Headlines

ಮಂಗಳೂರು: ಆಸ್ಪತ್ರೆಯ ಹಾಸಿಗೆಯಲ್ಲಿ 134 ದಿನಗಳ ಹೊರಟ ಅಂತ್ಯವಾಯ್ತು.! ಕೋಮಾದಲ್ಲಿದ್ದ ಅಪೂರ್ವ ಭಟ್ ಇನ್ನಿಲ್ಲ.! ಅಪಘಾತ ಹೇಗಾಯ್ತು?

ಅಶ್ವಸೂರ್ಯ/ಮಂಗಳೂರು : ಪುತ್ತೂರು ಮೂಲದ ಅಪೂರ್ವ ಕೆ ಭಟ್‌ ಅವರು ಕಳೆದ ನಾಲ್ಕು ತಿಂಗಳ ಹಿಂದೆ ರಸ್ತೆ ಅಪಘಾತಕ್ಕೆ ಸಿಲುಕಿ ಆಸ್ಪತ್ರೆಗೆ ದಾಖಲಾಗಿದ್ದರು.134 ದಿನಗಳು ಜೀವನ್ಮರಣ ಹೋರಾಟ ನೆಡೆಸಿ ಕೊನೆಗೂ ವಿಧಿಯಾಟಕ್ಕೆ ಬಲಿಯಾಗಿದ್ದಾರೆ. ಕಳೆದ ಮೇ ತಿಂಗಳ ಅಂತ್ಯದಲ್ಲಿ ಅಪೂರ್ವ ಹೋಗುತ್ತಿದ್ದ ಕಾರಿಗೆ ಬಸ್‌ ಡಿಕ್ಕಿಯಾಗಿತ್ತು. ಅಪಘಾತದ ತೀವ್ರತೆಗೆ ಅಪೂರ್ವ ಕೋಮಕ್ಕೆ ಹೋಗಿದ್ದರು. ಈ ಘಟನೆ ಬಗ್ಗೆ ಅಪೂರ್ವ ಪತಿ ಆಶೀಶ್‌ ಸರಡ್ಕ ಅವರು ಸೋಷಿಯಲ್ ಮಿಡಿಯಾದಲ್ಲಿ ಪತ್ನಿಯ ನೆನೆದು ಹೇಳಿದ ಮಾತು…

ಸೋಶಿಯಲ್‌ ಮೀಡಿಯಾದಲ್ಲಿ ಪತ್ನಿಗಾದ ಅಪಘಾತದ ಬಗ್ಗೆ ಮಾಹಿತಿ ಕೊಟ್ಟು ಸಾವಿರಾರು ಮಂದಿಗೆ ಪರಿಚಿತರಾಗಿದ್ದ ಆಶೀಶ್‌ ಸರಡ್ಕ ಅವರ ಪತ್ನಿ ಅಪೂರ್ವ ಕೆ ಭಟ್‌ ಇನ್ನಿಲ್ಲ. ಕಳೆದ ಮೇ ತಿಂಗಳಿನಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಅವರು 134 ದಿನಗಳ ಜೀವನ್ಮರಣ ಹೋರಾಟ ನೆಡೆಸಿ ಅ,6ರ ಸಂಜೆ 6 ಗಂಟೆಗೆ ಕೊನೆ ಉಸಿರೆಳೆದಿದ್ದಾರೆ.! ಈ ಘಟನೆ ಬಗ್ಗೆ ಪತಿ ಆಶೀಶ್‌ ಸರಡ್ಕ ಅವರು ಕಳೆದ ಜೂನ್‌ನಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದರು.

ಇಂದು ಕೊನೆಯುಸಿರು ಬಿಟ್ಟ ಅಪೂರ್ವ
ಆಶಿಶ್‌ ಸರಡ್ಕ ಅವರೇ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದು, “134 ದಿನಗಳ ಪ್ರಯಾಣ ಇಂದು ಸಾಯಂಕಾಲ 6 ಗಂಟೆಗೆ ಮುಗಿಯಿತು.. ಅಪೂರ್ವ ಈಗ ನಮ್ಮೊಂದಿಗೆ ಇಲ್ಲ! ಆಕೆ ಇನ್ನು ನೆನಪು ಮಾತ್ರ. ಪ್ರಾರ್ಥಿಸಿದ ಎಲ್ಲರಿಗೂ ನಾನು ಚಿರಋಣಿ!” ಎಂದಿದ್ದಾರೆ.
ಸಾವಿರಾರು ಜನರ ಪ್ರಾರ್ಥನೆ
ಬೆಂಗಳೂರಿನಲ್ಲಿ ಆಶಿಶ್‌ ಹಾಗೂ ಅಪೂರ್ವ ಕೆಲಸ ಮಾಡುತ್ತಿದ್ದರು. ಇವರ ಊರು ಮಂಗಳೂರು. ಈ ಜೋಡಿಗೆ ಮುದ್ದಾದ ಮಗಳಿದ್ದಾಳೆ. ಬಸ್‌ ಅಪಘಾತದಿಂದ ಇವರ ಜೀವನವೇ ಬದಲಾಯ್ತು. ಕಳೆದ ನಾಲ್ಕು ತಿಂಗಳಿನಿಂದ ಅಪೂರ್ವ ಆಸ್ಪತ್ರೆ ಬೆಡ್‌ಮೇಲಿದ್ದರು. ಪತ್ನಿ ಹುಷಾರಾಗಲಿ ಎಂದು ಆಶಿಶ್‌ ಅವರು ಸೋಶಿಯಲ್‌ ಮೀಡಿಯಾದಲ್ಲಿ “ತಾಯಿ ಪ್ರೀತಿಗೋಸ್ಕರ ಹಂಬಲಿಸುತ್ತಿರುವ ಮಗಳಿಗಾಗಿ ಪ್ರಾರ್ಥಿಸಿ” ಎಂದು ನಿತ್ಯ ಪೋಸ್ಟ್‌ ಹಂಚಿಕೊಳ್ಳುತ್ತಿದ್ದರು. ಅದನ್ನು ನೋಡಿ ಅನೇಕರು ವಿಧ ವಿಧವಾಗಿ ಪ್ರಾರ್ಥಿಸಿದ್ದಾರೆ, ಸ್ವಲ್ಪವೂ ಧೃತಿಗೆಡದೆ ಆಶಿಶ್‌ ಅವರು ಪತ್ನಿ ಈ ಹೋರಾಟದಲ್ಲಿ ಗೆದ್ದು ಬರ್ತಾಳೆ ಎಂದುಕೊಂಡು ಪ್ರಯತ್ನಪಟ್ಟಿದ್ದರು. ಬೆಂಗಳೂರಿನಿಂದ ಮಂಗಳೂರಿಗೆ ಮನೆ ಶಿಫ್ಟ್‌ ಮಾಡಿದ್ದರು. ಆದರೆ ಯಾವ ಪ್ರಾರ್ಥನೆಯೂ ಅ ದೇವರಿಗೆ ಕೇಳದೆ ಹೊಯ್ತು ಇಲ್ಲಿ ವಿಧಿಯಾಟವೆ ಮೇಲಾಯ್ತು.!

ಆಶಿಶ್‌ ಸರಡ್ಕ ಅವರು ಈ ಹಿಂದೆ ಸೋಶಿಯಲ್‌ ಮೀಡಿಯಾದಲ್ಲಿ ಹೇಳಿದ್ದೇನು?

Leave a Reply

Your email address will not be published. Required fields are marked *

Optimized by Optimole
error: Content is protected !!