ಮೀರಿ ಅದ್ಧೂರಿಯಾಗಿ ಮದುವೆ ಮಾಡಿ ಕೊಟ್ಟಿದ್ದರು. ಆರೋಪಿ ಗುರುರಾಜ್ ಕೆಪಿಸಿಎಲ್ ಎಇಇ ಆಗಿ ಕೆಲಸ ಮಾಡುತ್ತಿದ್ದ. ಮಗಳು ಸುಖವಾಗಿರಲಿ ಅಂತ ಲಕ್ಷ ಲಕ್ಷ ಖರ್ಚು ಮಾಡಿ ಮದುವೆ ಮಾಡಿಕೊಟ್ಟಿದ್ರು. ಆದರೆ ಗಂಡ ಗುರುರಾಜ್ ಮದುವೆಯಾದ ಬಳಿಕ ಹೆಂಡತಿ ಲತಾಗೆ ಕೊಡಬಾರದ ಚಿತ್ರಹಿಂಸೆ ಕೊಟ್ಟಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ.
ವರ ಸರ್ಕಾರಿ ನೌಕರಿಯಲ್ಲಿದ್ದಾನೆ ಅಂತ 60 ಲಕ್ಷ ಕೊಟ್ಟು ಮಗಳ ಮದುವೆ ಮಾಡಿದ್ದ ಪೋಷಕರು ಇಂದು ಮುದ್ದಾದ ಮಗಳನ್ನೆ ಕಳೆದುಕೊಂಡು ದುಃಖ ಪಡುವಂತಾಗಿದೆ.
ಪತಿ ಹಾಗೂ ಆತನ ಕುಟುಂಬದವರ ದಿನನಿತ್ಯದ ಕಿರುಕುಳದಿಂದ ಬೇಸತ್ತ ಗೃಹಿಣಿ ಲತಾ ಆತ್ಮಹತ್ಯೆಗೆ ಶರಣಾಗಿದ್ದಾಳೆ.! ಭದ್ರಾವತಿ ತಾಲೂಕಿನ ಹಂಚಿನ ಸಿದ್ದಾಪುರ ಬಳಿಯ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಾಲೆಯ ಬಳಿ ಮಹಿಳೆಯ ಮೊಬೈಲ್ ಹಾಗೂ ಚಪ್ಪಲಿ ಪತ್ತೆಯಾಗಿದೆ. ಲತಾ ಮೃತದೇಹಕ್ಕೆ ಸ್ಥಳೀಯರು, ಅಗ್ನಿಶಾಮಕ ದಳ ಹಾಗೂ ಹೊಳೆಹೊನ್ನೂರು ಠಾಣೆ ಪೊಲೀಸರು ಹುಡುಕಾಟ ನಡೆಸಿ ಪತ್ತೆಹಚ್ಚಿದ್ದಾರೆ.
ಲತಾ ಬರೆದ ಡೆತ್ನೋಟ್ನಲ್ಲಿ ಏನಿದೆ.?

ಮದುವೆಯಾದ ಏಳು ತಿಂಗಳಲ್ಲಿ ಪತಿ ಹಾಗೂ ಆತನ ಕುಟುಂಬದವರು ನನಗೆ ನಾನಾ ರೀತಿಯಲ್ಲ ಹಿಂಸೆ ಕೊಟ್ಟಿದ್ದಾರೆ. ಎಂದು ಲತಾ ಡೆತ್ ನೋಟ್ನಲ್ಲಿ ಬರೆದಿದ್ದಾರೆ ಎನ್ನಲಾಗುತ್ತಿದ್ದು. ಸರ್ಕಾರಿ ನೌಕರ ಪತಿ ಗುರುರಾಜ್ ಹಾಗೂ ಆತನ ಕುಟುಂಬದವರ ಹಿಂಸೆ ತಾಳಲಾರದೆ ಆತ್ಮಹತ್ಯೆ ನಿರ್ಧಾರ ಮಾಡಿರುವುದಾಗಿ
‘ನನ್ನ ಸಾವಿಗೆ ಇವರೆಲ್ಲರೂ ಕಾರಣರಾಗಿದ್ದಾರೆ.
ನಾನು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗಿರುವ ಇವರುಗಳಿಗೆ ಶಿಕ್ಷೆ ಆಗಬೇಕು ಪತಿ ಗುರುರಾಜ್, ಕೃಷ್ಣಪ್ಪ, ನಾಗರತ್ನಮ್ಮ, ಶಾರದಮ್ಮ ಮತ್ತು ರಾಜೇಶ್ವರಿಯೇ ನನ್ನ ಸಾವಿಗೆ ಕಾರಣ ಎಂದು ಲತಾ ಡೆತ್ ನೋಟ್ ನಲ್ಲಿ ಬರೆದಿದ್ದಾರಂತೆ.! ಈ ಐದು ಜನ ನನಗೆ ಕೊಡಬಾರದ ಕಿರುಕುಳ ನೀಡಿದ್ದಾರೆ ಎಂದು ಲತಾ ಆರೋಪಿಸಿದ್ದಾರೆ.
ನಾನು ಮದುವೆಯಾದ ನಂತರ ಪತಿಯ ಮನೆಯ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಕಷ್ಟು ಪ್ರಯತ್ನ ಪಟ್ಟೆ ಆದರೆ ನನ್ನ ಗಂಡ ಗುರುರಾಜ್ ಆತನ ಅಕ್ಕ, ಅಮ್ಮ ಹಾಗೂ ಮಾವನ ಮಾತು ಕೇಳಿ ಕಿರುಕುಳ ನೀಡಿದ್ದಾನೆ. ನನಗೆ ತಾಳಿಕಟ್ಟಿದ ಪತಿಯೇ ಬೆಂಬಲ ನೀಡಲಿಲ್ಲ. ಆದ್ರೂ ಮುಂದೆ ಎಲ್ಲ ಸರಿ ಹೋಗುತ್ತೆ ಎಂದು ಸಾಕಷ್ಟು ಸಹಿಸಿಕೊಂಡೆ ಇದ್ದೆ ಆದರೆ ದಿನೇ ದಿನೇ ಅವರು ಮಾಡುವ ಸಂಚು ಕೀರುಕುಳದಿಂದ ನನಗೆ ಬದುಕಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದಲೇ ಸಾಕಷ್ಟು ನೋವು ಅನುಭವಿಸಿದ್ದೇನೆ. ಇನ್ನು ನನಗೆ ಸಹಿಸಿಕೊಂಡು ಬದುಕಲು ಸಾಧ್ಯವಿಲ್ಲ ಎಂದು ಬರೆದ ಲತಾ, ಇದನ್ನು ಓದಿದವರು ನನ್ನ ಸಾವಿಗೆ ನ್ಯಾಯ ಕೊಡಿಸಿ ಎಂದು ಡೆತ್ ನೋಟ್ನಲ್ಲಿ ಬರೆದಿದ್ದಾರೆ ಎನ್ನಲಾಗುತ್ತಿದ್ದು ಪೊಲೀಸರ ತನಿಖೆಯಿಂದ ಅಸಲಿ ಸತ್ಯ ಬಯಲಾಗಬೇಕಿದೆ.


