
32 ಎಸೆತ 15 ಸಿಕ್ಸರ್.! ಸ್ಪೋಟಕ ಶತಕ ಬಾರಿಸಿದ ವೈಭವ್ ಸೂರ್ಯವಂಶಿ.!
news.ashwasurya.in
ಅಶ್ವಸೂರ್ಯ/ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತದ ಯುವ ಬ್ಯಾಟ್ಸ್ಮನ್ ವೈಭವ್ ಸೂರ್ಯವಂಶಿ ಮತ್ತೊಮ್ಮೆ ಬಿರುಸಿನ ಆಟವಾಡಿ ಭರ್ಜರಿ ಶತಕವನ್ನು ಸಿಡಿಸಿದ್ದಾರೆ. ವೈಭವ್ ಕೇವಲ 32 ಎಸೆತಗಳಲ್ಲಿ ಶತಕವನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ಟಿ20 ಕ್ರಿಕೆಟ್ನಲ್ಲಿ ಅತ್ಯಂತ ವೇಗದ ಶತಕವನ್ನು ಬಾರಿಸಿದ ಕಿರಿಯ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
ಭಾರತೀಯ ಕ್ರಿಕೆಟ್ನಲ್ಲಿ ಭರವಸೆ ಮೂಡಿಸಿರುವ ವೈಭವ್ ಸೂರ್ಯವಂಶಿ ಮೈದಾನಕ್ಕೆ ಕಾಲಿಟ್ಟಾಗಲೆಲ್ಲಾ ಅವರ ಬ್ಯಾಟ್ನಿಂದ ದಾಖಲೆಗಳು ಸುರಿಮಳೆ ಆರಂಭವಾಗುತ್ತವೆ. ಕೇವಲ 14 ವರ್ಷ 232 ದಿನಗಳ ವಯಸ್ಸಿನಲ್ಲಿ ಸೂರ್ಯವಂಶಿ ಹಿರಿಯ ಆಟಗಾರನಂತೆ ಬ್ಯಾಟ್ ಬೀಸುತ್ತಾರೆ. ಅವರ ಹೊಡೆತಗಳಿಂದ ಎದುರಾಳಿ ಬೌಲರ್ಗಳು ನಡುಗುವ ಮಟ್ಟಕ್ಕೆ ಅವರ ಬ್ಯಾಟ್ ಅಬ್ಬರಿಸುತ್ತದೆ. ಶುಕ್ರವಾರ (ನವೆಂಬರ್ 14) ಕತಾರ್ನ ದೋಹಾದಲ್ಲಿ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ 2025 A ಟೂರ್ನಿಯಲ್ಲಿ (Rising stars Asia Cup 2025) ಭಾರತ ಎ ಪರ ನೀಲಿ ಜೆರ್ಸಿಯಲ್ಲಿ ಪಾದಾರ್ಪಣೆ ಮಾಡಿದ ವೈಭವ್, ಯುಎಇ ಬೌಲರ್ಗಳ ದಾಳಿಯನ್ನು ಸುಲಭವಾಗಿ ಮೆಟ್ಟಿ ನಿಂತರು. ವೈಭವ್ ಕೇವಲ 32 ಎಸೆತಗಳಲ್ಲಿ ಸಿಕ್ಸರ್ಗಳ ಸುರಿಮಳೆಯೊಂದಿಗೆ ಶತಕವನ್ನು ಪೂರ್ಣಗೊಳಿಸಿದರು. ಟಿ20 ಕ್ರಿಕೆಟ್ನಲ್ಲಿ ಅತ್ಯಂತ ವೇಗದ ಶತಕ ಬಾರಿಸಿದ ಕಿರಿಯ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ವೈಭವ್ ಸೂರ್ಯವಂಶಿ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ವೈಭವ್ ಸೂರ್ಯವಂಶಿ ಯುಎಇ ವಿರುದ್ಧ ಕೇವಲ 32 ಎಸೆತಗಳಲ್ಲಿ ಒಂಬತ್ತು ಸಿಕ್ಸರ್ಗಳು ಮತ್ತು ಹತ್ತು ಬೌಂಡರಿಗಳನ್ನು ಬಾರಿಸಿ ಶತಕ ಗಳಿಸಿದರು. ಇವರು ತಾವು ಆಡಿದ 42 ಎಸೆತಗಳ ಇನಿಂಗ್ಸ್ನಲ್ಲಿ 15 ಸಿಕ್ಸರ್ಗಳು ಮತ್ತು 13 ಬೌಂಡರಿಗಳನ್ನು ಒಳಗೊಂಡಂತೆ 144 ರನ್ಗಳೊಂದಿಗೆ ಕೊನೆಗೊಂಡಿತು. ಈ ಅವಧಿಯಲ್ಲಿ ಅವರ ಸ್ಟ್ರೈಕ್ ರೇಟ್ 324.85 ಆಗಿದ್ದು, ಇದು ಪುರುಷರ ಕ್ರಿಕೆಟ್ನಲ್ಲಿ ಟಿ20 ಶತಕ ಗಳಿಸಿದ ಯಾವುದೇ ಬ್ಯಾಟ್ಸ್ಮನ್ಗೆ ನಾಲ್ಕನೇ ಅತ್ಯಧಿಕ ಸ್ಟ್ರೈಕ್ ರೇಟ್ ಆಗಿದೆ.
