“ಅಬಕಾರಿ ಸನ್ನದು” : ಅಬಕಾರಿ ಆದಾಯ ಹೆಚ್ಚಿಸಲು ಸರ್ಕಾರದ ಹೊಸ ಪ್ಲಾನ್; ಚಿಲ್ಲರೆ ಮದ್ಯ ಅಂಗಡಿ, ಬಾರ್ ಆ್ಯಂಡ್ ರೆಸ್ಟೋರೆಂಟ್ಗೆ ಲೈಸನ್ಸ್ ಹರಾಜು?
news.ashwasurya.in
ಅಶ್ವಸೂರ್ಯ/ಬೆಂಗಳೂರು :ಈಗಾಗಲೇ ಪೆಂಡಿಂಗ್ ಇರುವಂತಹ ಲೈಸನ್ಸ್ ಗಳನ್ನು ಹರಾಜು ಮೂಲಕ ವಿತರಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿದೆ. ಸುಮಾರು 579 ಲೈಸನ್ಸ್ ಹಂಚಿಕೆ ಹರಾಜಿಗೆ ಅಬಕಾರಿ ಇಲಾಖೆ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.
ಅಬಕಾರಿ ಆದಾಯವನ್ನು ಹೆಚ್ಚಿಸಲು ಸರ್ಕಾರ ಹೊಸ ಹೊಸ ಪ್ಲಾನ್ ಮಾಡಿದೆ. ಲೈಸೆನ್ಸ್ ಹರಾಜು ಮಾಡಲು ಮುಂದಾಗಿದೆ. 1992ರ ಬಳಿಕ ಮೊದಲ ಬಾರಿಗೆ ಹೊಸ ಲೈಸೆನ್ಸ್ ನೀಡಲು ಮುಂದಾಗಿದೇಯಾ.? ಅಬಕಾರಿ ಇಲಾಖೆ ಎನ್ನುವ ಪ್ರಶ್ನೆ ಮೂಡಿದೆ. ನಿಷ್ಕ್ರಿಯ CL-2 (ಚಿಲ್ಲರೆ ಮದ್ಯ ಅಂಗಡಿ) ಮತ್ತು CL-9 (ಬಾರ್ ಮತ್ತು ರೆಸ್ಟೋರೆಂಟ್) ಪರವಾನಿಗೆ ನೀಡಲು ಸರ್ಕಾರ ಪ್ಲಾನ್ ಮಾಡಿದೆ ಎನ್ನಲಾಗ್ತಿದೆ.
ರಿನಿವಲ್ ಆಗದೆ ಉಳಿದಿದೆ ನೂರಾರು ಲೈಸೆನ್ಸ್
ಬಳಸದೇ ಇರುವ CL-11(C) ಪರವಾನಗಿಗಳನ್ನ ಹರಾಜು ಮೂಲಕ ನೀಡಲು ಸರ್ಕಾರ ಮುಂದಾಗಿದೆ ಎಂದು ತಿಳಿದು ಬಂದಿದೆ. ಪರವಾನಿಗೆದಾರರು ಸತ್ತಿರುವ ಪ್ರಕರಣ ಹಾಗೂ ರಿನಿವಲ್ ಮಾಡದೇ ಇರುವ ಕಾರಣದಿಂದ ನೂರಾರು ಲೈಸೆನ್ಸ್ ಬಾಕಿ ಉಳಿದಿದೆ ಎಂದು ಹೇಳಲಾಗುತ್ತಿದೆ.
579 ಲೈಸನ್ಸ್ ಹಂಚಿಕೆ
ಪೆಂಡಿಂಗ್ ಇರುವ ಲೈಸನ್ಸ್‌ಗಳನ್ನ ಹರಾಜು ಮೂಲಕ ವಿತರಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ ಎನ್ನಲಾಗ್ತಿದೆ. ಸುಮಾರು 579 ಲೈಸನ್ಸ್ ಹಂಚಿಕೆ ಹರಾಜಿಗೆ ಅಬಕಾರಿ ಇಲಾಖೆ ಈಗಾಗಲೇ ಚಿಂತನೆ ನಡೆಸಿದೆಯಂತೆ. ಈ ಸಂಬಂಧ ನಿಷ್ಕ್ರಿಯ ಮದ್ಯ ಪರವಾನಗಿಗಳನ್ನು ಹರಾಜು ಮಾಡಲು ಕರಡು ತಯಾರಿಸಿರೋ ಸರ್ಕಾರ, ಇ ಹರಾಜಿನ ಮೂಲಕ ಲೈಸೆನ್ಸ್ ವಿತರಣೆ ಮಾಡಲಿದೆ.
3 ಕೋಟಿಗೆ ಹರಾಜ್ ಆಗುತ್ತಾ? :

ಪ್ರತಿ ಲೈಸನ್ಸ್ 3 ಕೋಟಿಗೆ ಹರಾಜಾಗುವ ನಿರೀಕ್ಷೆ ಇದೆ ಎನ್ನಲಾಗ್ತಿದೆ. ಹರಾಜಿನ ಮೂಲಕವೇ ಸುಮಾರು 500 ಕೋಟಿಗೂ ಹೆಚ್ಚು ಆದಾಯ ಬರುವ ನಿರೀಕ್ಷೆಯಲ್ಲಿ ಸರ್ಕಾರವಿದೆ ಎಂದು ಅಂದಾಜಿಸಲಾಗಿದೆ.! ಹರಾಜು ಯಶಸ್ವಿಯಾದ್ರೆ ಸರ್ಕಾರಕ್ಕೆ ನೂರಾರು ಕೋಟಿ ಆದಾಯ ಹರಿದು ಬರಲಿದೆ.
ಮದ್ಯದಂಗಡಿಯ ಉಳಿಕೆ ಲೈಸೆನ್ಸ್ ಹರಾಜು ಬಗ್ಗೆ ಮಾತಾಡಿದ ಸಚಿವ ಆರ್ ಬಿ ತಿಮ್ಮಾಪುರ, ಡ್ರಾಪ್ಟ್ಗೆ ಈಗಾಗಲೇ ಸಹಿ ಆಗಿದೆ. ಮೀಸಲಾತಿ ಅನ್ವಯ ಮಾಡಿಕೊಂಡು ಹರಾಜು ಮಾಡುವ ಚಿಂತನೆ ನಡೆಸಿದ್ದು. ಈ ಬಗ್ಗೆ ಸಿಎ ಜೊತೆ ಚರ್ಚೆ ಮಾಡುವುದಾಗಿ ಹೇಳಿದ್ದಾರೆ.
ಉಳಿಕೆ ಲೈಸೆನ್ಸ್ ಮಾತ್ರ ಕೊಡ್ತಿದ್ದೇವೆ
ಉಳ್ಳುವವರಿಗೆ ಇದುವರೆಗೂ ಲೈಸೆನ್ಸ್ ಸಿಗ್ತಿದೆ. ಹೀಗಾಗಿ ಮೀಸಲಾತಿ ಜಾರಿ ಮಾಡಬೇಕು. ಉಳಿಕೆ ಲೈಸೆನ್ಸ್ ಮಾತ್ರ ಕೊಡ್ತಿದ್ದೇವೆ. ಹೊಸ ಲೈಸೆನ್ಸ್ ಯಾವುದೂ ಕೊಡ್ತಿಲ್ಲ ಎಂದು ಆರ್ ಬಿ ತಿಮ್ಮಾಪುರ ಅವರು ಸ್ಪಷ್ಟನೆ ನೀಡಿದ್ದಾರೆ.


