BREAKING: ಪೊಲೀಸರ ಗುಂಡೇಟಿಗೆ ಅಮೆರಿಕದಲ್ಲಿ ಭಾರತೀಯ ಟೆಕ್ಕಿ ಬಲಿ, ಮೃತದೇಹ ತರಲು ಕೇಂದ್ರದ ಸಹಾಯ ಕೋರಿದ ಕುಟುಂಬ.!
news.ashwasurya.in
ಅಶ್ವಸೂರ್ಯ/ತೆಲಂಗಾಣ : ತೆಲಂಗಾಣದ ಮೆಹಬೂಬ್ ನಗರದ 29 ವರ್ಷದ ಟೆಕ್ಕಿಯೊಬ್ಬ ತನ್ನ ರೂಮ್ ಮೇಟ್‌ನೊಂದಿಗೆ ನಡೆದ ಜಗಳಕ್ಕೆ ಸಂಬಂಧಿಸಿದಂತೆ ಅಮೆರಿಕದಲ್ಲಿ ಪೊಲೀಸರು ಗುಂಡು ಹಾರಿಸಿ ಕೊಂದಿದ್ದಾರೆ ಎಂದು ವರದಿಯಾಗಿದೆ.! ಎಂದು ಅವರ ಕುಟುಂಬ ಗುರುವಾರ ತಿಳಿಸಿದೆ.
ಕ್ಯಾಲಿಫೋರ್ನಿಯಾದ ಸಾಂಟಾ ಕ್ಲಾರಾದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಮೊಹಮ್ಮದ್ ನಿಜಾಮುದ್ದೀನ್ ಅವರನ್ನು ಸೆಪ್ಟೆಂಬರ್ 3 ರಂದು ಸಾಂಟಾ ಕ್ಲಾರಾ ಪೊಲೀಸರು ಗುಂಡಿಟ್ಟು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ.
ಅಮೇರಿಕಾ ಪೊಲೀಸರ ಗುಂಡಿಗೆ ಬಲಿಯಾದ ಮೊಹಮ್ಮದ್ ನಿಜಾಮುದ್ದೀನ್.

ನಿಜಾಮುದ್ದೀನ್ ತಂದೆ ಹಸ್ನುದ್ದೀನ್ ಪ್ರಕಾರ, ರೂಮ್ ಮೇಟ್ ನೊಂದಿಗಿನ ಘರ್ಷಣೆಯು ಒಂದು ಸಣ್ಣ ವಿಷಯಕ್ಕೆ ಸಂಬಂಧಿಸಿದ್ದಾಗಿತ್ತು. ಗುರುವಾರ ಬೆಳಿಗ್ಗೆಯಷ್ಟೇ ಗುಂಡಿನ ದಾಳಿಯ ಬಗ್ಗೆ ತನಗೆ ತಿಳಿಸಲಾಯಿತು ಎಂದು ಅವರು ಹೇಳಿದರು. ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಬರೆದ ಪತ್ರದಲ್ಲಿ, ಹಸ್ನುದ್ದೀನ್ ತಮ್ಮ ಮಗನ ಶವವನ್ನು ಮೆಹಬೂಬ್ ನಗರಕ್ಕೆ ತರಲು ಸಹಾಯವನ್ನು ಕೋರಿದ್ದಾರೆ. “ಪೊಲೀಸರು ಅವನನ್ನು ಗುಂಡಿಕ್ಕಿ ಕೊಂದಿದ್ದಕ್ಕೆ ನಿಜವಾದ ಕಾರಣಗಳು ನನಗೆ ತಿಳಿದಿಲ್ಲ” ಎಂದು ಅವರು ವಾಷಿಂಗ್ಟನ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ಅಧಿಕಾರಿಗಳಿಂದ ತುರ್ತು ಸಹಾಯವನ್ನು ಕೋರುತ್ತಾ ಪತ್ರ ಬರೆದಿದ್ದಾರೆ.


