ಚಿತ್ರದುರ್ಗ:ಇಂದು ಕೋಟೆ ನಾಡು ದುರ್ಗದಲ್ಲಿ ಹಿಂದೂ ಮಹಾಗಣಪತಿ ಶೋಭಾಯಾತ್ರೆ , ಸಂಪೂರ್ಣ ಕೆಸರಿಮಯವಾಗಿದೆ ನಗರ.!.
ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಶೋಭಾಯಾತ್ರೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು, ನಾಡಿನ ವಿವಿಧ ಕಲಾ ತಂಡಗಳು ಹಿಂದೂ ಮಹಾಗಣಪತಿಯ ರಾಜಬೀದಿ ಉತ್ಸವವನ್ನು ಮೆರುಗು ಗೋಳಿಸಲಿದೆ.ಎಂದಿನಂತೆ
ಹಿಂದೂ ಮಹಾಗಣಪನ ವಿಸರ್ಜನಾ ಶೋಭಾಯಾತ್ರೆಗೆ ಕೋಟೆ ನಾಡು ಚಿತ್ರದುರ್ಗ ನಗರ ಸಂಪೂರ್ಣವಾಗಿ ಕೇಸರಿಮಯವಾಗಿದೆ. ಮದಕರಿ ನಾಯಕ ಪ್ರತಿಮೆ ಹಿಂಭಾಗದಲ್ಲಿ ಭಾರತಾಂಭೆಯ ಪುತ್ಥಳಿ ನಿಲ್ಲಿಸಿ, ತ್ರಿವರ್ಣದ ವಸ್ತ್ರಗಳಲ್ಲಿ ಅಲಂಕರಿಸಲಾಗಿದ್ದು ಭಾರತಾಂಬೆಯ ಪುತ್ಥಳಿಯ ಹಿಂದೆ ತ್ರಿವರ್ಣ ಧ್ವಜವನ್ನು ಇರಿಸಲಾಗಿದೆ. ಮದಕರಿ ನಾಯಕರ ಪ್ರತಿಮೆಯ ಮುಂಭಾಗದಲ್ಲಿ ಆಕಾಶ್ ಹೆಸರಿನ ವಿಮಾನ ಸೇರಿದಂತೆ ವಿವಿಧ ಯುದ್ಧ ವಿಮಾನಗಳನ್ನು ಸ್ಥಾಪಿಸಿ ಅಲಂಕರಿಸಲಾಗಿದ್ದು ಲಕ್ಷಾಂತರ ಜನರನ್ನು ಆಕರ್ಷಿಸುತ್ತಿದೆ….

news.ashwasurya.in
ಅಶ್ವಸೂರ್ಯ/ಚಿತ್ರದುರ್ಗ : ರಾಷ್ಟ್ರದ ಅದ್ದೂರಿ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಒಂದಾದ ಅದರಲ್ಲೂ ರಾಜ್ಯದಲ್ಲೇ ಅತಿ ಹೆಚ್ಚು ಭಕ್ತರು ಭಾಗವಹಿಸುವ ರಾಜ್ಯ ಮತ್ತು ರಾಷ್ಟ್ರದ ಗಮನಸೆಳೆದಿರುವ ಕೋಟೆನಾಡು ಚಿತ್ರದುರ್ಗದಲ್ಲಿ ವಿಶ್ವ ಹಿಂದೂ ಪರಿಷತ್, ಭಜರಂಗದಳ ಸ್ಥಾಪಿಸಿರುವ ಹಿಂದೂ ಮಹಾಗಣಪತಿ ಉತ್ಸವದ ಶೋಭಾಯಾತ್ರೆ ಇಂದು (ಸೆ.13) ರ ಶನಿವಾರ ನಡೆಯಲಿದ್ದು, ಶೋಭಾಯಾತ್ರೆಗೆ ಕ್ಷಣಗಣನೆ ಆರಂಭವಾಗಿದೆ.
