
ಒಡಿಶಾ : ಶ್ರೇಯಾ ಘೋಷಾಲ್ ಸಂಗೀತ ಕಾರ್ಯಕ್ರಮ ಕಾಲ್ತುಳಿತ.! ಲಘು ಲಾಠಿ ಪ್ರಹಾರ,ಆಸ್ಪತ್ರೆಗೆ ದಾಖಲಾದ ಸಂಗೀತ ಪ್ರೀತಿಯರು.!

news.ashwasurya.in
ಅಶ್ವಸೂರ್ಯ/ಒಡಿಶಾ :ರಾಷ್ಟ್ರದ ಜನಪ್ರಿಯ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್ ಅವರನ್ನು ನೋಡಲು ಹಾಗೂ ಅವರ ಹಾಡುಗಳನ್ನು ಕೇಳಲೆಂದೇ ದೊಡ್ಡ ಮಟ್ಟದಲ್ಲಿ ಜನಸಮೂಹ ಸೇರಿತ್ತು. ಇನ್ನೇನು ಸಂಗೀತ ಕಚೇರಿ ಆರಂಭವಾಗುವ ಮೊದಲೇ ನೆರೆದಿದ್ದ ಸಂಗೀತ ಪ್ರೀತಿಯರು ತಾಳ್ಮೆ ಕಳೆದುಕೊಂಡಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಈ ಘಟನೆ ನೆಡೆದಿದ್ದು ಒಡಿಶಾದ ಕಟಕ್ನಲ್ಲಿರುವ ಐತಿಹಾಸಿಕ ಬಾಲ ಯಾತ್ರಾ ಮೈದಾನದಲ್ಲಿ ಬಾಲಿವುಡ್ ಗಾಯಕಿ ಶ್ರೇಯಾ ಘೋಷಾಲ್ ಅವರ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಜನಸಂದಣಿ ನಿಯಂತ್ರಣಕ್ಕೆ ಬಾರದೆ ಕೇಲವು ಸ್ಥಳಗಳಲ್ಲಿ ಕಾಲ್ತುಳಿತದಂಥ ಪರಿಸ್ಥಿತಿ ಎದುರಾಗಿತ್ತು.! ಎಂದು ಕೇಲವು ಸ್ಥಳದಲ್ಲಿ ನೂಗು ನುಗ್ಗಲಿನಲ್ಲಿ ಹಲವರು ಮೂರ್ಛೆ ಹೋಗಿ ಅಸ್ವಸ್ಥಗೊಂಡಿದ್ದಾರೆ ಎಂದು ವರದಿಯಾಗಿದೆ.

ತಾಳ್ಮೆ ಕಳೆದುಕೊಂಡ ನೆರೆದಿದ್ದ ಜನರು
ಗಾಯಕಿ ಶ್ರೇಯಾ ಘೋಷಾಲ್ ಅವರನ್ನು ನೋಡಲು ಹಾಗೂ ಅವರ ಹಾಡು ಕೇಳಲೆಂದೇ ದೊಡ್ಡ ಮಟ್ಟದಲ್ಲಿ ಜಮೆಯಾಗಿದ್ದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ರಕ್ಷಣ ವ್ಯವಸ್ಥೆಯನ್ನು ಬಿಗಿ ಗೊಳಿಸಿ, ಸುತ್ತಲು ಬ್ಯಾರಿಕೇಡ್ಗಳನ್ನ ಅಳವಡಿಸಿದ್ದರು.ಅದರು ನಿಯಂತ್ರಣ ಕಳೆದುಕೊಂಡ ಜನರು ನುಗ್ಗಲು ಆರಂಭಿಸಿದ್ದರಂತೆ.! ಸಂಗೀತ ಕಾರ್ಯಕ್ರಮ ಪ್ರಾರಂಭವಾಗುವ ಮೊದಲೇ ಜನಸಮೂಹವು ತಾಳ್ಮೆ ಕಳೆದುಕೊಂಡಿದ್ದರ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ನೆರೆದಿಂದ ಜನರ ನಡುವೆ ಗಲಾಟೆ ಮತ್ತು ಜಗಳ ನಡೆದಿದೆ. ಕೆಲವು ಪ್ರೇಕ್ಷಕರು ನೂಕು ನುಗ್ಗಲಿನಲ್ಲಿ ಪ್ರಜ್ಞಾಹೀನರಾಗಿದ್ದಾರೆ. ಸ್ಥಳದಲ್ಲಿದ್ದ ಪೊಲೀರು ಅಸ್ವಸ್ಥಗೊಂಡವರನ್ನು ತಕ್ಷಣವೇ ಪ್ರಥಮ ಚಿಕಿತ್ಸಾ ಕೇಂದ್ರಕ್ಕೆ ಕರೆದೊಯ್ಯಲಾಯಿತು ಮತ್ತು ನಂತರ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ಪರಿಸ್ಥಿತಿಯನ್ನು ಅವಲೋಕಿಸಿ, ಪೊಲೀಸರು ಮತ್ತು ಸಂಘಟಕರು ತಕ್ಷಣವೇ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿ ಜನಸಂದಣಿಯನ್ನು ನಿಯಂತ್ರಿಸಿದ್ದರು ಹೆಚ್ಚುವರಿ ಪೊಲೀಸ್ ಆಯುಕ್ತರು ಸಹ ಪರಿಸ್ಥಿತಿಯನ್ನು ಅವಲೋಕಿಸಲು ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ಕೆಲವು ಮಾದ್ಯಮ ವರದಿ ಮಾಡಿದೆ.
ಗಲಭೆಕೋರ ಗುಂಪನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು. ಯಾವುದೇ ಗಂಭೀರ ಗಾಯಗಳಾಗಿರುವುದು ಇನ್ನೂ ದೃಢಪಟ್ಟಿಲ್ಲ.
ಬಾಲಿ ಯಾತ್ರೆ ಹಿನ್ನೆಲೆಯಲ್ಲಿ ಗಾಯಕಿ ಶ್ರೇಯಾ ಘೋಷಾಲ್ ಅವರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಬಾಲಿ ಯಾತ್ರೆಯ ನವೆಂಬರ್ 5 ರಂದು ಪ್ರಾರಂಭವಾಗಿ ನವೆಂಬರ್ 13 ರಂದು ಕೊನೆಗೊಂಡಿತ್ತು. ಗಾಯಕಿ ಶ್ರೇಯಾ ಘೋಷಾಲ್ ಅವರದು ಕೊನೆಯ ದಿನದ ಕಾರ್ಯಕ್ರಮವಾಗಿತ್ತು.
ಈ ಐತಿಹಾಸಿಕ ಜಾತ್ರೆಯು ಬೋಯಿಟಾ ಬಂದಾನ ಆಚರಣೆಯ ಮೂಲಕ ರಾಜ್ಯದ ಸಮುದ್ರ ಗತಕಾಲವನ್ನು ಸ್ಮರಿಸುತ್ತದೆ. ಲಕ್ಷಾಂತರ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.