ದಾಖಲೆ ಬರೆದ ವೈಭವ್.!
ವೈಭವ್ ಸೂರ್ಯವಂಶಿ ತಮ್ಮ ಸ್ಪೋಟಕ ಶತಕದ ಮೂಲಕ ಭಾರತದ ಪರ ಹೊಸ ದಾಖಲೆಯನ್ನು ಬರೆದಿದ್ದಾರೆ. ಅವರು ಟೀಮ್ ಇಂಡಿಯಾದ ‘ಹಿಟ್ಮ್ಯಾನ್’ ರೋಹಿತ್ ಶರ್ಮಾ (ರೋಹಿತ್ ಶರ್ಮಾ ವೇಗದ ಶತಕ) ದಾಖಲೆಯನ್ನು ಮುರಿದಿದ್ದಾರೆ. 2017ರ ಡಿಸೆಂಬರ್ 22 ರಂದು ಇಂದೋರ್ನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಕೇವಲ 35 ಎಸೆತಗಳಲ್ಲಿ ಟೀಮ್ ಇಂಡಿಯಾ ಪರ ಅತಿ ವೇಗದ ಟಿ20 ಶತಕ ಗಳಿಸಿ ದಾಖಲೆಯನ್ನು ಬರೆದಿದ್ದರು. ಇದೀಗ ವೈಭವ್ ಸೂರ್ಯವಂಶಿ ಭಾರತ ಎ ಪರ ಕೇವಲ 32 ಎಸೆತಗಳಲ್ಲಿ ಶತಕ ಗಳಿಸಿದ್ದಾರೆ. ಆದಾಗ್ಯೂ, ವೈಭವ್ ‘ಎ’ ತಂಡಕ್ಕಾಗಿ ಶತಕ ಗಳಿಸಿದ್ದರಿಂದ, ರೋಹಿತ್ ಶರ್ಮಾ ಟಿ20ಐ ವೇಗದ ಶತಕವನ್ನು ಹಿಂದಿಕ್ಕಲು ಸಾಧ್ಯವಿಲ್ಲ.

Here’s Vaibhav Suryavanshi wishing everyone a Happy 𝘾𝙝𝙞𝙡𝙙𝙍𝙐𝙉𝙎 𝘿𝙖𝙮 😅🙌🗿
ವೈಭವ್ ಸೂರ್ಯವಂಶಿ ಕೂಡ ಟಿ20 ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ದಾಖಲೆಯನ್ನು ಮುರಿಯುವ ಅವಕಾಶವನ್ನು ಹೊಂದಿದ್ದರು. ಆದಾಗ್ಯೂ, ತಮ್ಮ ಇನಿಂಗ್ಸ್ನಲ್ಲಿ 15 ಸಿಕ್ಸರ್ಗಳಿಗೆ ಔಟಾದ ನಂತರ ಅವರು ಆ ಅವಕಾಶವನ್ನು ಕಳೆದುಕೊಂಡರು. ಟಿ20 ಇನಿಂಗ್ಸ್ನಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ದಾಖಲೆಯನ್ನು ಫಿನ್ಲೆ ಹ್ಯೂಸ್ ಅಲೆನ್ ಹೊಂದಿದ್ದಾರೆ, ಅವರು 2025ರಲ್ಲಿ ಓಕ್ಲ್ಯಾಂಡ್ ಕ್ರೀಡಾಂಗಣದಲ್ಲಿ ಯುಎಸ್ ದೇಶಿ ಟಿ20 ಕ್ರಿಕೆಟ್ನಲ್ಲಿ ವಾಷಿಂಗ್ಟನ್ ವಿರುದ್ಧ ಸ್ಯಾನ್ ಫ್ರಾನ್ಸಿಸ್ಕೋ ಪರ ಆಡುವಾಗ ಈ ಸಾಧನೆ ಮಾಡಿದರು. ವೈಭವ್ ಈಗ ಟಿ20 ಇನಿಂಗ್ಸ್ನಲ್ಲಿ ಐದನೇ ಅತಿ ಹೆಚ್ಚು ಸಿಕ್ಸರ್ಗಳಿಗಾಗಿ ಕ್ರಿಸ್ ಗೇಲ್ ಮತ್ತು ಶ್ರೇಯಸ್ ಅಯ್ಯರ್ ಅವರೊಂದಿಗೆ ಸಮನಾಗಿದ್ದಾರೆ.
ಒಟ್ಟಿನಲ್ಲಿ ಭಾರತದ ಭವಿಷ್ಯದ ಕಿರಿಯ ಆಟಗಾರ ವೈಭವ್ ಸೂರ್ಯವಂಶಿ ತಾನು ಕಾಲಿಟ್ಟ ಕ್ರೀಡಾಂಗಣದಲ್ಲೇಲ್ಲ ಆಬ್ಬರಿಸುತ್ತಿರುವುದನ್ನು ನೋಡಿದರೆ ಮುಂದಿನ ದಿನಗಳಲ್ಲಿ ಬ್ಯಾಟ್ಸ್ಮನ್ಗಳ ಎಲ್ಲಾ ದಾಖಲೆಗಳು ವಂಶಿ ಹೆಸರಿಗೆ ದಾಖಲಾಗಬಹುದಾ.? ಎನ್ನುವ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳನ್ನು ಕಾಡುತ್ತಿದೆ….