ಶೋಭಾಯಾತ್ರೆ ಅಂಗವಾಗಿ ಸಂಪೂರ್ಣ ನಗರವೆ ಬಣ್ಣ ಬಣ್ಣಗಳ ಕಲಾಕೃತಿಗಳಿಂದ ಚಿತ್ತಾರಗೊಂಡಿದೆ.ಅದರಲ್ಲೂ ಪ್ರಮುಖವಾಗಿ ಚಳ್ಳಕೆರೆ ರಸ್ತೆಯಿಂದ ಹೊಳಲ್ಕೆರೆ ರಸ್ತೆಯ ಕನಕ ವೃತ್ತದವರೆಗೂ ವಿವಿಧ ವರ್ಣಗಳಲ್ಲಿ ಕಲಾಕೃತಿಯೊಂದಿಗೆ ಕಂಗೊಳಿಸುತ್ತಿದ್ದು ಜೋತೆಗೆ ವೈವಿಧ್ಯಮಯ ವಿದ್ಯುದ್ದೀಪಾಲಂಕಾರ ನಗರವನ್ನೆ ಮದುವಣಗಿತ್ತಿಯಂತೆ ಕಂಗೊಳಿಸುತ್ತಿದೆ.ಇಲ್ಲಿಯ ಕಲಾಕೃತಿಗಳು ದೀಪಾ ಅಲಂಕಾರಗಳು ಸಾಂಸ್ಕೃತಿಕ ನಗರಿ ಮೈಸೂರು ದಸರಾವನ್ನೇ ನೆನಪು ಮಾಡುವಂತಿದ್ದು,ಸಾರ್ವಜನಿಕರನ್ನು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಶೋಭಾಯಾತ್ರೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು, ನಾಡಿನ ವಿವಿಧ ಕಲಾ ತಂಡಗಳು ಹಿಂದೂ ಮಹಾಗಣಪತಿಯ ರಾಜಬೀದಿ ಉತ್ಸವವನ್ನು ಮೆರುಗು ಗೋಳಿಸಲಿದೆ.ಎಂದಿನಂತೆ
ಹಿಂದೂ ಮಹಾಗಣಪನ ವಿಸರ್ಜನಾ ಶೋಭಾಯಾತ್ರೆಗೆ ಕೋಟೆ ನಾಡು ಚಿತ್ರದುರ್ಗ ನಗರ ಸಂಪೂರ್ಣವಾಗಿ ಕೇಸರಿಮಯವಾಗಿದೆ. ಮದಕರಿ ನಾಯಕ ಪ್ರತಿಮೆ ಹಿಂಭಾಗದಲ್ಲಿ ಭಾರತಾಂಭೆಯ ಪುತ್ಥಳಿ ನಿಲ್ಲಿಸಿ, ತ್ರಿವರ್ಣದ ವಸ್ತ್ರಗಳಲ್ಲಿ ಅಲಂಕರಿಸಲಾಗಿದ್ದು ಭಾರತಾಂಬೆಯ ಪುತ್ಥಳಿಯ ಹಿಂದೆ ತ್ರಿವರ್ಣ ಧ್ವಜವನ್ನು ಇರಿಸಲಾಗಿದೆ. ಮದಕರಿ ನಾಯಕರ ಪ್ರತಿಮೆಯ ಮುಂಭಾಗದಲ್ಲಿ ಆಕಾಶ್ ಹೆಸರಿನ ವಿಮಾನ ಸೇರಿದಂತೆ ವಿವಿಧ ಯುದ್ಧ ವಿಮಾನಗಳನ್ನು ಸ್ಥಾಪಿಸಿ ಅಲಂಕರಿಸಲಾಗಿದ್ದು ಲಕ್ಷಾಂತರ ಜನರನ್ನು ಆಕರ್ಷಿಸುತ್ತಿದೆ.
ಕಳೆದ ನಾಲ್ಕೈದು ದಿನದಿಂದ ಹಿಂದೂ ಮಹಾಗಣಪತಿಯ ವಿಸರ್ಜನಾ ಕಾರ್ಯಕ್ರಮಕ್ಕೆ ನಗರದಲ್ಲಿ ಅಲಂಕಾರ ಕಾರ್ಯಗಳು ನಡೆಯಿತಿದೆ. ಸಂಜೆ ಯಾಗುತ್ತಿದ್ದಂತೆ ನೋಡುಗರ ಸಂಖ್ಯೆ ಹೆಚ್ಚಾಗಿದೆ. ಅಷ್ಟೇ ಅಲ್ಲದೇ ವೀರವನಿತೆ ಒನಕೆ ಓಬವ್ವ ವೃತ್ತ, ವಾಸವಿ ವೃತ್ತ, ಮಹಾತ್ಮ ಗಾಂಧಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಕನಕ ವೃತ್ತಗಳಲ್ಲಿನ ವಿಶೇಷ ಅಲಂಕಾರಗಳು ಜನರನ್ನು ತನ್ನತ್ತ ಸೆಳೆಯುವಂತೆ ಮಾಡಿದೆ.ಬಣ್ಣ ಬಣ್ಣದ ದೀಪಾ ಅಲಂಕಾರದಿಂದ ನಗರದ ಪ್ರಮುಖ ವೃತ್ತಗಳು, ಅಂಗಡಿ ಮುಂಗಟ್ಟುಗಳು ಝಗಮಗಿಸುತ್ತಿವೆ.
