Headlines

ತೀರ್ಥಹಳ್ಳಿ : ಕೋಣಂದೂರು ಪೂಜಾ ಆತ್ಮಹತ್ಯೆ : ಹೆಂಡತಿ ಹೆಣ ನೋಡಿ ಎಸ್ಕೇಪ್ ಅದ ಗಂಡ.! ಇದು ಆತ್ಮಹತ್ಯೆಯೋ.? ಕೊಲೆಯೋ.?

ಅಶ್ವಸೂರ್ಯ/ತೀರ್ಥಹಳ್ಳಿ : ಕೋಣಂದೂರು ಸಮೀಪದ ಶಂಕರಳ್ಳಿಯ ನಿವಾಸಿ ಈಶ್ವರಪ್ಪ ಎಂಬುವವರ ಮುದ್ದಾದ ಮಗಳು ಪೂಜಾ ನೀಚ ಗಂಡ ಮತ್ತು ಆತನ ಮನೆಯವರ ಚಿತ್ರಹಿಂಸೆಯ ಸುಳಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿ ಸಾವಿನ ಮನೆ ಸೇರಿದ್ದಾಳೆ.ಆತ್ಮಹತ್ಯೆಗೆ ಯತ್ನಿಸಿ ಸಾವು ಬದುಕಿನೊಡನೆ ಹೊರಾಡುತ್ತಿದ್ದ ಪೂಜಾಳನ್ನು ಆಕೆಯ ಗಂಡ ಮತ್ತು ಆತನ ಮನೆಯವರು ಆಸ್ಪತ್ರೆಗೆ ಸೇರಿಸಿದ್ದಾರೆ, ಆದರೆ ಚಿಕಿತ್ಸೆ ಫಲಿಸದ ಹಿನ್ನೆಲೆಯಲ್ಲಿ ಬಾಳಿ ಬದುಕ ಬೇಕಾದ ಮುದ್ದಾದ ಹುಡುಗಿ ಮಸಣದೇಡೆ ಹೆಜ್ಜೆ ಹಾಕಿದ್ದಾಳೆ.! ಪತಿ ಮತ್ತು ಆತನ ಮನೆಯವರು ಪೂಜಾ ಸತ್ತಿದ್ದಾಳೆ ಎನ್ನುವ ವಿಷಯ ತಿಳಿಯುತ್ತಿದ್ದಂತೆ ಶವ ಬಿಟ್ಟು ಆಸ್ಪತ್ರೆಯಿಂದ ನಾಪತ್ತೆಯಾಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.!

