ಶಿವಮೊಗ್ಗ : ಶಿವಮೊಗ್ಗ ನಗರದ ಪ್ರತಿಷ್ಠಿತ ಸರ್ಎಂವಿ ಮತ್ತು ಸರ್ಎಂವಿ ಅಕಾಡೆಮಿ ಸಹಯೋಗದ ಶ್ರೀ ವಿದ್ಯಾಭಾರತಿ ಪಿಯು ಕಾಲೇಜ್ ವಿದ್ಯಾರ್ಥಿಗಳ ಹೆಮ್ಮೆಯ ಸಾಧನೆ.


news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗ ನಗರದ ಪ್ರತಿಷ್ಠಿತ ಪಿಯು ಕಾಲೇಜುಗಳಾದ ಸರ್ಎಂವಿ ಪಿಯು ಕಾಲೇಜ್ ಮತ್ತು ಶ್ರೀ ವಿದ್ಯಾಭಾರತಿ ಪಿಯು ಕಾಲೇಜ್ಗಳ ಈ ಸಾಲಿನ ವಿದ್ಯಾರ್ಥಿಗಳು ಕಾಲೇಜಿನ ಪ್ರತಿಷ್ಠಿತೆಯನ್ನು ಮತ್ತಷ್ಟು ಬಲಗೊಳಿಸಿದ್ದಾರೆ, 2025ರ ಜೆಇಇ (ಮೇನ್) ಪರೀಕ್ಷೆಯಲ್ಲಿ ಗಣನೀಯ ಸಾಧನೆ ಮಾಡಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಈ ಬಾರಿ ಎರಡು ಕಾಲೇಜಿನ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅರ್ಹತೆ ಪಡೆಯುವುದ ರೊಂದಿಗೆ IIT ಮತ್ತು NIT ಗಳಿಗೆ ಪ್ರವೇಶ ಪಡೆದಿದ್ದಾರೆ. IIT ಧಾರವಾಡ ದಲ್ಲಿ ಪ್ರವೇಶ ಪಡೆದವರು ಐಶ್ವರ್ಯಾ ಪಟೇಲ್ ಹಾಗೂ ಶ್ರೀರಾಮ್ ಸಾಚಿತ್ ಹಾಗೂ NIT ಸುರತ್ಕಲ್ನಲ್ಲಿ ಪ್ರವೇಶ ಪಡೆದವರು ಪ್ರದ್ಯುತ್ ನಾಡಿಗ್, ಯಶಸ್ ಎಸ್ ಹಾಗೂ ಸ್ತುತಿ ಶೋಭಿತ.
ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಆಧಾರದ ಮೇಲೆ ವಿವಿಧ ಶಾಖೆಗಳಲ್ಲಿ ಪ್ರವೇಶ ಪಡೆದಿದ್ದು , ಅವರ ಈ ಸಾಧನೆ ಕಾಲೇಜ್ ಮತ್ತು ಪೋಷಕರ ವರ್ಗ ಹೆಮ್ಮೆಪಡುವಂತೆ ಮಾಡಿದೆ.

ಸ್ಥಳೀಯ ಶಿಕ್ಷಣಗಳ ವಲಯದಲ್ಲಿ ಈ ಸಾಧನೆ ಮಹತ್ತರವಾದದ್ದು ಮತ್ತು ವಿದ್ಯಾರ್ಥಿಗಳ ಪರಿಶ್ರಮ ಮತ್ತು ಶಿಕ್ಷಕರ ಮಾರ್ಗದರ್ಶನ ದಿಂದಲೇ ಈ ಯಶಸ್ಸು ಸಾಧ್ಯವಾಗಿದೆ ಎಂದು ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿಗಳ ಪೋಷಕರು ಹೆಮ್ಮೆಯಿಂದ ಹೇಳಿದ್ದಾರೆ.
ಪ್ರತಿ ಬಾರಿಯು ಸರ್ಎಂವಿ ಮತ್ತು ಸರ್ಎಂವಿ ಅಕಾಡೆಮಿ ಸಹಯೋಗದ ಶ್ರೀ ವಿದ್ಯಾಭಾರತಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ನುರಿತ ಉಪನ್ಯಾಸಕರ ಭೋದನೆ ಮತ್ತು ವಿದ್ಯಾರ್ಥಿಗಳ ಕಠಿಣ ಪರಿಶ್ರಮದಿಂದ ಪ್ರತಿ ವಿಭಾಗದಲ್ಲು ಶ್ರೇಷ್ಠ ಫಲಿತಾಂಶ ದೊಂದಿಗೆ ಸರ್ಎಂವಿ ಪಿಯು ಕಾಲೇಜ್ ಮತ್ತು ಸರ್ಎಂವಿ ಅಕಾಡೆಮಿಯ ಸಹಯೋಗದ ಶ್ರೀ ವಿದ್ಯಾಭಾರತಿ ಪಿಯು ಕಾಲೇಜುಗಳಿಗೆ ಕೀರ್ತಿ ತಂದಿದ್ದಾರೆ.
ಈ ಬಾರಿಯ ವಿದ್ಯಾರ್ಥಿಗಳ ಸಾಧನೆಯನ್ನು ಮೆಚ್ಚಿ ಕಾಲೇಜಿನ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ವರ್ಗ ಸಾಧನೆ ಗೈದ ವಿಧ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.