ಶೋಭಾಯಾತ್ರೆ ಸಾಗುವ ಮಾರ್ಗದುದ್ದಕ್ಕೂ ‘ಓಂ’ ಚಿನ್ಹೆಯುಳ್ಳ, ‘ವೀರಾಂಜನೇಯಸ್ವಾಮಿ’ ಭಾವಚಿತ್ರ ಇರುವ ಬೃಹತ್ ಗಾತ್ರದ ಧ್ವಜಗಳನ್ನು ಕಟ್ಟಲಾಗಿದೆ. ಇದಲ್ಲದೇ ಯಾತ್ರೆಗೆ ಶುಭಾಶಯ ಕೋರುವ ಬ್ಯಾನರ್, ಬಂಟಿಗ್ಸ್ಗಳು, ಗಣ್ಯರ, ರಾಜಕೀಯ ಮುಖಂಡರ ಆಳೆತ್ತರದ ಕಟೌಟ್ಗಳು ರಾರಾಜಿಸುತ್ತಿವೆ.
ಶೋಭಾಯಾತ್ರೆಗೆ ಕ್ಷಣಗಣನೆ ಆರಂಭವಾಗಿದ್ದು ಜೈನಧಾಮದ ಬಳಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿಗೆ ಇಂದು (ಸೆ,13) ಶನಿವಾರ ಬೆಳಗ್ಗೆ 10 ಗಂಟೆಗೆ ಮಹಾಮಂಗಳಾರತಿ ಪೂಜೆ ನೆರವೇರಿಸುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡುವುದರೊಂದಿಗೆ ಹಿಂದೂ ಮಹಾಗಣಪತಿಯ ರಾಜಬೀದಿ ಉತ್ಸವ ಸಾಗಲಿದೆ.. ಇದೇ ವೇಳೆ ವಿವಿಧ ಮಾದರಿಯ ಹೂವಿನ ಹಾರಗಳ ಹರಾಜು ಪ್ರಕ್ರಿಯೆ ನಡೆಯಲಿದೆ. ವಿವಿಧ ಮಠಾಧೀಶರು, ಜನಪ್ರತಿನಿಧಿಗಳು, ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಪ್ರಮುಖರು ಭಾಗವಹಿಸಲಿದ್ದಾರೆ.
ಉಪಾಹಾರ ವ್ಯವಸ್ಥೆ : ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಲಕ್ಷಾಂತರ ಭಕ್ತರಿಗೆ ಊಟ, ಉಪಾಹಾರ, ನೀರು ಉಚಿತ ವ್ಯವಸ್ಥೆ ಮಾಡಲು ಹಲವು ಸಂಘಟನೆಗಳು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದಾರೆ. ಶೋಭಾಯಾತ್ರೆ ಸಾಗುವ ಮಾರ್ಗ ಮಧ್ಯೆ ಪಲಾವ್, ಪುಳಿಯೊಗರೆ, ಚಿತ್ರನ್ನ, ಮೊಸರನ್ನ, ನೀರು, ಮಜ್ಜಿಗೆ ವಿತರಣಾ ಕಾರ್ಯ ನಡೆಯಲಿದೆ. ಬಾಣಸಿಗರು ಸೆ.12ರ ಶುಕ್ರವಾರ ರಾತ್ರಿಯಿಂದಲೇ ಅಡುಗೆ ತಯಾರಿಸಲು ಮುಂದಾಗಿದ್ದಾರೆ.