ಕೊಣಂದೂರು ಸಮೀಪದ ಶಂಕರಳ್ಳಿಯ ಈಶ್ವರಪ್ಪನವರು ತಮ್ಮ ಮುದ್ದಾದ ಮಗಳನ್ನು ಕಳೆದ ಮೂರು ವರ್ಷಗಳ ಹಿಂದೆ ಎನ್.ಆರ್.ಪುರ ತಾಲೂಕಿನ ಮಾವಿನಕೆರೆ ಶೆಟ್ಟಿಕೊಪ್ಪದ ಶರತ್ ಎಂಬಾತನೊಂದಿಗೆ ಪೂಜಾಳನ್ನು ವಿವಾಹ ಮಾಡಿ ಕೊಟ್ಟಿದ್ದರು. ಅವರ ದಾಂಪತ್ಯಕ್ಕೆ ಸಾಕ್ಷಿಯೆಂಬಂತೆ ಎರಡೂವರೆ ವರ್ಷದ ಪುತ್ರ ಕೂಡ ಇದ್ದಾನೆ ಎಂದು ತಿಳಿದುಬಂದಿದೆ.
ಪುತ್ರ ಕೂಡ ಇದ್ದಾನೆ ಎನ್ನುವುದು ಬಿಟ್ಟರೆ ಗಂಡ ಶರತ್‌ ಮನೆಯಲ್ಲಿ ಪೂಜಾ ಅನುಭವಿಸಿದ್ದು ಮಾತ್ರ ನರಕ ದರ್ಶನವಂತೆ.? ಗಂಡ ಶರತ್ ಮತ್ತು ಆತನ ತಂದೆ,ತಾಯಿ ಹಾಗೂ ಸಹೋದರಿ ಸೇರಿಕೊಂಡು ಮದುವೆಯಾಗಿ ಗಂಡನ ಮನೆ ಸೇರಿದ ದಿನಂದಿಂದಲೆ ಪೂಜಾಳಿಗೆ ದಿನನಿತ್ಯ ಕಿರುಕುಳ ನೀಡಿ ಚಿತ್ರಹಿಂಸೆ ಕೊಟ್ಟಿದ್ದಾರೆ. ದಿನನಿತ್ಯ ಗಂಡನ ಮನೆಯ ಕಿರುಕುಳದಿಂದ‌ ನೊಂದು ಹೋಗಿದ್ದ ಪೂಜಾ ತವರು ಮನೆಗೆ ಬಂದು ತನ್ನ ಸಂಕಷ್ಟವನ್ನು ಹೇಳಿ ಕೊಂಡಿದ್ದಳಂತೆ.?ತವರುಮನೆಯಲ್ಲಿ ಅಪ್ಪ ಅಮ್ಮ ಮಗಳಿಗೆ ಗಂಡನಿಂದ ದೂರಾದರೆ ಸಮಾಜ ನೋಡುವ ರೀತಿಯೆ ಬೇರೆ ಸ್ವಲ್ಪ ಅನುಸರಿಸಿಕೊಂಡು ಹೋಗು ಎಂದು ಮಗಳಿಗೆ ಹೇಳಿದ್ದಾರೆ. ಅಪ್ಪ ಅಮ್ಮನ ಸಮಾಧಾನದ ಮಾತು ಕೇಳಿ ಹೇಗೊ ಬದುಕಿದರಾಯಿತು ಎಂದು ಮತ್ತೆ ನರಕದ ಕೂಪಕ್ಕೆ ಹೋಗಿದ್ದಾಳೆ ನೊಂದ ಹುಡುಗಿ ಪೂಜಾ,ಅದರೆ ಅಲ್ಲಿ ಮತ್ತದೆ ಕಥೆ.? ನಿಚರ ಸಂತಾನ ಮತ್ತೆ ಪೂಜಾಳಿಗೆ ಚಿತ್ರಹಿಂಸೆ ನೀಡಿದೆ ಎಂದು ಪೂಜಾಳ ಕುಟುಂಬ ಆರೋಪಿಸಿದೆ.! ಕಿರಾತಕ ಪತಿ ಮತ್ತು ಆತನ ನೀಚ ಕುಟುಂಬ ದಿನನಿತ್ಯ ಇನ್ನಿಲ್ಲದ ಕಿರುಕುಳ ನೀಡಿದೆಯಂತೆ.? ಗಂಡನ ಮನೆಯಲ್ಲಿ ಬದುಕಲು ತನ್ನೆಲ್ಲಾ ಶಕ್ತಿ ಮೀರಿ ಪ್ರಯತ್ನಿಸಿದರು ನಿತ್ಯ ನೀಚರ ಚಿತ್ರಹಿಂಸೆಗೆ ಬಳಲಿ ಹೋದ ಮುದ್ದಾದ ಹುಡುಗಿ ಪೂಜಾಳಿಗೆ ಈ ಬದುಕು ಸಾಕಾಗಿರಬಹುದು? ಕೊನೆಗೂ ಗಂಡನ ಮನೆಯವರ ಚಿತ್ರಹಿಂಸೆಗೆ ಸಂಪೂರ್ಣವಾಗಿ ನೊಂದು ಹೋದ ಹುಡುಗಿ ಪೂಜಾ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ.!ಕೂಡಲೇ ಶಿವಮೊಗ್ಗ ನಗರದ ನಾರಾಯಣ ಹೃದಯಾಲಯ ಆಸ್ಪತ್ರೆಗೆ ಸೇರಿಸಲಾಗಿದ್ದು ಪೂಜಾ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾಳೆ….

ಇನ್ನೂ ಚಿಕ್ಕ ವಯಸ್ಸಿನಲ್ಲೇ ಗಂಡ ಮತ್ತು ಆತನ ಮನೆಯವರ ನೀಚತ‌ನಕ್ಕೆ ಪೂಜಾ ಉಸಿರು ಚೆಲ್ಲಿದ್ದಾಳೆ…
ಪೂಜಾಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಪತಿ ಶರತ್ ಹಾಗೂ ಆತನ ಕುಟುಂಬದವರು ಆಸ್ಪತ್ರೆಯಲ್ಲಿಯೇ ಪೂಜಾಳ ಶವ ಹಾಗೂ ಪುಟ್ಟ ಕಂದಮ್ಮನನ್ನು ಬಿಟ್ಟು ನಾಪತ್ತೆಯಾಗಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆಯಲ್ಲದೆ.ಎನ್.ಆರ್.ಪುರ ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಲು ಮೀನಾಮೇಷ ಏಣಿಸುತ್ತಿದ್ದಾರಲ್ಲದೆ ಶರತ್ ಕುಟುಂಬಕ್ಕೆ ಪೊಲೀಸ್ ಠಾಣೆಯಲ್ಲಿ ರಾಜಾತೀಥ್ಯ ನೀಡುತ್ತಿದ್ದಾರೆ ಎಂಬ ಆರೋಪವೂ ಪೂಜಾ ಕುಟುಂಬ ವರ್ಗದಿಂದ ಕೇಳಿ ಬರುತ್ತಿದೆ.
ಚಿಕ್ಕಮಗಳೂರು ಜಿಲ್ಲಾ ರಕ್ಷಣಾಧಿಕಾರಿಗಳು ಹಾಗೂ ಎನ್.ಆರ್.ಪುರ ತಹಸೀಲ್ದಾರರು ಸೂಕ್ತ ಕಾನೂನು ಕ್ರಮ ಜರುಗಿಸಲಿ ಎಂಬುದು ಪೂಜಾಳ ಕುಟುಂಬದ ವರ ಒತ್ತಾಯವಾಗಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!