ಶಿವಮೊಗ್ಗ : ತುಂಗಾನಗರ ಪೊಲೀಸ್ ಠಾಣಾ ಸರಹದ್ದಿನ ಇಂದಿರಾ ನಗರ ವೀರಕೇಸರಿ ಯುವ ಗಣೇಶನ ಅದ್ದೂರಿ ವಿಸರ್ಜನಾ ಮೆರವಣಿಗೆ : ತಾಜುದ್ದೀನ್ ಅಶುರ್ ಖಾನ್ ಕಮಿಟಿಯಿಂದ ಗಣೇಶನಿಗೆ “ಪುಷ್ಪಮಾಲೆ ಸಮರ್ಪಣೆ”.

news.ashwasurya.in
ಅಶ್ವಸೂರ್ಯ/ಶಿವಮೊಗ್ಗ ; ದಿನಾಂಕ 10. 09.2025 ರಂದು ತುಂಗಾನಗರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ವೀರ ಕೇಸರಿ ಯುವಪಡೆ ಇಂದಿರಾನಗರ ಇವರ ಆಶ್ರಯದಲ್ಲಿ ಪ್ರತಿಷ್ಠಾಪಿಸಿದ ಗಣಪತಿ ಮೆರವಣಿಗೆಯನ್ನು ಹಮ್ಮಿಕೊಳ್ಳಾಲಾಗಿತ್ತು. ಶ್ರೀ ಗಣೇಶನ ಅದ್ದೂರಿ ರಾಜಬೀದಿ ಉತ್ಸವದ ಸಂಧರ್ಭದಲ್ಲಿ ಇಂದಿರಾನಗರದ ತಾಜುದ್ದೀನ್ ಅಶುರ್ ಖಾನ್ ಕಮಿಟಿಯ ಅಧ್ಯಕ್ಷರಾದ ಶ್ರೀ ಸಿಖ್ಬಾತ್, ಪದಾಧಿಕಾರಿಗಳಾದ ಅಮ್ಜದ್, ರಫೀಕ್ ಪಟೇಲ್, ಇರ್ಫಾನ್, ಆಟೋ ಅಸ್ಲಾಂ, ಮುನ್ನ, ಇರ್ಫಾಜ್,ಸಲೀಂ ಮತ್ತು ಗ್ರಾಮಸ್ಥರು ಗಣಪತಿ ಮೂರ್ತಿಗೆ ಪುಷ್ಪಮಾಲೆಯನ್ನು ಅರ್ಪಿಸುವುದರ ಮೂಲಕ ಸೌಹಾರ್ದತೆಯನ್ನು ಮೆರೆದಿದ್ದಾರೆ.

ಸಂಘದ ಎಲ್ಲಾ ಪದಾಧಿಕಾರಿಗಳಿಗೆ ಮತ್ತು ಇಂದಿರಾನಗರ ಗ್ರಾಮಸ್ಥರಿಗೆ ಹಬ್ಬದ ಶುಭಾಶಯಗಳು ತಿಳಿಸಿ ಸೌಹಾರ್ದತೆಯನ್ನು ಮೆರೆದಿರುವ ಇವರಿಗೆ ಗ್ರಾಮಸ್ಥರು ಗಣೇಶನ ಸಮೀತಿಯ ಸದಸ್ಯರು ಸಂತೋಷ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಗಣಪತಿ ಕಮಿಟಿಯ ಎಲ್ಲಾ ಸದಸ್ಯರು ಮತ್ತು ಗ್ರಾಮಸ್ಥರು ಹಾಗು ತುಂಗಾನಗರ ಪೋಲಿಸ್ ಠಾಣಾ ಅಧಿಕಾರಿ ಗುರುರಾಜ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ಗಣೇಶನ ವಿಸರ್ಜನಾ ಕಾರ್ಯಕ್ರಮವನ್ನು ಯಾವುದೇ ತೊಂದರೆ ಆಗದಂತೆ ನೋಡಿಕೊಂಡಿದ್ದಾರೆ.