ಅದ್ದೂರಿ ಹಿಂದು ಮಹಾಗಣಪತಿಯ ಶೋಭಾಯಾತ್ರೆ ಮೆರವಣಿಗೆಯ ನೇರಪ್ರಸಾರವನ್ನು ಸಾಮಾಜಿಕ ಜಾಲತಾಣದ ಫೇಸ್ಬುಕ್, ವಾಟ್ಸ್ಆಪ್ ಸೇರಿದಂತೆ ವಿವಿಧ ಜಾಲತಾಣಗಳಲ್ಲೂ ಪ್ರಸಾರವಾಗಲಿದೆ. ನಗರದೊಳಗೆ ಭಾರೀ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿದೆ. ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.

ಕಟ್ಟುನಿಟ್ಟಿನ ರಕ್ಷಣಾ ವ್ಯವಸ್ಥೆ :
ನಿಮ್ಮ ಹಣ,ಮೊಬೈಲ್, ಸರಗಳ್ಳರ ಬಗ್ಗೆ ಎಚ್ಚರ ಇರಲಿ, ಸರಗಳ್ಳರು, ಜೇಬುಗಳ್ಳರು, ಮೊಬೈಲ್ ಕಳ್ಳರು ಮೊದಲಾದ ದುಷ್ಕರ್ಮಿಗಳ ಪತ್ತೆಗೆ ವಿವಿಧ ಜಿಲ್ಲೆಗಳಿಂದ ಅಪರಾಧ ಪತ್ತೆ ವಿಭಾಗದ ಪೊಲೀಸರು ಈಗಾಗಲೇ ಕೋಟೆ ನಾಡಲ್ಲಿ ಬಂದಿಳಿದಿದ್ದು. ಹದ್ದಿನ ಕಣ್ಣಿಡಲಿದ್ದಾರೆ. ಆದರೂ ಜನರು ತಮ್ಮ ಬೆಲೆ ಬಾಳುವ ವಸ್ತುಗಳ ಕುರಿತು ಎಚ್ಚರ ವಹಿಸುವಂತೆ ಪೊಲೀಸ್ ಇಲಾಖೆ ಪದೆ ಪದೆ ಹೇಳುತ್ತಲೆ ಇದೆ.
ಹಿಂದೂ ಮಹಾಗಣಪತಿಯ ವಿಸರ್ಜನಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದ ಬಹುತೇಕ ಏರಿಯಾಗಳಲ್ಲಿ ವ್ಯಾಪಾರ-ವಹಿವಾಟು ಇಂದು ಸ್ತಬ್ಧವಾಗಲಿದೆ. ತರಕಾರಿ, ಹಣ್ಣು, ಹೂವಿನ ಮಾರುಕಟ್ಟೆ ಕೂಡ ಇದಕ್ಕೆ ಹೊರತಾಗಿಲ್ಲ. ಗಾಂಧಿ ವೃತ್ತ, ಸಂತೆ ಹೊಂಡ, ಮೆದೇಹಳ್ಳಿ ರಸ್ತೆ ಬಳಿ ಹೆಚ್ಚು ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ.
ಮಹಾಗಣಪತಿ ವಿಸರ್ಜನೆಯ ಅಂಗವಾಗಿ ಇಂದು (ಸೆ.13) ಶೋಭಾಯಾತ್ರೆ ನಡೆಯಲಿದ್ದು ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. 4 ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆಯಿರುವ ಕಾರಣ ಪೊಲೀಸರು ನಗರದಾದ್ಯಂತ ಬಂದೋಬಸ್ತ್ ಏರ್ಪಡಿಸುತ್ತಿದ್ದಾರೆ. ಶೋಭಾಯಾತ್ರೆ ಅಂಗವಾಗಿ ನಗರಕ್ಕೆ ರಾಜ್ಯದ ವಿವಿಧೆಡೆಯಿಂದ ಪೊಲೀಸ್ ಸಿಬ್ಬಂದಿ ಬಂದಿಳಿದಿದ್ದಾರೆ. ನಗರದಲ್ಲಿ ನಡೆಯುವ ಪ್ರತಿ ಚಟುವಟಿಕೆಯ ಮೇಲೂ ಪೊಲೀಸರು ಎಚ್ಚರ ವಹಿಸಲಿದ್ದಾರೆ. ಪ್ರತಿ ರಸ್ತೆಯಲ್ಲೂ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದ್ದು ಹದ್ದಿನ ಕಣ್ಣಿಡಲಾಗಿದೆ.


